ಗುರುಮಠಕಲ್ ತಾಲೂಕಿನ ಕೊಂಕಲ್ ವಲಯದ ವಂಕಸಂಬರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಅಥ್ಲೆಟಿಕ್ಸ್‌ನಲ್ಲಿ ಯಾದಗಿರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಶಾಲೆ ವತಿಯಿಂದ ಅಭಿನಂದನೆ ಸಲ್ಲಿಸಿದ್ದಾರೆ.
ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು. ಇದೀಗ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ಗುರುಮಠಕಲ್ ತಾಲೂಕಿನ ಮಕ್ಕಳು ಬಾಲಕರ ವಿಭಾಗದಲ್ಲಿ ನರೇಶ್ ಬಿ ಉದ್ದ ಜಿಗಿತ ಪ್ರಥಮ ಮತ್ತು ಬಾಲಕಿಯರ ವಿಭಾಗದಲ್ಲಿ ಬನ್ನಮ್ಮ ಬಿ 100 ಮೀಟರ್ ಓಟ ಹಾಗೂ ಉದ್ದಜಿಗಿತ ದ್ವಿತೀಯ ಸ್ಥಾನಗಳಲ್ಲಿ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ಒಳಮೀಸಲಾತಿ ಜಾರಿಗೆ ದಸಂಸ ಒತ್ತಾಯ
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಂಕಸಂಬರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಪಟುಗಳಿಗೆ ಶಾಲೆಯ ಸಿಬ್ಬಂದಿ, ಎಸ್‌ಡಿಎಂಸಿ ಸಮಿತಿ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದಿಂದ ಗೌರವದ ಅಭಿನಂದನೆ ತಿಳಿಸಿದರು.
ಈ ವೇಳೆ ಮುಖ್ಯಶಿಕ್ಷಕ ಶ್ರೀ ಜಗನ್ನಾಥ್, ಶಿಕ್ಷಕರಾದ ಭೀಮಪ್ಪ, ನಾರಾಯಣ, ತಿಪ್ಪಣ್ಣ, ಅಶೋಕ, ಸುಶ್ಮಿತಾ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ, ಎಸ್‌ಡಿಎಂಸಿ ಸದಸ್ಯರು ಹಾಗೂ ಹಳೇ ವಿದ್ಯಾರ್ಥಿಗಳು ಇದ್ದರು.