ಕೆನಡಾದಲ್ಲಿ ನೆಲೆಸಿರುವ ಸಿಖ್ ಪ್ರತ್ಯೇಕತಾವಾದಿ (ಖಲಿಸ್ತಾನ ಬೇಡಿಕೆ) ಗುಂಪುಗಳ ಮೇಲೆ ಹಿಂಸಾಚಾರ ನಡೆಸಲು ಆದೇಶಿಸಿದ್ದೇ ಭಾರತದ ಗೃಹ ಸಚಿವ ಅಮಿತ್ ಶಾ. ಖಲಿಸ್ತಾನಿ ಹೋರಾಟಗಾರರಿಗೆ ಬೆದರಿಕೆ ಮತ್ತು ಗುಪ್ತಚರ ಸಂಗ್ರಹಣೆ ಅಭಿಯಾನ ಹಿಂದೆ ಅಮಿತ್ ಶಾ ಅವರ ಕೈವಾಡವಿದೆ ಎಂದು ತಾವು ಆರೋಪಿಸಿದ್ದಾಗಿ ಕೆನಡಾ ಸಚಿವ ಒಪ್ಪಿಕೊಂಡಿದ್ದಾರೆ.
ಖಲಿಸ್ತಾನಿ ಹೋರಾಟಗಾರರ ವಿರುದ್ಧ ನಡೆಯುತ್ತಿರುವ ಹಿಂಸಾಚಾರಕ್ಕೆ ಅಮಿತ್ ಶಾ ಅವರೇ ಆದೇಶಿಸಿದ್ದಾರೆ ಎಂದು ತಾವು ವಾಷಿಂಗ್ಟನ್ ಪೋಸ್ಟ್ ತಿಳಿಸಿರುವುದಾಗಿ ಕೆಡನಾದ ವಿದೇಶಾಂಗ ವ್ಯವಹಾರಗಳ ಉಪ ಸಚಿವ ಡೇವಿಡ್ ಮಾರಿಸನ್ ಹೇಳಿಕೊಂಡಿದ್ದಾರೆ. ತಾವು ಮಾಡಿದ ಆರೋಪದ ಬಗ್ಗೆ ಕನಡಾದ ರಾಷ್ಟ್ರೀಯ ಭದ್ರತಾ ಸಮಿತಿಯ ಸಂಸತ್ ಸದಸ್ಯರಿಗೆ ಮಾರಿಸನ್ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಅಮೆರಿಕದ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಮಾರಿಸನ್, “ಖಲಿಸ್ತಾನಿ ಹೋರಾಟಗಾರರ ಹತ್ಯೆಯ ಹಿಂದೆ ಅಮಿತ್ ಶಾ ಕೈವಾಡವಿದೆ” ಎಂದು ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅವರ ಆರೋಪವು ಭಾರತ ಮತ್ತು ಕೆನಡಾ ನಡುವಿನ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.
ಇತ್ತೀಚೆಗೆ, ಕೆನಡಾದಲ್ಲಿ ನೆಲೆಸಿದ್ದ ಭಾರತದ ಮೂಲಕದ ಖಲಿಸ್ತಾನಿ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಯಾಗಿದೆ. ಈ ಹತ್ಯೆಯನ್ನು ತಾವೇ ಮಾಡಿರುವುದಾಗಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಒಪ್ಪಿಕೊಂಡಿದೆ. ಈ ಹತ್ಯೆಯ ಹಿಂದೆ ಭಾರತ ಸರ್ಕಾರದ ಕೈವಾಡವಿದೆ. ಕೆಡನಾದಲ್ಲಿರುವ ಭಾರತದ ರಾಯಭಾರಿ ಕಚೇರಿ ಹತ್ಯೆಗೆ ಸಹಕಾರ ನೀಡಿದೆ. ಲಾರೆನ್ಸ್ ಗ್ಯಾಂಗ್‌ಅನ್ನು ಬಳಸಿಕೊಂಡು ಭಾರತ ಸರ್ಕಾರ (ಕೇಂದ್ರ ಸರ್ಕಾರ) ತಮ್ಮ ವಿರೋಧಿಗಳನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಎಂದು ಕೆನಡಾ ಆರೋಪಿಸಿತ್ತು.
ಈ ವರದಿ ಓದಿದ್ದೀರಾ?: ಇರಾನ್ ಸೇನಾ ನೆಲೆಗಳ ಮೇಲೆ ಇಸ್ರೇಲ್ ಬೆಳ್ಳಂಬೆಳಗ್ಗೆ ಕ್ಷಿಪಣಿ ದಾಳಿ
ಈ ಬೆನ್ನಲ್ಲೇ, ಭಾರತ ಮತ್ತು ಕೆನಡಾ ನಡುವೆ ನಿರಂತರ ಆರೋಪ-ಪ್ರತ್ಯಾರೋಪಗಳು ಮುನ್ನೆಲೆಗೆ ಬಂದಿದ್ದವು. ಅಕ್ಟೋಬರ್ 14 ರಂದು, ಕೆನಡಾ ಸರ್ಕಾರವು ಭಾರತೀಯ ಹೈಕಮಿಷನರ್ ಮತ್ತು ಐವರು ರಾಜತಾಂತ್ರಿಕರನ್ನು ಕೆನಡಾದಿಂದ ಹೊರಹಾಕಿತು. ನಂತರ, ಭಾರತ ಸರ್ಕಾರವೂ ಕೂಡ ದೆಹಲಿಯಲ್ಲಿದ್ದ ಕೆನಡಾ ರಾಯಭಾರಿ ಕಚೇರಿಯನ್ನು ಮುಚ್ಚುವುದಾಗಿ ಘೋಷಿಸಿತು. ರಾಜತಾಂತ್ರಿಕರನ್ನು ಭಾರತ ತೊರೆಯುವಂತೆ ನಿರ್ದೇಶಿಸಿತು.