ಬಿಜೆಪಿ ಸೋಲಿಗೆ ಪ್ರಮುಖ ಐದು ಕಾರಣಗಳಿವು

Date:

Advertisements
ಮುಸ್ಲಿಂ ವಿರೋಧಿ ಮತ್ತು ಹಿಂದುತ್ವವಾದವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದ ಬಿಜೆಪಿಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಭಾರೀ ರೋಡ್‌-ಶೋಗಳು, ಪ್ರಚಾರ ಭಾಷಣಗಳು ಕೈಹಿಡಿಯಲಿಲ್ಲ

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಗೆಲುವು ಕಂಡಿದೆ. ಆಡಳಿತಾರೂಢ ಬಿಜೆಪಿ ಹೀನಾಯ ಸೋಲು ಕಂಡಿದೆ. ಕರಾವಳಿ ಭಾಗಗಳನ್ನು ಹೊರತು ಪಡಿಸಿ ಮತ್ತೆಲ್ಲೂ ಕೇಸರಿ ಪ್ರಭಾವ ಬೀರಿಲ್ಲ. ಕರಾವಳಿ ಗೆಲುವನ್ನು ಸಂಭ್ರಮಿಸುವ ಮುಖವನ್ನೂ ಬಿಜೆಪಿ ಹೊಂದಿಲ್ಲ.

ರಾಜ್ಯದಲ್ಲಿ ಸೋಲನ್ನು ಒಪ್ಪಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಫಲಿತಾಂಶದ ದಿನ ಕಾಂಗ್ರೆಸ್‌ ಗೆಲುವಿಗೆ ಅಭಿನಂದನೆ ಸಲ್ಲಿಸಿದ್ದಾರೆ. “ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್‌ಗೆ ಅಭಿನಂದನೆಗಳು. ಜನರ ಆಶೋತ್ತರಗಳನ್ನು ಈಡೇರಿಕೆಗೆ ಅವರಿಗೆ ನನ್ನ ಶುಭಾಶಯಗಳು” ಎಂದು ಹೇಳಿದ್ದಾರೆ.

ಹಿಜಾಬ್, ಹಲಾಲ್, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಲವ್ ಜಿಹಾದ್, ಮುಸ್ಲಿಂ ಮೀಸಲಾತಿ, ಹಿಂದುತ್ವವಾದವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋದ ಬಿಜೆಪಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಭಾರೀ ರೋಡ್‌-ಶೋಗಳು, ಪ್ರಚಾರ ಭಾಷಣಗಳು ಕೈಹಿಡಿಯಲಿಲ್ಲ. ಉತ್ತರ ಕರ್ನಾಟಕದ ಬಹುಪಾಲನ್ನು ಬಿಜೆಪಿ ಕಳೆದುಕೊಂಡಿತು. ದಕ್ಷಿಣ ಮತ್ತು ಕರಾವಳಿಯ ಒಂದಷ್ಟು ಕ್ಷೇತ್ರಗಳನ್ನು ಉಳಿಸಿಕೊಂಡಿದೆ. ಆದರೂ, ದಕ್ಷಿಣದಲ್ಲಿಯೂ ಹಲವಾರು ಸ್ಥಾನಗಳನ್ನು ಕಳೆದುಕೊಂಡಿದೆ.

Advertisements

ಹಾಗಾದರೆ, ಕೇಸರಿ ಪಡೆಯ ಭದ್ರಕೋಟೆಯಾದ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷದ ಸೋಲಿಗೆ ಕಾರಣವಾದ ಅಂಶಗಳು ಯಾವುವು? ಬಿಜೆಪಿ ಈ ಮಟ್ಟದಲ್ಲಿ ಹೀನಾಯವಾಗಿ ಸೋತಿದ್ದು ಯಾಕಾಗಿ? ಕೆಲವು ಅಂಶಗಳು ಇಲ್ಲಿವೆ…

