ಚಿತ್ರದುರ್ಗ | ಮಾದಿಗ ಸಮುದಾಯದ ಆಸ್ತಿ ಅತಿಕ್ರಮಣ; ಹಕ್ಕುಪತ್ರ ನೀಡುವಂತೆ ಆಗ್ರಹ

Date:

Advertisements

ಅನ್ಯ ಸಮುದಾಯದವರು ಮಾದಿಗ ಸಮುದಾಯದ ಆಸ್ತಿ ಅತಿಕ್ರಮಣ ಮಾಡಿದ್ದು, ಮಾದಿಗರ ಆಸ್ತಿಯನ್ನು ಮಾದಿಗರಿಗಾಗಿ ಮೀಸಲಿಡಬೇಕು. ಮಾದಿಗರ ಭೂಮಿಯ ಹಕ್ಕುಪತ್ರಗಳನ್ನು ಕೂಡಲೇ ಕೊಡಬೇಕು ಎಂದು ಒತ್ತಾಯಿಸಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ನಗರಸಭೆ ಆವರಣದಲ್ಲಿ ಕಳೆದ ಎರಡು ದಿನಗಳಿಂದ ಮಾದಿಗ ಸಮಾಜದವರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಈ ವೇಳೆ ಮುಖಂಡ ಹಳೆನಗರದ ಜಯಣ್ಣ ಮಾತನಾಡಿ, “ನಮ್ಮ ಪೂರ್ವಜರು ಸಮಾಜದ ಏಳಿಗೆಗಾಗಿ ಚಳ್ಳಕೆರೆ ನಗರದಲ್ಲಿ ನಿರ್ಮಿಸಿದ ಚರ್ಮ ಹದಮಾಡುವ ಕೈಗಾರಿಕೆ ಹಾಗೂ ಚರ್ಮ ಮಾರಾಟ ಮಾಡುವ ಮಳಿಗೆಯನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅತಿಕ್ರಮಣ ಮಾಡುತ್ತಿದ್ದರೂ ಚಳ್ಳಕೆರೆ ನಗರಸಭೆ ಇದರ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರುತ್ತಿರುವುದು ಸೋಜಿಗದ ಸಂಗತಿ. ಅಲ್ಲದೆ ಚಿತ್ರದುರ್ಗ ರಸ್ತೆಯಲ್ಲಿರುವ ಬಾಬೂ ಜಗಜೀವನರಾಂ ಭವನ ಹಾಗೂ ಗಾಂಧಿನಗರದಲ್ಲಿರುವ ಪುರಸಭಾ ಕಲ್ಯಾಣ ಮಂಟಪಕ್ಕೆ, ಚಳ್ಳಕೆರೆ ನಗರಸಭೆ ಇದೇ ರೀತಿ ದ್ವಿ-ಮುಖ ನೀತಿಯನ್ನು ಅನುಸರಿಸುತ್ತಿರುವುದು ನಗರಸಭೆಯ ಆಡಳಿತ ಮಾದಿಗ ಸಮಾಜದ ಪರ ಎಂತಹ ನಿಲುವಾಗಿದೆಯೆಂದು ತಾವೇ ಯೋಚಿಸಬೇಕು. ಈಗಾಗಲೇ ಚರ್ಮ ಕೈಗಾರಿಕೆ ಮಳಿಗೆಯನ್ನು ಅನ್ಯ ಧರ್ಮಿಯರ ಸಂಘಟನೆ ವ್ಯಾಪ್ತಿಗೆ ಒಳಪಡಿಸುತ್ತಿರುವ ಹುನ್ನಾರ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ರೀತಿ ಮಾದಿಗ ಸಮಾಜದ ಬೆಲೆ ಬಾಳುವ ಆಸ್ತಿಯನ್ನು ಅತಿಕ್ರಮಣ ಮಾಡುತ್ತಿರುವುದು ನಗರಸಭೆಯ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ನಿರ್ಲಕ್ಷ್ಯ ತೋರುತ್ತಿರುವುದು, ಅತಿಕ್ರಮಣದಾರರಿಗೆ ಕುಮ್ಮಕ್ಕು ನೀಡುತ್ತಿರುವ ಅನುಮಾನ ಮೂಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ತಾಲೂಕಿನ ಸಮಸ್ತ ಮಾದಿಗ ಸಮಾಜದ ಬೆಲೆಬಾಳುವ ಆಸ್ತಿಯನ್ನು ಅತಿಕ್ರಮಣ ಮಾಡುವಂತಹ ಈ ಕಾನೂನು ಬಾಹಿರ ಕೆಲಸದ ವಿರುದ್ದ ಪ್ರತಿಯೊಬ್ಬ ಪ್ರಜ್ಞಾವಂತ ಮಾದಿಗ ಬಂಧುಗಳು ಈ ಅನ್ಯಾಯದ ವಿರುದ್ಧ ಪ್ರತಿಭಟಿಸಲೇಬೇಕಾದ ಅನಿವಾರ್ಯತೆ ಇದೆ. ಮಾದಿಗ ಸಮಾಜದ ಆಸ್ತಿಯ ಉಳಿವಿಗಾಗಿ ಅನಿರ್ಧಿಷ್ಟ ಕಾಲ ಧರಣಿ ಸತ್ಯಾಗ್ರಹ ಹಾಗೂ ಪ್ರತಿಭಟನೆಯಲ್ಲಿ ತಾಲೂಕಿನ ಪ್ರತಿಯೊಬ್ಬ ಮಾದಿಗರೂ ಭಾಗವಹಿಸಬೇಕು” ಎಂದು ಕರೆ ನೀಡಿದರು.

