ಕೊಡಗಿನಲ್ಲಿ ಪ್ರಾಬಲ್ಯತೆ ಹೊಂದಿರುವ ಕೊಡವ ಸಮಾಜವು ತಮ್ಮ ಸಮುದಾಯದ ಜನಸಂಖ್ಯೆ ಕ್ಷೀಣಿಸುತ್ತಿದೆ ಎಂದು ಭಾವಿಸಿದೆ. ಕೊಡವ ಸಮುದಾಯದ ಜನಸಂಖ್ಯೆಯನ್ನು ಹೆಚ್ಚಿಲು ಸಮುದಾಯದ ದಂಪತಿಗಳು ನಾಲ್ಕು ಮಕ್ಕಳನ್ನು ಹೆರಬೇಕೆಂದು ಹೇಳಿದೆ. ನಾಲ್ಕು ಮಕ್ಕಳನ್ನು ಹೆತ್ತವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿಯೂ ಕೊಡವ ಸಮಾಜ ಘೋಷಿಸಿದೆ ಎಂದು ವರದಿಯಾಗಿದೆ.
ಕೊಡಗಿನಲ್ಲಿ ವಿಶಿಷ್ಟ ಸಂಪ್ರದಾಯವನ್ನು ಪಾಲಿಸುವವರಲ್ಲಿ ಕೊಡವರು ಪ್ರಮುಖರು. ಕೊಡವ ಸಂಸ್ಕೃತಿ, ಪರಂಪರೆಯನ್ನು ಉಳಿಸಬೇಕು. ಕೊಡಗಿನಲ್ಲಿ ಕೊಡವರೇ ಹೆಚ್ಚಿನ ಸಂಖ್ಯೆಯಲ್ಲಿರಬೇಕೆಂದು ಪೊನ್ನಂಪೇಟೆ ತಾಲ್ಲೂಕಿನ ಟಿ ಶೆಟ್ಟಿಗೇರಿ ಕೊಡವ ಸಮಾಜ ಭಾವಿಸಿದೆ. ಅದಕ್ಕಾಗಿ, ಹೆಚ್ಚು ಮಕ್ಕಳನ್ನು ಹೊಂದುವ ಪೋಷಕರಿಗೆ 25,000 ರೂ.ಗಳಿಂದ 1 ಲಕ್ಷ ರೂ.ವರೆಗೆ ಬಹುಮಾನ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ನಿರುದ್ಯೋಗ, ಆರ್ಥಿಕ ಬಲವು ಕೊಡವ ಸಮುದಾಯವನ್ನೂ ಕಾಡುತ್ತಿದೆ. ಉದ್ಯೋಗ ಹರಸಿ ಕೊಡವ ಸಮುದಾಯದ ಯವಜನರು ಕೊಡಗು ತೊರೆಯುತ್ತಿದ್ದಾರೆ. ಇತರ ನಗರಗಳಲ್ಲಿ ನೆಲೆಯೂರುತ್ತಿದ್ದಾರೆ. ಹೀಗಾಗಿ, ತಮ್ಮ ಸಂಸ್ಕೃತಿ ಅವನತಿ ಹೊಂದುತ್ತಿದೆ ಎಂಬ ಆತಂಕವೂ ಸಮುದಾಯದಲ್ಲಿದೆ ಎಂದು ವರದಿಯಾಗಿದೆ.