ಕರ್ನಾಟಕ ಚುನಾವಣೆ | ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಐತಿಹಾಸಿಕ ನಾಯಕರೇ ದಾಳ

Date:

Advertisements

ಕುವೆಂಪು ಬರೆದ ನಾಡಗೀತೆಯ ಸಾಲುಗಳನ್ನು ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ತಪ್ಪು ತಪ್ಪಾಗಿ ಹಾಡಿ ರಾಜ್ಯಾದ್ಯಂತ ಟ್ರೋಲ್‌ಗೆ ಒಳಗಾಗಿದ್ದರು.

ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿದೆ. ರಾಷ್ಟ್ರೀಯ ಪಕ್ಷಗಳ ರಾಷ್ಟ್ರ ನಾಯಕರು ರಾಜ್ಯಕ್ಕೆ ಆಗ್ಗಾಗ್ಗೆ ಬಂದು ಭಾಷಣ ಮಾಡುತ್ತಲೇ ಇದ್ದಾರೆ. ಅವರೆಲ್ಲರ ಭಾಷಣಗಳಲ್ಲಿ ರಾಜ್ಯದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಧೀಮಂತರ ಹೆಸರಗಳು ಸಾರಾಸಗಟಾಗಿ ಉಲ್ಲೇಖವಾಗುತ್ತಿವೆ. ಪಕ್ಷಗಳ ಚುನಾವಣಾ ರಾಜಕಾರಣದಲ್ಲಿ ಕವಿಗಳು, ಸಮಾಜ ಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಮಹಿಳಾ ರಾಣಿಯರು-ಹೋರಾಟಗಾರ್ತಿಯರು ಸಿಲುಕಿಕೊಂಡಿದ್ದಾರೆ. ಪ್ರಮುಖವಾಗಿ, ಸಮಾಜ ಸುಧಾರಕ ಬಸವಣ್ಣ ಮತ್ತು ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಹೆಸರುಗಳು ಸಾಮಾನ್ಯವಾಗಿ ಎಲ್ಲ ಭಾಷಣಗಳಲ್ಲೂ ಕೇಳಿಬರುತ್ತಲೇ ಇವೆ.

ರಾಜ್ಯದಲ್ಲಿ ಮುಖ್ಯವಾಗಿ ದಕ್ಷಿಣ ಕರ್ನಾಟಕದಲ್ಲಿ ಒಕ್ಕಲಿಗರು, ಉತ್ತರ ಕರ್ನಾಟಕದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜೊತೆಗೆ, ಬೇಡ, ನಾಯಕ ಹಾಗೂ ಕುರುಬ ಸಮುದಾಯದ ಮತದಾರರ ಸಂಖ್ಯೆ ಹೆಚ್ಚಾಗಿದೆ. ಈ ಎಲ್ಲ ಮತದಾರರನ್ನು ಸೆಳೆಯಲು ಈ ಸಮುದಾಯಗಳ ಐತಿಹಾಸಿಕ ನಾಯಕರ ಹೆಸರು ಮತ್ತು ಪ್ರತಿಮೆಗಳನ್ನು ಪಕ್ಷಗಳು ಬಳಸಿಕೊಳ್ಳುತ್ತಿವೆ. ಅದರಲ್ಲೂ ಬಿಜೆಪಿ ಅಂತಹ ಕೆಲಸಗಳಲ್ಲಿ ಮುಂದಿದೆ.

Advertisements

ಲಿಂಗಾಯತರನ್ನು ಸೆಳೆಯಲು ಬಸವಣ್ಣ ರಾಜಕೀಯ ದಾಳವಾಗಿದ್ದಾರೆ. ಹಾಗಾಗಿಯೇ, ಇತ್ತೀಚೆಗೆ ರಾಜ್ಯಕ್ಕೆ ಆಗಾಗ್ಗೆ ಓಡಿಬರುವ ಪ್ರಧಾನಿ ಮೋದಿ ಅವರು ಬಸವಣ್ಣನವರ ವಚನಗಳನ್ನು ಅವರದ್ದೇ ಅರ್ಥವಿಲ್ಲದ ಭಾಷೆಯಲ್ಲಿ ತೊದಲುತ್ತಿದ್ದಾರೆ. ಮಾತ್ರವಲ್ಲ, ಹೊಸ ಸಂಸತ್‌ ಭವನದ ಶಂಕುಸ್ಥಾಪನೆಯ ಸಮಯದಲ್ಲೂ ಬಸವಣ್ಣನವರ ಹೆಸರನ್ನು ಮೋದಿ ಉಲ್ಲೇಖಿಸಿದ್ದರು. ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಫೋಟೋ ಇಡುವ ಬಗ್ಗೆಯೂ ಪ್ರಸ್ತಾಪಿಸಿದ್ದರು.