Advertisements

ಮಾದಿಗ ಮಹಾಸಭಾ ಅಧ್ಯಕ್ಷ ಎಂ ಶಿವಮೂರ್ತಿ ಮಾತನಾಡಿ, “ಮೂರು ತಲೆಮಾರಿನ ಹಿಂದೆ ನಮ್ಮ ಹಿರಿಯರು ಮಕ್ಕಳ ಭವಿಷ್ಯದ ದೂರದೃಷ್ಟಿಯಿಂದ ಚಳ್ಳಕೆರೆ ನಗರದಲ್ಲಿ ಆದಿಕರ್ನಾಟಕ ಹಾಸ್ಟೆಲ್ ಜಾಗ, ಚರ್ಮ ಕೈಗಾರಿಕಾ ಕುಶಲಕರ್ಮಿ ಭೂಮಿ, ಚರ್ಮ ಕೈಗಾರಿಕಾ ಮಳಿಗೆಗಳೆಂದು ಮೂರು ಕಡೆ ಭೂಮಿಯನ್ನು ಅಂದಿನ ಸರ್ಕಾರದಿಂದ ಮಾದಿಗ ಜನಾಂಗಕ್ಕೆ ಕೊಡುಗೆಯಾಗಿ ಪಡೆದಿದ್ದರು. ಆದರೆ ಅದು ಅತಿಕ್ರಮಣವಾಗುತ್ತಿದೆ. ಅಂದು ನೀಡಿದ ಭೂಮಿಯ ಕಡತಗಳು ಇಂದು ಇಲಾಖೆಯಲ್ಲಿ ಕೊಡಲು ಆದೇಶವಾಗಬೇಕು” ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಅ.29,30: ಕಲ್ಯಾಣ ಕರ್ನಾಟಕದ ಬಯಲಾಟ ಪರಂಪರೆ ಕುರಿತು ವಿಚಾರ ಸಂಕಿರಣ; ಬಯಲಾಟ ಪ್ರದರ್ಶನ

ಈ ಸಂಧರ್ಭದಲ್ಲಿ ಮಾದಿಗ ಮಹಾಸಭಾದ ಇಂದ್ರೇಶ್, ಸೂರನಹಳ್ಳಿ ಶ್ರೀನಿವಾಸ್, ಚೆನ್ನಿಗರಾಮಯ್ಯ, ಕೃಷ್ಣಮೂರ್ತಿ, ಪಾಪಣ್ಣ ಜಯಣ್ಣ, ಮಾದಿಗ ದಂಡೋರದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಚೆನ್ನಾಗನಹಳ್ಳಿ ಮಲ್ಲೇಶ್, ತಿಪ್ಪೇಸ್ವಾಮಿ, ಮಂಜುನಾಥ್, ವೆಂಕಟೇಶ್, ಚೆನ್ನಕೇಶವ ಮೂರ್ತಿ, ನಾಗರಾಜ್, ಅಂಜಿನಪ್ಪ, ಶಿವಮೂರ್ತಿ, ಗಾಂಧಿನಗರದ ಯುವಮುಖಂಡ ಎಲ್ ಸಿದ್ದು, ಚಿರಂಜೀವಿ ಮನು ದೊರೆ, ಇತರ ಹಲವು ಸಮಾಜದ ಮುಖಂಡರು, ಮಾದಿಗ ಸಮಾಜದ ಹಿರಿಯ ರಾಜಕಾರಣಿಗಳು, ನಿವೃತ್ತ ನೌಕರರು, ಕಲಾವಿದರು, ಎನ್‌ಜಿಒ ಸಂಘಟನೆಗಳು, ಮಹಿಳಾ ಮತ್ತು ದಲಿತ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X