ಕೃತಕ ಸಿಹಿಕಾರಕ ಬಳಕೆ; ಆರೋಗ್ಯಕ್ಕೆ ಹಾನಿಕಾರಕ

Date:

Advertisements

ದೇಹದ ತೂಕ ಇಳಿಸಲು ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯುವ ಸಲುವಾಗಿ ಕೃತಕ ಸಿಹಿಕಾರಕ (ಎನ್‌ಎಸ್‌ಎಸ್‌) ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಎನ್‌ಎಸ್‌ಎಸ್‌ ಬಳಿಕೆಯು ಆರೋಗ್ಯಕ್ಕೆ ಹಾನಿಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಹೇಳಿದೆ.

ಕೆಲ ಸಂಶೋಧನೆಗಳ ಪ್ರಕಾರ, ಇತ್ತೀಚೆಗೆ ಕೃತಕ ಸಿಹಿಕಾರಕ ಬಳಕೆ ಜಾಸ್ತಿಯಾಗಿದೆ. ಇವುಗಳ ಬಳಕೆಯು ದೇಹದ ತೂಕ ಇಳಿಕೆಗೆ ಸಹಾಯ ಮಾಡಿದರೂ, ಇವುಗಳಿಂದ ಆರೋಗ್ಯದ ಮೇಲಿನ ಅಡ್ಡ ಪರಿಣಾಮಗಳೇ ಹೆಚ್ಚು ಎಂದು ಡಬ್ಲ್ಯೂಎಚ್‌ಒ ಕಳವಳ ವ್ಯಕ್ತಪಡಿಸಿದೆ.

ಕೃತಕ ಸಿಹಿಕಾರ ಬಳಕೆ ಮಾಡುವುದರಿಂದ ‘ಮಧುಮೇಹ ಟೈಪ್‌-2’, ಹೃದಯಸಂಬಂಧಿ ಕಾಯಿಲೆಗಳು, ಶೀಘ್ರ ಮರಣ ಪ್ರಮಾಣ ಹೆಚ್ಚಾಗುತ್ತಿವೆ ಎಂದು ಹಲವು ಸಂಶೋಧನೆಗಳು ಇದನ್ನು ಖಚಿತಪಡಿಸಿವೆ ಎಂದು ಡಬ್ಲ್ಯೂಎಚ್‌ಒ ಹೇಳಿದೆ.

Advertisements

ಊಟದಲ್ಲಿ ರಾಸಾಯನಿಕ ಮಿಶ್ರಿತ ಸಕ್ಕರೆಯ ಬದಲು ಕೃತಕ ಸಿಹಿಕಾರಕ ಬಳಕೆಯಿಂದ ದೀರ್ಘಾವಧಿಯಲ್ಲಿ ಉಪಯೋಗವಿಲ್ಲ. ಹಾಗಾಗಿ ಜನ ಸಹಜ ಸಕ್ಕರೆಯನ್ನು ಬಳಸಬಹುದು. ಪ್ರಕೃತಿ ಸಹಜವಾಗಿ ಸಿಹಿಯಿರುವ ಹಣ್ಣುಗಳನ್ನು ಬಳಸಬೇಕು ಅಥವಾ ಸಕ್ಕರೆಯೇ ಇಲ್ಲದ ಪಾನೀಯಗಳ ಬಳಕೆ ಉತ್ತಮ ಎಂದು ಡಬ್ಲ್ಯುಎಚ್‌ಒನ ಪೌಷ್ಟಿಕಾಂಶ ಮತ್ತು ಆಹಾರ ಸುರಕ್ಷತಾ ವಿಭಾಗದ ನಿರ್ದೇಶಕ ಫ್ರಾನ್ಸೆಸ್ಕೊ ಬ್ರಾಂಕಾ ತಿಳಿಸಿದ್ದಾರೆ.

