ಬಾಗಲಕೋಟೆ ಜಿಲ್ಲೆಯ ಹುನಗುಂದದಲ್ಲಿ ಪುರಸಭೆಯ ಹಲವಾರು ಮಳಿಗೆಗಳು ಖಾಲಿಬಿದ್ದಿವೆ. ಬಾಡಿಗೆ ಹೆಚ್ಚಾದ ಕಾರಣಕ್ಕೆ ಬಾಡಿಗೆದಾರರು ಮಳಿಕೆಗಳನ್ನು ಪಡೆದುಕೊಳ್ಳುತ್ತಿಲ್ಲ ಎಂಬ ಮಾತುಗಳಿವೆ. ನಗರದಲ್ಲಿ 18ಕ್ಕೂ ಹೆಚ್ಚು ಮಳಿಗೆಗಳು ಹರಾಜಾಗದೆ ದಶಕದಿಂದಲೂ ಖಾಲಿ ಬಿದ್ದಿವೆ. ಪರಿಣಾಮ, ಪುರಸಭೆ ಆದಾಯಕ್ಕೆ ಕತ್ತರಿ ಬಿದ್ದಂತಾಗಿದೆ.
ಹುನಗುಂದ ನಗರ ವ್ಯಾಪ್ತಿಯಲ್ಲಿ ಪುರಸಭೆಯು 2006-07ನೇ ಸಾಲಿನ ಐಡಿಎಸ್‌ಎಂಟಿ ಯೋಜನೆಯಡಿ 20 ವಾಣಿಜ್ಯ ಮಾಳಿಗೆಗಳನ್ನು ನಿರ್ಮಿಸಿತ್ತು. ಮಳಿಗೆಗಳಿಗೆ 4,500 ರೂ. ಬಾಡಿಗೆಯನ್ನು ನಿಗದಿ ಮಾಡಿತ್ತು. ಬಾಡಿಗೆ ಹೆಚ್ಚಾದ ಕಾರಣ ಈ ಮಳಿಗೆಗಳನ್ನು ಬಾಡಿಗೆಗೆ ಪಡೆಯಲು ವ್ಯಾಪಾರಿಗಳು ಮುಂದೆ ಬರುತ್ತಿಲ್ಲ. ಹಲವು ವರ್ಷಗಳಿಂದ ಮಳಿಗೆಗಳು ಖಾಲಿ ಬಿದ್ದಿವೆ, ಇಲಿ, ಹೆಗ್ಗಣದಂತಹ ಪ್ರಾಣಿಗಳ ವಾಸಸ್ಥಾನವಾಗಿ ಮಾರ್ಮಟ್ಟಿವೆ. ಮಳೆ-ಗಾಳಿಯಿಂದ ಶಿಥಿಲಗೊಳ್ಳುತ್ತಿವೆ.

ಬಿಎಸ್‌ಎನ್‌ಎಲ್ ಕಚೇರಿ ಹತ್ತಿರ, ವಿದ್ಯಾನಗರ ಸೇರಿದಂತೆ ಹಲವೆಡೆ ಪುರಸಭೆಯು ಮಳಿಗೆಗಳನ್ನು ನಿರ್ಮಾಣ ಮಾಡಿದೆ. ಹಲವು ವ್ಯಾಪ್ತಿಗಳು ಬೀದಿ ಬದಿಗಳಲ್ಲಿ ಹಾಗೂ ತಗಡಿನ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಬೀದಿಬದಿ ವ್ಯಾಪಾರಿಗಳು ದಿನನಿತ್ಯ 20 ರೂ. ನೆಲದ ಬಾಡಿಗೆ ಕೊಟ್ಟು ವ್ಯಾಪಾರ ಮಾಡುತ್ತಿದ್ದರೆ, ತಿಂಗಳಿಗೆ 600 ಕೊಟ್ಟು ತಗಡಿನ ಅಂಗಡಿಗಳಲ್ಲಿ ಕೆಲವರು ವ್ಯಾಪಾರ ನಡೆಸುತ್ತಿದ್ದಾರೆ. ಆದರೆ, ಈ ಮಳಿಗೆಗಳತ್ತ ಮುಖ ಮಾಡುತ್ತಿಲ್ಲ. ಇದಕ್ಕೆ ಕಾರಣ, ಒಂದು ಮಳಿಗೆಗೆ ಬರೋಬ್ಬರಿ 4,500 ರೂ. ಬಾಡಿಗೆ ಇರುವುದು ಎಂದು ಸ್ಥಳೀಯರು ಹೇಳುತ್ತಾರೆ.
ಈ ವರದಿ ಓದಿದ್ದೀರಾ?: ನಟ ದರ್ಶನ್ ಅಭಿಮಾನಿಗಳ ಅತಿರೇಕಕ್ಕೆ ಕೊನೆಯೇ ಇಲ್ಲವೇ, ಕೊಲೆಯೂ ಸಮರ್ಥನೀಯವೇ?
