ಮುಡಿಪು ಮತ್ತು ಅಸೈಗೋಳಿ ಮಧ್ಯೆ ಹಾದು ಹೋಗುವ ಜಿಲ್ಲಾ ಮುಖ್ಯ ರಸ್ತೆಯನ್ನು ಸಮರ್ಪಕವಾಗಿ ದುರಸ್ತಿಗೊಳಿಸಲು ಆಗ್ರಹಿಸಿ ಡಿವೈಎಫ್ಐ ಮುಡಿಪು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮುಖಂಡರಾದ ರಝಾಕ್ ಮೊಂಟೆಪದವು, ಮುಡಿಪು ಮುಖ್ಯ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ಈ ಬಗ್ಗೆ ಡಿವೈಎಫ್ಐ ಭಿತ್ತಿ ಪತ್ರ ಅಂಟಿಸಿ ಎಚ್ಚರಿಕೆ ನೀಡಿತ್ತು. ಪರಿಣಾಮವಾಗಿ ಎಚ್ಚೆತ್ತ ಸಂಬಂಧಪಟ್ಟ ಇಲಾಖೆಯು ಕೇವಲ ಕಾಂಕ್ರಿಟ್ ಮಿಶ್ರಣ ಹಾಕಿ ಅಸಮರ್ಪಕವಾಗಿ ದುರಸ್ತಿಗೊಳಿಸಿದೆ. ಈ ಅಸಮರ್ಪಕ ದುರಸ್ತಿ ಕಾರ್ಯದಿಂದಾಗಿ ವಾಹನ ಅಪಘಾತಗಳು ಹೆಚ್ಚಾಗಿವೆ ಎಂದು ದೂರಿದರು.

ಇಲ್ಲಿನ ಶಾಸಕರಾದ ಸ್ಪೀಕರ್ ಯು.ಟಿ ಖಾದರ್ ಅವರು ಟೋಲ್ ಮುಕ್ತ ರಸ್ತೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದು ಜನರ ಪ್ರಾಣ ತೆಗೆಯುವ ರಸ್ತೆಯಾಗಿ ಮಾರ್ಪಟ್ಟಿದೆ ಎಂಬುದು ಅವರಿಗೆ ಕೂಡಲೇ ರಸ್ತೆಯನ್ನು ಸಮರ್ಪಕವಾಗಿ ದುರಸ್ತಿಗೊಳಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ತಡೆ ನಡೆಸಿ ಧರಣಿ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಮಂಗಳೂರು | ತಿರುವು ಪಡೆದುಕೊಂಡ ತಾರಾನಾಥ ಕೊಲೆ ಪ್ರಕರಣ: ಅಕ್ಕನಿಂದಲೇ ಹತ್ಯೆ!
ಡಿವೈಎಫ್ಐ ಉಳ್ಳಾಲ ತಾಲೂಕು ಕಾರ್ಯದರ್ಶಿ ರಿಝ್ವಾನ್ ಹರೇಕಳ ಮಾತನಾಡಿದರು. ಪ್ರತಿಭಟನೆಯಲ್ಲಿ ರಫೀಕ್ ಹರೇಕಳ, ಶಾಫಿ ಮುಡಿಪು, ಅಲಿ ಕಾಯಾರ್, ರಾಮಚಂದ್ರ ಫಜೀರ್, ಫಾರೂಕ್ ಕೊಣಾಜೆ, ಅಬೂಬಕ್ಕರ್ ಜಲ್ಲಿ, ಇಕ್ಬಾಲ್ ಕುರ್ನಾಡು, ನೌಶಾದ್ ಕುರ್ನಾಡು, ಖಲೀಲ್ ನಂದರಪಡ್ಪು, ಇಕ್ಬಾಲ್ ಹರೇಕಳ, ಹೈದರ್ ಆಲಡ್ಕ, ಬಶೀರ್ ಲಚ್ಚಿಲ್, ರಫೀಕ್ ಕಡ್ವಾಯಿ, ಇಬ್ರಾಹಿಂ ಮದಕ, ಭರತ್ ಕುತ್ತಾರ್, ಇಬ್ರಾಹಿಂ ಹೂ ಹಾಕುವ ಕಲ್ಲು ಮುಂತಾದವರು ಉಪಸ್ಥಿತರಿದ್ದರು. ರಝಾಕ್ ಮುಡಿಪು ಸ್ವಾಗತಿಸಿ, ಅಲ್ತಾಫ್ ಮುಡಿಪು ವಂದಿಸಿದರು.