ಯಡಿಯೂರಪ್ಪರನ್ನು ಬದಿಗೊತ್ತಿದ ಬಿಜೆಪಿ

ಮಾಜಿ ಮುಖ್ಯಮಂತ್ರಿ ಮತ್ತು ರಾಜ್ಯದಲ್ಲಿ ಬಿಜೆಪಿ ಕಟ್ಟಿಬೆಳೆಸಿದವರಲ್ಲಿ ಒಬ್ಬರಾದ ಬಿಎಸ್ ಯಡಿಯೂರಪ್ಪ ಅವರು ಇಡೀ ಚುನಾವಣಾ ಪ್ರಚಾರದ ಸಮಯದಲ್ಲಿ ಪಕ್ಷದಿಂದ ದೂರ ಉಳಿದಿದ್ದರು. ನಾಲ್ಕು ಬಾರಿ ಸಿಎಂ ಆಗಿದ್ದ ಅವರು ಮಾಸ್ ಲೀಡರ್ ಆಗಿದ್ದಾರೆ. ಅವರು ರಾಜ್ಯದಲ್ಲಿ ಪ್ರಭಾವಿ ಲಿಂಗಾಯತ ಸಮುದಾಯ ಮತ್ತು ಒಬಿಸಿಗಳ ಭಾರಿ ಬೆಂಬಲವನ್ನು ಹೊಂದಿದ್ದಾರೆ. ಅವರನ್ನು ದೂರವಿಟ್ಟಿದ್ದು, ಆ ಸಮುದಾಯಗಳ ಮತಬ್ಯಾಂಕ್ಅನ್ನು ದೂರವಿಟ್ಟಂತೆ ಕಾಣುತ್ತಿದೆ.

ತನ್ನ ನಿರೂಪಣೆ ಇಲ್ಲದ ‘ಪ್ರತಿಕ್ರಿಯಾತ್ಮಕ’ ಅಭಿಯಾನ

ಕಾಂಗ್ರೆಸ್ ಸ್ಥಳೀಯ, ನಾಗರಿಕ ಸಮಸ್ಯೆಗಳ ಸುತ್ತ ತನ್ನ ಪ್ರಚಾರ ನಡೆಸಿತ್ತು. ಜೊತೆಗೆ, ಬಿಜೆಪಿ ಸರ್ಕಾರದ ಕಲ್ಯಾಣ ಯೋಜನೆಗಳ ಕಳಪೆ ಅನುಷ್ಠಾನದ ಬಗ್ಗೆ ಆಕ್ರಮಣಕಾರಿಯಾಗಿ ಪ್ರಚಾರ ಮಾಡಿತ್ತು. ಆದರೆ, ಬಿಜೆಪಿಯ ಪ್ರಚಾರವು ಕಾಂಗ್ರೆಸ್‌ನ ಆರೋಪಗಳಿಗೆ ಪ್ರತಿಕ್ರಿಯಾತ್ಮಕವಾಗಿತ್ತು.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರನ್ನು ‘ವಿಷ ಸರ್ಪ’ ಎಂದು ಟೀಕೆ ಮಾಡುವವರೆಗೆ ಹಾಗೂ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಬಗ್ಗೆ ಹೇಳುವವರೆಗೆ ಕೇಸರಿ ಪಡೆ ತನ್ನ ಚುನಾವಣಾ ಅಜೆಂಡಾವನ್ನೇ ಹೊಂದಿಸಿಕೊಂಡಿರಲಿಲ್ಲ. ಕೇವಲ, ಕಾಂಗ್ರೆಸ್‌ ಮಾಡುವ ಆರೋಪಗಳಿಗೆ ಪ್ರತಿಕ್ರಿಯೆ ನೀಡುವಲ್ಲಿ ಮತ್ತು ತನ್ನನ್ನು ಸಮರ್ಥಿಸಿಕೊಳ್ಳುವಲ್ಲಿ ನಿರತವಾಗಿತ್ತು.

ಭ್ರಷ್ಟಾಚಾರದ ಆರೋಪಗಳು

ಈ ಬಾರಿ ಕಾಂಗ್ರೆಸ್‌ ತನ್ನ ಚುನಾವಣಾ ವಿಷಯಗಳಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಆರೋಪಗಳನ್ನು ಪ್ರಮುಖವಾಗಿಸಿಕೊಂಡಿತ್ತು. ಈ ವಿಷಯದಲ್ಲಿ ಸರಿಯಾದ ಪ್ರತಿಪಾದನೆಯೊಂದಿಗೆ ಮತದಾರರನ್ನು ತಲುಪಿತು.

ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಗುರಿಯಾಗಿಸಿಕೊಂಡು ‘ಪೇ-ಸಿಎಂ’ ಪೋಸ್ಟರ್‌ಗಳನ್ನು ನಗರಗಳಾದ್ಯಂತ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಅಂಟಿಸಿದ್ದರು. ಜೊತೆಗೆ, ಸಾಮಾಜಿಕ ಮಾಧ್ಯಮದಲ್ಲಿಯೂ ಭಾರೀ ಟ್ರೋಲ್‌ ಮಾಡಿದರು.

PayCM

ಅಷ್ಟೇ ಅಲ್ಲ, ಬೊಮ್ಮಾಯಿ ಸರ್ಕಾರ ‘40% ಸರ್ಕಾರ’ ಎಂಬ ಅಭಿಯಾನವನ್ನೇ ಆರಂಭಿಸಿತು. ಸರ್ಕಾರದ ಯೋಜನೆಗಳ ಟೆಂಡರ್ ಮೊತ್ತದ 40%ಅನ್ನು ಬಿಜೆಪಿ ನಾಯಕರು ಮತ್ತು ಅಧಿಕಾರಿಗಳು ಲಂಚವಾಗಿ ತೆಗೆದುಕೊಳ್ಳುತ್ತಾರೆ ಎಂದು ಹೇಳುವ ಕರ್ನಾಟಕದ ಗುತ್ತಿಗೆದಾರರ ಸಂಘದ ಅಧ್ಯಕ್ಷರ ಆರೋಪಗಳನ್ನು ಪಕ್ಷವು ಮುನ್ನಲೆಗೆ ತಂದು, ಪ್ರಚಾರ ಮಾಡಿತು. ಈ ಆರೋಪಗಳನ್ನು ಸಮರ್ಥವಾಗಿ ಎದುರಿಸಲು ಬಿಜೆಪಿಗೆ ಸಾಧ್ಯವಾಗಲಿಲ್ಲ.

ಕಲ್ಯಾಣ ಯೋಜನೆಗಳ ಕಳಪೆ ಅನುಷ್ಠಾನ

ಪ್ರಬಲವಾದ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದ ಬಿಜೆಪಿಯ ಸೋಲಿಗೆ, ಕಲ್ಯಾಣ ಯೋಜನೆಗಳ ಕಳಪೆ ಅನುಷ್ಠಾನವೂ ಒಂದು ಕಾರಣ. ಯೋಜನೆಗಳು ಜನರನ್ನು ತಲುಪದ ಕಾರಣ, ಮತದಾರರು ಕೇಸರಿ ಪಕ್ಷದ ಬಗ್ಗೆ ಅಸಮಾಧಾನಗೊಂಡಿದ್ದರು.

ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ‘ಆಸ್ಪತ್ರೆ ಬೆಡ್‌ಗಳಿಗಾಗಿ ಹಣ, ಟೂಲ್‌ಕಿಟ್‌ ಹಗರಣ, ಪಿಎಸ್‌ಐ ಮತ್ತು ಶಿಕ್ಷಕರ ನೇಮಕಾತಿ ಹಗರಣ’ದಂತಹ ಹಲವಾರು ಹಗರಣಗಳು ಕಾಲಕಾಲಕ್ಕೆ ರಾಜ್ಯದಲ್ಲಿ ಸದ್ದು ಮಾಡಿದವು.

ಈ ಸುದ್ದಿ ಓದಿದ್ದೀರಾ?: ಅತ್ತ ಸಿಎಂ, ಇತ್ತ ಮಂತ್ರಿಗಿರಿ: ಪ್ರಭಾವಿಗಳ ಪಟ್ಟಿ ಬೆಳೆಯುತ್ತಲೇ ಇದೆ

ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮೂರು ಉಚಿತ ಅಡುಗೆ ಅನಿಲ ಸಿಲಿಂಡರ್‌ಗಳು, ಯುಪಿಎಸ್‌ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವವರಿಗೆ ಆರ್ಥಿಕ ಪ್ರೋತ್ಸಾಹದಂತಹ ಹಲವಾರು ಕಲ್ಯಾಣ ಯೋಜನೆಗಳ ಭರವಸೆ ನೀಡಿದ್ದರೂ ಸಹ, ತನ್ನ ಆಡಳಿತದ ವರದಿಯಲ್ಲಿ ಹೇಳಿಕೊಳ್ಳುವ ಅಥವಾ ಜನರು ನೆನಪಿಟ್ಟುಕೊಳ್ಳಬಹುದಾದ ಯಾವುದೇ ಯೋಜನೆಗಳು ಮತದಾರರ ಮುಂದಿರಲಿಲ್ಲ. ಬಿಜೆಪಿಯ ಮೂರೂವರೆ ವರ್ಷಗಳ ಆಡಳಿತವು ಕಳಪೆಯಾಗಿತ್ತು ಎಂಬುದು ಮತದಾರರ ಮನದಲ್ಲಿ ಬೇರೂರಿತ್ತು.