ಹಲವರು ಸಕ್ಕರೆ ನೇರವಾಗಿ ಸೇವಿಸಿ ಅದರಿಂದ ಉಂಟಾಗುವ ಬೊಜ್ಜು ಮತ್ತು ಮಧುಮೇಹ ಮತ್ತಿತ್ತರ ಸಾಂಕ್ರಮಿಕವಲ್ಲದ ರೋಗಗಳನ್ನು ತಡೆಯಲು ಕೃತಕ ಸಿಹಿಕಾರಕವಾದ ತಂಪು ಪಾನೀಯ ಹಾಗೂ ಇತರೆ ಆಹಾರ ಪದಾರ್ಥಗಳಲ್ಲಿ ಅಸೆಸಲ್ಫೇಮ್‌–ಕೆ, ಆಸ್ಪರ್ಟಮೆ, ಅಡ್ವಾಂಟಮೆ, ಸೈಕ್ಲಾಮೇಟ್ಸ್‌, ನಿಯೊಟೇಮ್‌, ಸ್ಯಾಚರಿನ್‌, ಸುಕ್ರಾಲೋಸ್‌, ಸ್ಟೆವಿಯಾ ಮತ್ತು ಸ್ಟೆವಿಯಾ ಡೆರಿವೇಟಿವ್ಸ್‌ನಂತಹ ಸಿಹಿಕಾರಕಗಳನ್ನು ಸದ್ಯ ಬಳಕೆ ಮಾಡಲಾಗುತ್ತಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ಈ ಸುದ್ದಿ ಓದಿದ್ದೀರಾ?: ವೇದಗಣಿತ, ಜ್ಯೋತಿಷ್ಯ ಪರಿಚಯಿಸಲು ಮುಂದಾದ ಯುಜಿಸಿ; ಎಐಡಿಎಸ್‌ಒ ಕಿಡಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕೊರೋನಾ ಸಮಯದಲ್ಲಿ ತಬ್ಲಿಘಿ ಸಭೆ: 70 ಜನರ ವಿರುದ್ಧದ FIR ರದ್ದು; ಕೋರ್ಟ್‌ ಆದೇಶ

ದೇಶದಲ್ಲಿ ಕೊರೋನಾ ಆಕ್ರಮಣ ಆರಂಭವಾಗಿದ್ದ ಸಮಯ 2020ರ ಮಾರ್ಚ್‌ನಲ್ಲಿ ದೆಹಲಿಯಲ್ಲಿ ತಬ್ಲಿಘಿ...

ದಾವಣಗೆರೆ | ಹೃದಯಾಘಾತಕ್ಕೆ ಯುವಕ ಬಲಿ

ದಾವಣಗೆರೆಯ ಉದ್ಯಮಿಯೊಬ್ಬರ ಪುತ್ರ ಕಾಲೇಜು ವಿದ್ಯಾರ್ಥಿ ಹೃದಯಾಘಾತದಿಂದ (Heart Attack) ಕುಸಿದು...

ಮಹಿಳೆಯರನ್ನು ಗರ್ಭಕೋಶ ಕ್ಯಾನ್ಸರ್‌ನಿಂದ ರಕ್ಷಿಸಲು ಎಚ್‌ಪಿವಿ ಲಸಿಕೆ ಅತ್ಯಗತ್ಯ: ಡಾ. ಮಂಗಳ

ಮಹಿಳೆಯರಲ್ಲಿ ಗರ್ಭಕೋಶದ ಕ್ಯಾನ್ಸರ್ ಹೆಚ್ಚಾಗಿ ಕಂಡುಬರುತ್ತಿದೆ. ಈ ಸಮಸ್ಯೆಯಿಂದ ರಕ್ಷಣೆ ಪಡೆಯಲು...

ಕೋವಿಡ್ ಲಸಿಕೆಗೂ ಹಠಾತ್ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ: ಆರೋಗ್ಯ ಸಚಿವಾಲಯ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ...

Download Eedina App Android / iOS

X