ಮಡಿಕೇರಿ | ನ.3ರಂದು ಚೆಟ್ಟಳ್ಳಿಯಲ್ಲಿ ಪತ್ರಕರ್ತರ ಫುಟ್ಬಾಲ್ ಪಂದ್ಯಾವಳಿ

Date:

Advertisements

ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಇದೇ ಮೊದಲ ಬಾರಿಗೆ ಜಿಲ್ಲಾಮಟ್ಟದ ಪತ್ರಕರ್ತರ ಪುಟ್ಬಾಲ್ ಪಂದ್ಯಾವಳಿಯು ನವೆಂಬರ್ 03 ರಂದು ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ‌ ಎಂದು ಕ್ರೀಡಾಕೂಟದ ಸಂಚಾಲಕರಾದ ಪ್ರೆಸ್ ಕ್ಲಬ್ ನಿರ್ದೇಶಕರಾಗಿರುವ ಇಸ್ಮಾಯಿಲ್ ಕಂಡಕರೆ ಹಾಗೂ ವಿನೋದ್ ಕೆ.ಎಂ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡಗು ಪ್ರೆಸ್ ಕ್ಲಬ್ ಫುಟ್ಬಾಲ್ ಪಂದ್ಯಾವಳಿಯು ಲೀಗ್ ಮಾದರಿಯಲ್ಲಿ ನಡೆಯಲಿದ್ದು,ಸೂಪರ್ ಸೆವೆನ್ಸ್ ಮಾದರಿಯ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಾಲ್ಕು ತಂಡಗಳ ಭಾಗವಹಿಸಲಿದೆ ಎಂದು ತಿಳಿಸಿದ್ದಾರೆ.

ಗೋಪಾಲ್ ಸೋಮಯ್ಯ ನಾಯಕತ್ವದ ಮೀಡಿಯಾ ಯುನೈಟೆಡ್ ತಂಡದಲ್ಲಿ, ರೆಜಿತ್ ಕುಮಾರ್ ಗುಹ್ಯ, ವಿವಿ ಅರುಣ್ ಕುಮಾರ್, ಕುಡೆಕಲ್ ಸಂತೋಷ್, ಶಶಿಕುಮಾರ್ ರೈ, ಅಬ್ದುಲ್ಲಾ, ಎಚ್.ಸಿ ಜಯಪ್ರಕಾಶ್, ಕೆ.ಬಿ ಶಂಶುದ್ದೀನ್, ವಿಶ್ವ ಕುಂಬೂರು,ದುರ್ಗ ಪ್ರಸಾದ್, ಚಂದನ್ ನಂದರಬೆಟ್ಟು ಮತ್ತು ರವಿಕುಮಾರ್ ಸ್ಥಾನ ಪಡೆದಿದ್ದಾರೆ.

Advertisements

ಸುರ್ಜಿತ್ ನಾಯಕತ್ವದ ರಾಕ್ ಸ್ಟಾರ್ ತಂಡದಲ್ಲಿ ಸುಬ್ರಮಣಿ ಸಿದ್ದಾಪುರ, ಮಂಜು ಸುವರ್ಣ, ಮುಸ್ತಫಾ ಸಿದ್ದಾಪುರ, ಮನು, ರಿಜ್ವಾನ್ ಹುಸೇನ್, ಲೋಕೇಶ್ ಕಾಟಕೇರಿ, ಕಿಶೋರ್ ನಾಚಪ್ಪ, ಅಂತೋಣಿ, ಚೇತನ್, ಮಹಮ್ಮದ್ ಮುಸ್ತಫಾ ಸ್ಥಾನ ಪಡೆದಿದ್ದಾರೆ.

ವಿಜಯ್ ರಾಯ್ ನಾಯಕತ್ವದ ಟೀಮ್ ಫೀನಿಕ್ಸ್ ಹಂಟರ್ ತಂಡದಲ್ಲಿ ನವೀನ್ ಡಿಸೋಜಾ, ಶಿವರಾಜ್, ಪ್ರೇಮ್ ಕುಮಾರ್,ಪುತ್ತಂ ಪ್ರದೀಪ್, ಗಣೇಶ್ ಕುಡೆಕಲ್, ಸಂತೋಷ್ ರೈ, ದಿವಾಕರ್, ಕಿಶೋರ್ ಕುಮಾರ್ ಶೆಟ್ಟಿ, ಕಿರಣ್ ರಾಜ್ ಹಾಗೂ ಹನೀಫ್ ಕೊಡ್ಲಿಪೇಟೆ ಆಡಲಿದ್ದಾರೆ.

