ವಕ್ಫ್ ವಿವಾದದಿಂದಾಗಿ ಆತಂಕಕ್ಕೊಳಗಾಗಿರುವ ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಅಹೋರಾತ್ರಿ ಧರಣಿ ಕೈಗೊಂಡಿದ್ದ ರೈತರನ್ನು ಬುಧವಾರ ರಾತ್ರಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಭೇಟಿಯಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಧರಣಿ ಅಂತ್ಯಗೊಳಿಸಿದ್ದಾರೆ.
ವಕ್ಫ್ ವಿಷಯಕ್ಕೆ ಸಂಬಂಧಿಸಿದ ಇಂಡಿ ತಾಲೂಕಿನಲ್ಲಿ ನೋಟಿಸ್ ಇಲ್ಲದೇ ಮಾಡಲಾಗಿದ್ದ 44 ಮ್ಯೂಟೇಷನ್‌ಗಳನ್ನು ರದ್ದುಗೊಳಿಸುವ ಆದೇಶ ಪ್ರತಿಯನ್ನು ರೈತ ಸಂಘದ ಪದಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಟಿ. ಭೂಬಾಲನ್ ನೀಡಿದರು.
ಇದನ್ನು ಓದಿದ್ದೀರಾ? ಜುಲೇಕಾ ಬೇಗಂಗೆ ರಾಜ್ಯೋತ್ಸವ ಪ್ರಶಸ್ತಿ | ಮಲ್ಲಮ್ಮ ಸರಸ್ವತಿಯಾಗಿ ಜುಲೇಕಾ ಆಗಿದ್ದೇ ರೋಚಕ!
“ರೈತರ ಒಂದಿಂಚೂ ಭೂಮಿ ವಕ್ಫ್‌ಗೆ ನೀಡುವುದಿಲ್ಲ, ನೋಟಿಸ್‌ಗಳನ್ನು ಸಹ ಸಂಪೂರ್ಣವಾಗಿ ಹಿಂದಕ್ಕೆ ಪಡೆಯಲಾಗಿದೆ, ಈ ಬಗ್ಗೆ ಮುಖ್ಯಮಂತ್ರಿಗಳು ಸಹ ಸ್ಪಷ್ಟನೆ ನೀಡಿದ್ದಾರೆ. ಹೀಗಾಗಿ ರೈತರು ಯಾವುದೇ ಕಾರಣಕ್ಕೂ ಆತಂಕ್ಕೊಳಗಾಗಬಾರದು, ರೈತರು ಸಂತೋಷವಾಗಿ ದೀಪಾವಳಿ ಆಚರಿಸಿ” ಎಂದು ಭರವಸೆ ನೀಡಿದ್ದಾರೆ. ಈ ಕಾರಣಕ್ಕೆ ಹೋರಾಟವನ್ನು ಕೈ ಬಿಟ್ಟಿರುವುದಾಗಿ ರೈತ ಮುಖಂಡರು ತಿಳಿಸಿದರು.
