ಕಸ ವಿಲೇವಾರಿ ಘಟಕ ಸ್ಥಳಾಂತರ ಮಾಡುವಂತೆ ಆಗ್ರಹಿಸಿ ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಬ್ಬು ಬೆಳೆಗಾರರ ಒಕ್ಕೂಟದಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ರೋಣಿಹಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಸರ್ವೇ ನಂಬರ್ 258ರಲ್ಲಿ, 31 ಎಕರೆ 32 ಗುಂಟೆ ಗಾಯರಾಣ ಜಾಗವಿದೆ. ಈ ಸ್ಥಳದಲ್ಲಿ ಕಸವನ್ನು ತಂದು ಹಾಕುತ್ತಾರೆ. ಇದರಿಂದ ಗ್ರಾಮದಲ್ಲಿ 4500 ಮನೆಗಳಿವೆ. ವಾಸಿಸುತ್ತಿರುವ ಜನರಿಗೆ ಹಾಗೂ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದೆ. ಆದ್ದರಿಂದ, ಕಸ ವಿಲೇವಾರಿ ಘಟಕದ ಸ್ಥಳವನ್ನು ಬೇರೆ ಕಡೆ ವರ್ಗಾವಣೆ ಮಾಡಿ, ವಾಸಿಸುತ್ತಿರುವ ಜನರಿಗೆ ಹಾಗೂ ಸಾರ್ವಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತ ಸಂಘಟನೆ ಒಕ್ಕೂಟದಿಂದ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈಗ ಇರುವ ಕಸ ವಿಲೇವಾರಿ ಘಟಕದ ಸ್ಥಳದಲ್ಲಿ ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಆಟದ ಮೈದಾನ, ಗಾರ್ಡನ್, ಅಥವಾ ಸರ್ಕಾರಿ ಕಚೇರಿಗಳನ್ನು ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕಸ ವಿಲೇವಾರಿ ಘಟಕದ ಸ್ಥಳವನ್ನು ಬೇರೆ ಕಡೆ ವರ್ಗಾವಣೆ ಮಾಡಿ ಕೊಡಬೇಕು ಎಂದು ಗ್ರಾಮಸ್ಥರು ಹಾಗೂ ರೈತ ಮುಖಂಡರು , ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಉಪ ತಹಶೀಲ್ದಾರ್ ಎಂ.ಕೆ.ನದಾಫ ಅವರಿಗೆ ರೋಣಿಹಾಳ ಗ್ರಾಮಸ್ಥರು ಹಾಗೂ ರೈತ ಸಂಘದ ಅಧ್ಯಕ್ಷ ಸೋಮು ಬಿರಾದಾರ ಮನವಿ ಸಲ್ಲಿಸಿದರು. ಈ ವೇಳೆ ಉಮೇಶ ಹೊಸಮನಿ, ಅಶೋಕ ಜಮಖಂಡಿ, ಬಸವರಾಜ ನ್ಯಾಮ ಗೊಂಡ, ಶರಣು ಸಾಹುಕಾರ ನ್ಯಾಮ ಗೊಂಡ, ಜಿ ಆರ್‌ನ್ಯಾಮಗೊಂಡ, ನೀಲನ ಗೌಡ ಬಿರಾದಾರ, ಮಲ್ಲುದೇಸಾಯಿ, ಬಸವರಾಜ ಬೀಳಗಿ, ವಿನೋದರೂ- ಡಗಿ, ವಿನೋದ ದೇಸಾಯಿ, ಬಸವ ರಾಜ ದೇಸಾಯಿ, ಹನುಮಂತ ನ್ಯಾಮ ಗೊಂಡ, ಶ್ರೀಕಾಂತ ಚಲವಾದಿ ಹಾಗೂ ರೈತರು ಉಪಸ್ಥತಿಯಲ್ಲಿದ್ದರು.