WhatsApp Image 2024 10 29 at 2.34.37 PM 1

ಇಸ್ಮಾಯಿಲ್ ಕಂಡಕರೆ ನಾಯಕತ್ವದ ಮಾಸ್ಟರ್ ಎಫ್.ಸಿ ತಂಡದಲ್ಲಿ, ಎಂ‌.ಕೆ ಆದರ್ಶ್, ವಿನೋದ್ ಕೆ.ಎಂ, ಅಜ್ಜಮಾಡ ರಮೇಶ್ ಕುಟ್ಟಪ್ಪ, ಸವಿತಾ ರೈ,ಬೊಳ್ಳಜಿರ ಬಿ‌.ಅಯ್ಯಪ್ಪ, ಶಿವು ಕಾಂತರಾಜ್, ಸವಾದ್ ಉಸ್ಮಾನ್,ಟಿ.ಆರ್ ಪ್ರಭುದೇವ್, ಉದಿಯಂಡ ಜಯಂತಿ, ಹಾಗೂ ಎನ್.ಎನ್ ದಿನೇಶ್ ಸ್ಥಾನ ಪಡೆದಿದ್ದಾರೆ.

ಬಹುಮಾನಗಳ ವಿವರ:

ಕೊಡಗು ಪ್ರೆಸ್ ಕ್ಲಬ್ ಫುಟ್ಬಾಲ್ ಪಂದ್ಯಾವಳಿಯ ಚಾಂಪಿಯನ್ ತಂಡಕ್ಕೆ ಕೆನೇಡಿಯನ್ ಮಾದರಿಯ ಆಕರ್ಷಕ ಟ್ರೋಫಿ ನೀಡಲಾಗುತ್ತದೆ. ಅದಲ್ಲದೇ, ಚಾಂಪಿಯನ್ ತಂಡದ ನಾಯಕನಿಗೆ ವೈಯಕ್ತಿಕವಾಗಿ ₹1,500 ರೂ ನಗದು ಬಹುಮಾನ ಮತ್ತು ಎಲ್ಲಾ ಆಟಗಾರರಿಗೆ ತಲಾ ಸಾವಿರ ರೂ ನೀಡಲಾಗುವುದು.

ರನ್ನರ್ಸ್ ಪ್ರಶಸ್ತಿ ವಿಜೇತ ತಂಡಕ್ಕೆ ಕೆನೇಡಿಯನ್ ಮಾದರಿಯ ಆಕರ್ಷಕ ಟ್ರೋಫಿಯೊಂದಿಗೆ ತಂಡಕ ನಾಯಕನಿಗೆ ವೈಯಕ್ತಿಕವಾಗಿ ₹1000 ರೂ ಹಾಗೂ ತಂಡದ ಎಲ್ಲಾ ಆಟಗಾರರಿಗೆ ತಲಾ ₹500 ರೂ ಬಹುಮಾನ ನೀಡಲಾಗುವುದು.

ತೃತೀಯ ಮತ್ತು ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೂ ಕೂಡ ಟ್ರೋಫಿ ನೀಡಲಾಗುತ್ತದೆ. ಅದಲ್ಲದೇ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುವ ಎಲ್ಲಾ ಆಟಗಾರರಿಗೆ ಟ್ರೋಫಿ ನೀಡಿ ಗೌರವಿಸಲಾಗುವುದು.

ಬೆಸ್ಟ್ ಪ್ಲೇಯರ್ ಆಫ್ ದಿ-ಟೂರ್ನಮೆಂಟ್,ಟಾಪ್ ಸ್ಕೋರರ್, ಬೆಸ್ಟ್ ಗೋಲ್ ಕೀಪರ್, ಬೆಸ್ಟ್ ಡಿಫೆಂಡರ್, ಬೆಸ್ಟ್ ಮಹಿಳಾ ಆಟಗಾರ್ತಿ, ಬೆಸ್ಟ್ ಎಮರ್ಜಿಂಗ್ ಪ್ಲೇಯರ್, ಫೈನಲ್ ಹಿರೋ ಆಫ್-ದಿ‌ ಮ್ಯಾಚ್ ಹಾಗೂ ಲೀಗ್ ಮಾದರಿಯ ಎಲ್ಲಾ ಪಂದ್ಯದಲ್ಲಿ ಹಿರೋ-ಆಫ್ ದಿ ಮ್ಯಾಚ್ ಪ್ರಶಸ್ತಿ ನೀಡಲಾಗುತ್ತದೆ ಎಂದು ಕೊಡಗು ಪ್ರೆಸ್ ಕ್ಲಬ್ ಫುಟ್ಬಾಲ್ ಪಂದ್ಯಾವಳಿಯ ಸಂಚಾಲಕರಾದ ಇಸ್ಮಾಯಿಲ್ ಕಂಡಕರೆ ಹಾಗೂ ವಿನೋದ್ ಕೆ.ಎಂ ಮಾಹಿತಿ ನೀಡಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X