ಬೀದರ್‌ | ಉತ್ತಮ ಪುಸ್ತಕಗಳು ಮನುಷ್ಯನ ನಿಜವಾದ ಸಂಗಾತಿಗಳು : ಕುಲಪತಿ ಬಿ.ಎಸ್.ಬಿರಾದಾರ್

Date:

Advertisements

ಪುಸ್ತಕಗಳು ಜ್ಞಾನದ ದಿಗಂತವನ್ನು ವಿಸ್ತರಿಸುತ್ತವೆ. ತನ್ಮಯತೆಯಿಂದ ಪುಸ್ತಕ ಓದಿದರೆ ಮಾನವನಿಗೆ ವಿಶ್ವಮಾನವನ್ನಾಗಿಸುತ್ತವೆ. ಉತ್ತಮ ಪುಸ್ತಕಗಳು ಮನುಷ್ಯನ ನಿಜವಾದ ಸಂಗಾತಿಗಳು ಎಂದು ಬೀದರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ ನುಡಿದರು.

ಮಂಗಳವಾರ ಬೀದರ ವಿಶ್ವವಿದ್ಯಾಲಯದಲ್ಲಿ ಇದಾರ-ಎ-ಅದಬ್-ಎ-ಇಸ್ಲಾಮಿ-ಹಿಂದ್ ಕರ್ನಾಟಕ ಘಟಕದ ವತಿಯಿಂದ ಪ್ರಕಟವಾದ ಮೊಹಮ್ಮದ್ ಯುಸೂಫ್ ರಹೀಂ ಬಿದರಿ ಅವರ ವಿರಚಿತ ‌ʼತಂಜ್ಹಿಮ್ ಸಾಝಿʼ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ʼಇಂದಿನ ಆಧುನಿಕ ಯುಗದಲ್ಲಿ ಪುಸ್ತಕಗಳ ಅಧ್ಯಯನದ ಅವಶ್ಯಕತೆಯಿದೆ. ತಂಜ್ಹಿಮ್ ಸಾಝಿ ಕೃತಿಯು ಒಂದು ಸಂಘಟನೆಯ ರಚನೆಯಾಗಿದೆ. ಸಂಘಟನೆ ಮಾಡಬೇಕಾದ ಕೆಲಸ ಹಾಗೂ ಅದರ ಸಾಮಾಜಿಕ ಜವಾಬ್ದಾರಿ, ಕುರಾನ್, ಹದೀಸ್ ಹಾಗೂ ಪ್ರವಾದಿ ಪೈಗಂಬರ್‌ ಅವರ ತತ್ವ ನಿಲುವಿನ ಬಗ್ಗೆ ಈ ಕೃತಿ ತಿಳಿಸುತ್ತದೆʼ ಎಂದರು.

Advertisements

ʼಕೃತಿಯ ಲೇಖಕ ಮೊಹಮದ್ ಯುಸೂಫ್ ರಹೀಂ ಬಿದರಿ ಅವರು ಗಹನವಾದ ಅಧ್ಯಯನ ನಡೆಸಿ ಪ್ರಸಕ್ತ ಸಮಯದಲ್ಲಿ ಸಾಹಿತ್ಯ ಹಾಗೂ ಸಂಘಟನೆ ಕಟ್ಟವ ರೀತಿ ಕೃತಿಯಲ್ಲಿ ಹಿಡಿದಿಟ್ಟಿದ್ದಾರೆ. ಇದು ಕೇವಲ ಒಂದು ಭಾಷೆ, ಧರ್ಮ, ಮತ, ಪಂಥಕ್ಕೆ ಸೀಮಿತವಾಗಿರದೆ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಸಂಘಟನೆಗಳ ಕಾರ್ಯವೈಖರಿ ಬಗ್ಗೆ ತಿಳಿಸುತ್ತದೆʼ ಎಂದರು.

ಈ ಸುದ್ದಿ ಓದಿದ್ದೀರಾ? ತೆಲಂಗಾಣ | ಮಗ ಮೃತಪಟ್ಟಿರುವುದು ತಿಳಿಯದೆ 4 ದಿನ ಶವದೊಂದಿಗೆ ಕಳೆದ ಅಂಧ ದಂಪತಿ!

ಕಾರ್ಯಕ್ರಮದಲ್ಲಿ ಇದಾರ-ಎ-ಅದಬ್-ಎ-ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ರಾಜ್ಯಾಧ್ಯಕ್ಷ ಫಯಾಜ್ ಖುರೇಶಿ, ಇದಾರ-ಎ-ಅದಬ್-ಎ-ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ಕಾರ್ಯದರ್ಶಿ ಅಬ್ದುಲ್ ಖದೀರ್, ಲೇಖಕರು ಹಾಗೂ ಇದಾರ-ಎ-ಅದಬ್-ಎ-ಇಸ್ಲಾಮಿ ಹಿಂದ್ ಕರ್ನಾಟಕ ಘಟಕದ ಉಪಾಧ್ಯಕ್ಷ ಮೊಹಮದ್ ಯುಸುಫ್ ರಹೀಂ ಬಿದರಿ, ಜಮಾಅತೆ ಇಸ್ಲಾಮಿ ಹಿಂದ್ ಬೀದರ ನಗರ ಘಟಕದ ಅಧ್ಯಕ್ಷಮೊಹಮ್ಮದ್ ಮುಅಜ್ಜಮ್, ಇದಾರ-ಎ-ಅದಬ್-ಎ-ಇಸ್ಲಾಮಿ ಹಿಂದ್ ಬೀದರ ಘಟಕದ ಕಾರ್ಯದರ್ಶಿ ಅಸ್ಲಂ ಪಾಷಾ ಖಾದ್ರಿ, ಕರ್ನಾಟಕ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಹಾಗೂ ಟೀಮ್ ಯುವಾ ಸಂಸ್ಥೆ ಸಂಯೋಜಕ ವಿನಯಕುಮಾರ ಮಾಳಗೆ, ಟೀಮ್ ಯುವಾ ಸಂಸ್ಥೆಯ ಹರ್ಷವರ್ಧನ್ ರಾಠೋಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X