ಕುಟುಂಬದವರು ಮನೆಯಲ್ಲಿದ್ದಾಗಲೇ ಕ್ರಿಕೆಟಿಗ ಬೆನ್ ಸ್ಟೋಕ್ಸ್ ಮನೆ ದರೋಡೆ: ಅಪಾರ ವಸ್ತು ಕಳವು

Date:

Advertisements

ತನ್ನ ಕುಟುಂಬದ ಸದಸ್ಯರು ಮನೆಯಲ್ಲಿದ್ದಾಗಲೇ ಮುಸುಕುಧಾರಿ ದರೋಡೆಕೋರರು ಮನೆಗೆ ನುಗ್ಗಿ ಅಪಾರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ನಾಯಕ ಬೆನ್ ಸ್ಟೋಕ್ಸ್‌ ತಿಳಿಸಿದ್ದಾರೆ.

ಕುಟುಂಬಕ್ಕೆ ಯಾವುದೇ ದೈಹಿಕ ಹಾನಿಯಾಗಿಲ್ಲ. ಆದರೆ ಹಲವಾರು ಭಾವನಾತ್ಮಕ ವಸ್ತುಗಳನ್ನು ದರೋಡೆ ಮಾಡಲಾಗಿದೆ ಎಂದು 33 ವರ್ಷದ ಕ್ರಿಕೆಟಿಗ ಹೇಳಿದ್ದಾರೆ. ಪಾಕಿಸ್ತಾನ ವಿರುದ್ಧದ 2ನೇ ಟೆಸ್ಟ್ ಪಂದ್ಯದ ವೇಳೆ ನಡೆದ ಈ ದರೋಡೆಯಲ್ಲಿ ಪತ್ನಿ ಕ್ಲೇರಿ ಮತ್ತು ಮಕ್ಕಳಾದ ಲಿಟನ್ ಹಾಗೂ ಲಿಬ್ಬಿ ಮನೆಯಲ್ಲಿದ್ದರು.

“ಅಕ್ಟೋಬರ್ 17ರಂದು ಗುರುವಾರ ಸಂಜೆ ಹಲವು ಮಂದಿ ಮುಸುಕುಧಾರಿಗಳು ಕ್ಯಾಸಲ್ ಈಡನ್ ನಲ್ಲಿರುವ ನಮ್ಮ ಮನೆಗೆ ನುಗ್ಗಿ ದರೋಡೆ ಮಾಡಿದ್ದಾರೆ. ಒಡವೆಗಳೊಂದಿಗೆ ಕೆಲವು ವೈಯಕ್ತಿಯ ವಸ್ತುಗಳನ್ನು ಕದ್ದಿದ್ದಾರೆ. ಕಳವಾದ ಬಹುತೇಕ ವಸ್ತುಗಳು ನನಗೆ ಹಾಗೂ ನನ್ನ ಕುಟುಂಬಕ್ಕೆ ಬಹು ಮುಖ್ಯವಾಗಿದ್ದವು. ಕೆಟ್ಟ ಸಂಗತಿ ಏನಂದರೆ ನನ್ನ ಪತ್ನಿ ಹಾಗೂ ನನ್ನ ಇಬ್ಬರು ಮಕ್ಕಳು ಮನೆಯಲ್ಲಿದ್ದಾಗಲೆ ಕಳ್ಳತನವಾಗಿದೆ. ಸಂತಸದ ವಿಷಯವೆಂದರೆ ನನ್ನ ಪತ್ನಿ ಮತ್ತು ಮಕ್ಕಳಿಗೆ ಯಾವುದೇ ದೈಹಿಕ ಹಾನಿಯಾಗಿಲ್ಲ. ಕಳುವಾದ ನನ್ನ ವಸ್ತುಗಳ ಫೋಟೋಗಳನ್ನು ಹಂಚಿಕೊಂಡಿದ್ದು, ಇದರಿಂದ ಕಳ್ಳರನ್ನು ಹಿಡಿಯಲು ಅನುಕೂಲವಾಗಲಿದೆ. ಮತ್ತು ಅವರನ್ನು ಹಿಡಿಯಬೇಕೆಂಬ ಒತ್ತಾಸೆಯಿದೆ. ನಾನು ಪಾಕಿಸ್ತಾನದಲ್ಲಿದ್ದರೂ ನನ್ನ ಕುಟುಂಬಕ್ಕೆ ಸಾಂತ್ವಾನ ನೀಡಿ ಪ್ರಕರಣದ ಬಗ್ಗೆ ಕಾರ್ಯಚರಣೆ ನಡೆಸುತ್ತಿರುವ ಪೊಲೀಸರಿಗೆ ಧನ್ಯವಾದಗಳು” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬೆನ್ ಸ್ಟೋಕ್ಸ್‌ ವಿವರಿಸಿದ್ದಾರೆ.

Advertisements
Ben stokes Twitter
ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬುಲಾ ಚೌಧರಿ ಪದ್ಮಶ್ರೀ ಪದಕ ಕಳವು: ‘ಎಲ್ಲವನ್ನೂ ಕಳೆದುಕೊಂಡೆ’ ಎಂದ ಈಜುಪಟು

ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ತಮ್ಮ ಪೂರ್ವಜರ ಮನೆಯಿಂದ ಪದ್ಮಶ್ರೀ ಪದಕ...

RCBಯದ್ದು ಕಳ್ಳ ಒಪ್ಪಂದ; ಆರ್‌ ಅಶ್ವಿನ್ ಬಹಿರಂಗ ಟೀಕೆ

2025ರ ಐಪಿಎಲ್‌ ಟೂರ್ನಿಗಾಗಿ ನಡೆದ ಮೆಗಾ ಹರಾಜಿನ ಸಮಯದಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್...

ಭಾರತದ ಮೇಲೆ ಅಮೆರಿಕ ದ್ವೇಷ: ಟ್ರಂಪ್‌ಗೆ ನೊಬೆಲ್ ನೀಡುವಂತೆ ಮೋದಿ ಶಿಫಾರಸು ಮಾಡಿದ್ರೆ ಎಲ್ಲವೂ ಸರಿಹೋಗತ್ತ?

ಪಾಕಿಸ್ತಾನವು 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್‌ ಅವರನ್ನು ಶಿಫಾರಸು ಮಾಡುವುದಾಗಿ...

Download Eedina App Android / iOS

X