ಮೀಸಲಾತಿ ವಿಚಾರದಲ್ಲಿ ಗೊಂದಲ

ಒಳಮೀಸಲಾತಿ ಜಾರಿಗೆ ತರುವ ಮತ್ತು ವಿವಿಧ ಜಾತಿಗಳ ಕೋಟಾಗಳನ್ನು ಹೆಚ್ಚಿಸುವ ಬಿಜೆಪಿ ನಿರ್ಧಾರ ಬಿಜೆಪಿಗೆ ಹೆಚ್ಚಿನ ಲಾಭ ನೀಡಲಿಲ್ಲ. ಪಕ್ಷವು ರಾಜ್ಯದಲ್ಲಿ ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹೆಚ್ಚುವರಿಯಾಗಿ 2% ಮೀಸಲಾತಿ ಘೋಷಿಸಿತು. ಅಲ್ಲದೆ, ಮುಸ್ಲಿಮರ ಕೋಟಾವನ್ನು ರದ್ದುಗೊಳಿಸಿ, ಎಸ್‌ಟಿ ಮೀಸಲಾತಿಯನ್ನು 3%ನಿಂದ 5%ಗೆ ಮತ್ತು ಎಸ್‌ಸಿ ಮೀಸಲಾತಿಯನ್ನು 15%ನಿಂದ 17%ಗೆ ಹೆಚ್ಚಿಸಿತು. ಆದರೆ, ಇದು ರಾಜ್ಯದ ಮತದಾರರಿಗೆ ಸ್ಪಷ್ಟತೆ ನೀಡಲಿಲ್ಲ. ಬದಲಾಗಿ ಗೊಂದಲದ ಗೂಡಾಗಿಸಿತು.

ಸೀಮಿತ ಹಿಂದುತ್ವ ಪ್ರಚಾರ

ಹಿಜಾಬ್ ನಿಷೇಧ, ಹಲಾಲ್ ಮಾಂಸ ನಿಷೇಧ ಮತ್ತು ಮುಸ್ಲಿಮರ ಮೀಸಲಾತಿ ರದ್ದುಗೊಳಿಸುವ ವಿಷಯಗಳನ್ನು ಮುನ್ನೆಲೆಗೆ ತಂದಿದ್ದ ಬಿಜೆಪಿ, ಇದೇ ತಮ್ಮ ಗೆಲುವಿಗೆ ನೆರವಾಗುತ್ತದೆ ಎಂದು ಭಾವಿಸಿತ್ತು. ಈ ವಿಚಾರಗಳ ಮೇಲೆಯೇ ಪ್ರಚಾರ ಮಾಡುತ್ತಾ, ಹಿಂದುತ್ವ ಪ್ರಚಾರವನ್ನು ಸೀಮಿತಗೊಳಿಸಿತು.

ಇದರಿಂದ, ರಾಜ್ಯದ ‘ಹಿಂದುತ್ವ ಪ್ರಯೋಗಾಲಯ’ ಎಂದು ಕರೆಯಲ್ಪಡುವ ಕರಾವಳಿಯನ್ನಷ್ಟೇ ಬಿಜೆಪಿ ಭದ್ರಕೋಟೆಯನ್ನಾಗಿ ಉಳಿಸಿಕೊಳ್ಳಲು ಪಕ್ಷಕ್ಕೆ ಸಾಧ್ಯವಾಯಿತು. ಆದರೆ ಹೈದರಾಬಾದ್ ಕರ್ನಾಟಕ, ಮುಂಬೈ ಕರ್ನಾಟಕ ಮತ್ತು ಹಳೇ ಮೈಸೂರು ಭಾಗಗಳಲ್ಲಿ ಈ ಪ್ರಚಾರ ಫಲ ಕೊಡಲಿಲ್ಲ. ಅವರ ಕೈ ಹಿಡಿಯಲಿಲ್ಲ. ಗೆಲ್ಲಿಸಲೂ ಇಲ್ಲ.

ಮೂಲ: ದಿ ಕ್ವಿಂಟ್

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X