ಮದ್ಯ ಸೇವನೆಗೆ ಹಣ ನೀಡದ ಕಾರಣಕ್ಕೆ ತಂದೆಯ ಮೇಲೆ ಮಗ ಮಾರಣಾಂತಿಕ ಹಲ್ಲೆ ಮಾಡಿದ್ದು, ಹಲ್ಲೆಗೊಳಗಾಗಿದ್ದ ತಂದೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ನಡೆದಿದೆ.
ಮದಬಾವಿ ಗ್ರಾಮದ ಮಲ್ಲು ತುಕಾರಾಮ ವನಖಂಡೆ(89) ಮೃತ ವ್ಯಕ್ತಿ. ಅವರನ್ನು ಮಗ ಬಾಳಾಸಾಬ ಮಲ್ಲು ವನಖಂಡೆ ಎಂಬಾತ ಹಲ್ಲೆ ಮಾಡಿದ್ದ. ಬಳಿಕ ಮಹಾರಾಷ್ಟ್ರದ ಮೀರಜ್ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಂದೆ ಮೃತ ಪಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕಿತ್ತೂರು ಉತ್ಸವ; ವೇದಿಕೆಯಲ್ಲೇ ಭಜನಾ ಕಲಾವಿದ ಹೃದಯಾಘಾತದಿಂದ ನಿಧನ
ಕೊಲೆ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.