ಗುಬ್ಬಿ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ನಿರ್ದೇಶಕರ ಆಯ್ಕೆ ಪ್ರಕ್ರಿಯೆಗೆ ನಡೆದ ಚುನಾವಣೆಯಲ್ಲಿ 10 ಮಂದಿ ನಿರ್ದೇಶಕರ ಆಯ್ಕೆ ಸುಸೂತ್ರವಾಗಿ ನಡೆಯಿತು.
ಗುಬ್ಬಿ ತಾಲ್ಲೂಕಿನ ಸರ್ಕಾರಿ ನೌಕರರ ಸಂಘದ ಒಟ್ಟು 33 ನಿರ್ದೇಶಕರ ಪೈಕಿ 10 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಉಳಿದ 23 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದಾರೆ.
ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆದ ಮತದಾನ ಪ್ರಕ್ರಿಯೆ ನಂತರ ಮತ ಎಣಿಕೆ ಕಾರ್ಯ ನಡೆಯಿತು. ಎಲ್ಲಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿಯಾಗಿ ನಿವೃತ್ತ ಡಿಡಿಪಿಐ ಎಚ್.ಕೆ.ನರಸಿಂಹಮೂರ್ತಿ ನಡೆಸಿಕೊಟ್ಟರು.
ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಎಚ್.ಸಿ.ಯತೀಶ್, ಆರೋಗ್ಯ ಇಲಾಖೆಯಿಂದ ಎನ್.ನಾಗರಾಜು, ಪ್ರೌಢಶಾಲಾ ಇಲಾಖೆಯಿಂದ ಆರ್.ಬೀರೇಂದ್ರ ಹಾಗೂ ರವೀಶ್, ಗ್ರಾಮಾಭಿವೃದ್ದಿ ಇಲಾಖೆಯಿಂದ ತಿಮ್ಮರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಲಕ್ಷ್ಮೀಕಾಂತ್, ಪ್ರಾಥಮಿಕ ಶಾಲಾ ಶಿಕ್ಷಣ ಕ್ಷೇತ್ರದಿಂದ ಪದ್ಮಾವತಿ, ಚನ್ನಬಸವಯ್ಯ, ಚನ್ನಬಸವಾರಾಧ್ಯ, ರಾಮಚಂದ್ರ ಆಯ್ಕೆಯಾಗಿದ್ದಾರೆ.