ಅಲ್ಲದೆ, ಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ಒಕ್ಕಲಿಗರನ್ನು ಪಕ್ಷದತ್ತ ಓಲೈಸಲು, ಕುವೆಂಪು ಬರೆದ ನಾಡಗೀತೆಯ ಸಾಲುಗಳನ್ನು ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. ತಪ್ಪು ತಪ್ಪಾಗಿ ಹಾಡಿ ರಾಜ್ಯಾದ್ಯಂತ ಟ್ರೋಲ್‌ಗೆ ಒಳಗಾಗಿದ್ದರು. ಜೊತೆಗೆ, ಕೆಂಪೇಗೌಡರ ಹೆಸರನ್ನೂ ಎಗ್ಗಿಲ್ಲದೆ ಬಳಸುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಕೆಂಪೇಗೌಡ ಪ್ರತಿಮೆಯನ್ನು ಉದ್ಘಾಟಿಸಿದ್ದ ಮೋದಿ, ಪ್ರತಿಮೆ ಎದುರು ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದರು. ಮಾತ್ರವಲ್ಲ, ಸಮಾವೇಶಗಳು ಎಲ್ಲಿ ನಡೆಯುತ್ತವೆಯೂ ಆ ಪ್ರದೇಶದ ಸ್ಥಳೀಯ ಐಕಾನ್‌ಗಳ ಹೆಸರನ್ನು ಪ್ರಧಾನಿ ತಪ್ಪದೆ ತಮ್ಮ ಭಾಷಣಗಳಲ್ಲಿ ಉಲ್ಲೇಖಿಸುತ್ತಾರೆ.

‘ಸೋಷಿಯಲ್ ಐಕಾನ್’ ರಾಜಕಾರಣದಲ್ಲಿ ಕಾಂಗ್ರೆಸ್‌ ಏನೂ ಹೊರತಾಗಿಲ್ಲ. ಬಸವಣ್ಣ ಹೆಸರನ್ನು ಕಾಂಗ್ರೆಸ್‌ ಕೂಡ ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ 2015ರಲ್ಲಿ ಟಿಪ್ಪು ಸುಲ್ತಾನ್ ಜಯಂತಿಯನ್ನು ಜಾರಿಗೆ ತಂದಿತು. ಅದೂ ಕೂಡ ರಾಜ್ಯದಲ್ಲಿ ಮತ ಧ್ರುವೀಕರಣದ ಉದ್ದೇಶವಾಗಿತ್ತೆಂದು ರಾಜಕೀಯ ತಜ್ಞರು ಹೇಳಿದ್ದರು. ಅಲ್ಪಸಂಖ್ಯಾತರನ್ನು ಸೆಳೆಯಲು ಟಿಪ್ಪುವನ್ನು ಕಾಂಗ್ರೆಸ್‌ ಬಳಸಿಕೊಂಡರೆ, ಹಿಂದುಗಳ ಮತ ಕ್ರೂಢೀಕರಣಕ್ಕೆ ಬಿಜೆಪಿಯೂ ಟಿಪ್ಪುವನ್ನು ಬಳಸಿಕೊಳ್ಳುತ್ತಿದೆ. ಮಾತ್ರವಲ್ಲ, ಬಿಜೆಪಿಯು ಟಿಪ್ಪುವನ್ನು ಎದುರಿಸಲು ಪೋರ್ಚುಗೀಸ್ ಮತ್ತು ಮೊಘಲರ ವಿರುದ್ಧ ಹೋರಾಡಿದ ರಾಣಿ ಅಬ್ಬಕ್ಕ ಮತ್ತು ಕೆಳದಿ ಚೆನ್ನಮ್ಮ ಅವರನ್ನು ಬಳಸುತ್ತಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಬಳಸುವ ಮತ್ತೊಂದು ಐಕಾನ್ ಕಿತ್ತೂರು ರಾಣಿ ಚೆನ್ನಮ್ಮ, ಬ್ರಿಟಿಷರ ವಿರುದ್ಧದ ಹೋರಾಡಿದ ಚೆನ್ನಮ್ಮ ಹೆಸರು ರಾಜಕೀಯದಲ್ಲಿ ಎಗ್ಗಿಲ್ಲದೆ ಬಳಕೆಯಾಗುತ್ತಿದೆ. ಅಕ್ಕ ಮಹಾದೇವಿ (ಲಿಂಗಾಯತ), ಸಂಗೊಳ್ಳಿ ರಾಯಣ್ಣ (ಕುರುಬ), ಕನಕದಾಸ (ಕುರುಬ), ಬೇಡರು ಮತ್ತು ನಾಯಕರನ್ನು ಸೆಳೆಯಲು ವಾಲ್ಮೀಕಿಯನ್ನೂ ಈ ಪಕ್ಷಗಳು ಬಳಸಿಕೊಂಡಿವೆ. ಜೊತೆಗೆ, ಶಿವಾಜಿಯನ್ನೂ ಬಿಜೆಪಿ ಹೆಚ್ಚಾಗಿ ಬಳಸಿಕೊಳ್ಳುತ್ತಿದೆ.

