ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ವಾರದ ಸಂತೆಯಲ್ಲಿ ನಕಲಿ ನೋಟು ಜಾಲ ಪತ್ತೆಯಾಗಿದೆ.
ಶಿರಗುಪ್ಪಿ ಗ್ರಾಮದ ವಾರದ ಸಂತೆಯಲ್ಲಿ ರಾಯಭಾಗ ತಾಲೂಕಿನ ನಸಲಾಪುರ ಗ್ರಾಮದ ಜ್ಯೋತಿ ಪ್ರಭು ತೋರಸೆ (37) ತರಕಾರಿ ತೆಗೆದುಕೊಳ್ಳುವ ನೆಪದಲ್ಲಿ 500 ಬೆಲೆಯ ನಕಲಿ ನೋಟು ನೀಡುತ್ತಿರುವಾಗ ಅನುಮಾನಗೊ ಸ್ಥಳೀಯರು ಆರೋಪಿಯನ್ನು ಹಿಡಿದು ವಿಚಾರಣೆ ಮಾಡಿದಾಗ ನಕಲಿ ನೋಟನ್ನು ಚಲಾಯಿಸುತ್ತಿರುವುದು ಬೆಳಕಿಗೆ ಬಂದಿದೆ.
ಇದನ್ನು ಓದಿದ್ದೀರಾ? ಅರಕಲಗೂಡು | ವೈದ್ಯಾಧಿಕಾರಿ ಡಾ. ಸ್ವಾಮಿಗೌಡ ಬಂಧಿಸಲು ಜನಪರ ಚಳುವಳಿಗಳ ಒಕ್ಕೂಟ ಆಗ್ರಹ
ಮಹಾರಾಷ್ಟ್ರ ಮೂಲದ ವ್ಯಕ್ತಿಯಿಂದ ಕಮಿಷನ್ ಆಧಾರದ ಮೇಲೆ ನಕಲಿ ನೋಟು ಪಡೆದಿರುವುದಾಗಿ ಒಪ್ಪಿಕೊಂಡಿದ್ದು, ಪ್ರತಿ ವಾರದ ಸಂತೆಗಳಲ್ಲಿ ಇದೆ ರೀತಿ ನಕಲಿ ನೋಟು ನೀಡಿ ಅಸಲಿ ಚಿಲ್ಲರೆ ಹಣ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿರುವುದಾಗಿ ತಿಳಿದುಬಂದಿದೆ.
