ರಾಯಚೂರು ನಗರದ ರಾಗಿಮಾನಗಡ್ಡದಲ್ಲಿ ಮನೆ ಮುಂದೆ ಪಟಾಕಿ ಹಚ್ಚುವ ವಿಚಾರಕ್ಕೆ ಬಡಾವಣೆಯ ಯುವಕರ ಮಧ್ಯೆ ಜಗಳವಾಗಿ ಓರ್ವ ಕೊಲೆಗೀಡಾದ ಘಟನೆ ನಡೆದಿದೆ.
ನರಸಿಂಹಲು (32) ಎಂಬ ಯುವಕನ ಕೊಲೆಯಲ್ಲಿ ಈ ಜಗಳ ಅಂತ್ಯಗೊಂಡಿದೆ. ಮನೆ ಮುಂದೆ ಪಟಾಕಿ ಹಚ್ಚುತ್ತಿರುವ ಕಾರಣಕ್ಕೆ ನರಸಿಂಹಲು ಹಾಗೂ ಬಡಾವಣೆಯ ಇತರರ ನಡುವೆ ಗಲಾಟೆಯಾಗಿದೆ. ನರಸಿಂಹಲು ನಮ್ಮ ಮನೆ ಮುಂದೆ ಪಟಾಕಿ ಹಚ್ಚಬೇಡಿ ಎಂದು ಆಕ್ಷೇಪ ಮಾಡಿದ್ದಾನೆ.
ಯುವಕರು ಮಾತು ಕೇಳದಿದ್ದಾಗ ಗುಂಪಿನಲ್ಲಿದ್ದ ಪ್ರವೀಣ ಎಂಬ ಯುವಕನನ್ನು ಹಲ್ಲೆ ಮಾಡಲು ಮುಂದಾಗಿದ್ದಾನೆ. ಇದರಿಂದ ತಪ್ಪಿಸಿಕೊಂಡ ಪ್ರವೀಣ ತನ್ನ ಸ್ನೇಹಿತ ಈಶ್ವರ, ವಿ ನರೇಶ ಸೇರಿ ಕಟ್ಟಿಗೆ, ಬಲ್ಲಿಸ್ ನಿಂದ ಮೈಕೈ, ತಲೆಗೆ ಹೊಡೆದಿದ್ದಾರೆ.
ಗುಂಪಿನಲ್ಲಿದ್ದ ರೋಹನ ಎಂಬ ಯುವಕ ಕೆಳಗೆ ಬಿದ್ದಿದ್ದ ನರಸಿಂಹಲು ಕುತ್ತಿಗೆ ಮೇಲೆ ಕಾಲಿಟ್ಟದ್ದರಿಂದ ಮೂರ್ಛೆ ಹೋಗಿದ್ದ. ಘಟನೆಯ ಬಳಿಕ ಕುಟುಂಬಸ್ಥರು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೇಹದ ಹಲವೆಡೆ ಬಲವಾದ ಗಾಯಗೊಂಡಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಎಫ್ಐಆರ್‌ನಲ್ಲಿ ಮಾಹಿತಿ ದಾಖಲಾಗಿದೆ.
ಇದನ್ನು ಓದಿದ್ದೀರಾ? ಗ್ರೌಂಡ್ ರಿಪೋರ್ಟ್ | ಕಡಕೋಳ ಗಲಭೆ: ಗ್ರಾಮವನ್ನೇ ತೊರೆದ 70ಕ್ಕೂ ಹೆಚ್ಚು ಮುಸ್ಲಿಂ ಕುಟುಂಬಗಳು!
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರಾಯಚೂರು ನಗರದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