ಈ ಸುದ್ದಿ ಓದಿದ್ದೀರಾ?: ಖರ್ಗೆಯವರೇ ನಿಮ್ಮನ್ನು ಮುಟ್ಟಿದರೆ ಮತ್ತೆ ಮೂಗು ಒರೆಸಿದೆ ಅಂತಾರೇನೋ: ರಾಹುಲ್ ಗಾಂಧಿ ವ್ಯಂಗ್ಯ

“ಸಮಾಜವನ್ನು ಧ್ರುವೀಕರಣಗೊಳಿಸಲು ಯಾವುದೇ ಪಕ್ಷವು ಸಮಾಜದ ಐಕಾನ್‌ಗಳನ್ನು ಬಳಸುವುದು ದುರದೃಷ್ಟಕರ. ತಮ್ಮಲ್ಲಿ ಆತ್ಮವಿಶ್ವಾಸ, ಸಾಧನೆಗಳ ಕೊರತೆ ಮತ್ತು ದೂರದೃಷ್ಟಿ ಇಲ್ಲದಿದ್ದಾಗ ಮಾತ್ರ ಅವರು ಹೆಚ್ಚಾಗಿ ‘ಐಕಾನ್‌’ಗಳ ಹೆಸರನ್ನು ಬಳಸುತ್ತಾರೆ. ಬಿಜೆಪಿಗರು ಜನರನ್ನು ವಿಭಜಿಸಲು ಐತಿಹಾಸಿಕ ವ್ಯಕ್ತಿಗಳನ್ನು ಅವಲಂಬಿಸಿದ್ದಾರೆ” ಎಂದು ಕೆಪಿಸಿಸಿ ಉಪಾಧ್ಯಕ್ಷ ಬಿಎಲ್ ಶಂಕರ್ ಹೇಳಿದ್ದಾರೆ.

ಬಿಜೆಪಿ ರಾಜ್ಯ ಸಾಂಸ್ಕೃತಿಕ ಘಟಕದ ಸಂಚಾಲಕ ಪ್ರಭುದೇವ ಕಪ್ಪಗಲ್ಲು ಮಾತನಾಡಿ, “ಪ್ರಧಾನಿ ಮೋದಿ ವಿವಿಧ ಪ್ರದೇಶಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವದ ಬಗ್ಗೆ ನಿರ್ದಿಷ್ಟವಾಗಿ ಮಾತನಾಡುತ್ತಾರೆ. ಅವರಿಗೆ ನಾವು ಸ್ಥಳೀಯ ಐಕಾನ್‌ಗಳು ಮತ್ತು ಇತರ ಮಹತ್ವದ ಮಾಹಿತಿಯನ್ನು ಒದಗಿಸುತ್ತೇವೆ. ಇದರಿಂದಾಗಿ ಅವರ ಭಾಷಣಗಳು ಸ್ಥಳೀಯರನ್ನು ಆಕರ್ಷಿಸುತ್ತವೆ.
ಚುನಾವಣಾ ರಾಜಕೀಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ” ಎಂದಿದ್ದಾರೆ.

WhatsApp Image 2023 06 13 at 1.10.34 PM e1686642227658
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ತೆಂಗಿನಕಾಯಿ ಕಳ್ಳತನ ಆರೋಪ: ವ್ಯಕ್ತಿಯ ಹತ್ಯೆ; ಆರೋಪಿಗಳ ಬಂಧನ

ತೆಂಗಿನಕಾಯಿ ಕಳ್ಳತನ ಮಾಡಿದ್ದಾನೆ ಎಂಬ ಕಾರಣಕ್ಕೆ ವ್ಯಕ್ತಿಯನ್ನು ಹತ್ಯೆ ಮಾಡಿರುವ ಘಟನೆ...

ಗದಗ | ಒಳಮೀಸಲಾತಿ ಅಂಗೀಕಾರ ಸ್ವಾಗತಾರ್ಹ: ಬಸವರಾಜ ಕಡೇಮನಿ

"ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಮೂವತ್ತೈದು ವರ್ಷಗಳ ನಿರಂತರ ಹೋರಾಟದ ಫಲದಿಂದ ರಾಜ್ಯ...

ಸಕಲೇಶಪುರ | ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕು: ಬಿ ಆರ್‌ ಪಾಟೀಲ್

ವ್ಯಸನಮುಕ್ತ ರಾಜ್ಯ ಆಂದೋಲನಕ್ಕೆ ಸರ್ಕಾರ ಸಂಪೂರ್ಣವಾಗಿ ಬೆಂಬಲ ನೀಡಿದಾಗ ಮಾತ್ರ ವ್ಯಸನವನ್ನು...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

Download Eedina App Android / iOS

X