ಪುರಸಭೆ ಮಳಿಗೆಗಳಿಗೆ ನಿಗದಿ ಮಾಡಿರುವ ದುಬಾರಿ ಬಾಡಿಗೆ ಹಾಗೂ ಡೆಪಾಸಿಟ್ ಮೊತ್ತವನ್ನು ಕಡಿಮೆ ಮಾಡಿ ಮಳಿಗೆ ಹರಾಜು ಮಾಡಬೇಕೆಂದು ಹಲವು ಬಾರಿ ಪುರಸಭೆ ಸದಸ್ಯರು ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದ್ದಾರೆ. ಆದರೂ, ಪುರಸಭೆಯ ಮುಖ್ಯ ಅಧಿಕಾರಿ ನಿರ್ಲಕ್ಷ್ಯ ಧೋರಣೆ ತಳೆದಿದ್ದು, ಅವರ ಬೇಜವಾಬ್ದಾರಿಯಿಂದ ಮಳಿಗೆಗಳು ಖಾಲಿ ಬಿದ್ದಿವೆ ಎನ್ನುತ್ತಾರೆ ಪುರಸಭೆ ಸದಸ್ಯರು.
ಆದಾಯ ಶೂನ್ಯ: ಪುರಸಭೆಯಿಂದ ಕೋಟ್ಯಂತರ ರೂ. ಖರ್ಚು ಮಾಡಿ ಮಳಿಗೆಗಳನ್ನು ನಿರ್ಮಿಸಲಾಗಿದೆ. ಪುರಸಭೆ ಒಂದು ಮಳೆಗೆಗೆ 4,500 ರೂ. ನಿಗದಿ ಮಾಡಿದೆ. ಆದರೆ, ವ್ಯಾಪರಿಗಳು 2,000 ರೂ. ಅಥವಾ 2,500 ರೂ. ನಿಗದಿ ಮಾಡಿ ಎನ್ನುತ್ತಿದ್ದಾರೆ. ಬಾಡಿಗೆ ಕಡಿಮೆಯಾಗದ ಕಾರಣ ಮಳಿಗೆಗಳು ಖಾಲಿ ಬಿದ್ದಿವೆ. ಮಳಿಗೆಗಳಿಂದ ಲಕ್ಷಾಂತರ ರೂ. ಆದಾಯ ನಿರೀಕ್ಷೆ ಮಾಡಲಾಗಿತ್ತು. ದುಬಾರಿ ಬಾಡಿಗೆಯಿಂದ ಯಾರೊಬ್ಬರೂ ಮಳಿಗೆಗಳನ್ನು ಬಾಡಿಗೆಗೆ ಪಡೆಯದ ಕಾರಣ, ಪುರಸಭೆಗೆ ಮಳಿಗೆಗಳಿಂದ ಯಾವುದೇನ ಆದಾಯ ಬರುತ್ತಿಲ್ಲ.
ಈದಿನ.ಕಾಮ್ ಪ್ರತಿನಿಧಿ ಪುರಸಭೆ ಪ್ರಭಾರಿ ಮುಖ್ಯ ಅಧಿಕಾರಿಗೆ ಕರೆ ಮಾಡಿದಾಗ ಅಧಿಕಾರಿಗಳು ಫೋನ್ ನಿರಾಕರಿಸಿದ್ದಾರೆ. ಹಲವು ಬಾರಿ ಕರೆ ಮಾಡಿದ್ದಾಗಿಯೂ ಅವರು ಕರೆ ಸ್ವೀಕರಿಸಿಲ್ಲ. ಪುರಸಭೆ ಸದಸ್ಯರಾಗಲಿ, ಪುರಸಭೆ ಅಧಿಕಾರಿಗಳಾಗಲಿ ಮಳಿಗೆಗಳ ಬಾಡಿಗೆ ವೆಚ್ಚ ಕಡಿಮೆ ಮಾಡಿ ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ಮಳಿಗೆಗಳನ್ನು ಬಾಡಿಗೆಗೆ ಕೊಡವರೇ ಎಂದು ಕಾದು ನೋಡಬೇಕಿದೆ.

ಊರೊಟ್ಟಿನ ದುಡ್ಡು ಈ ಬಗೆಯಲ್ಲಿ ಪೋಲಾಗಲು ಯಾರು ಕಾರಣ ಎಂಬುದರ ಬಗ್ಗೆ ಒರೆಹಚ್ಚಿ ಅಂತವರನ್ನು ಹೊಣೆಗಾರರನ್ನಾಗಿಸಿದರೆ ಮುಂದೆ ಇಂತಹುಗಳು ಆಗುವುದನ್ನು ತಡೆಯಬಹುದು.
ಇತರೆ ಉಳಿದ ಊರುಗಳಲ್ಲಿ ಈಬಗೆಯ ಕೇಸುಗಳು ಬಯಲಾಗಲಿ. ನಾಚುರಲ್ ಸಂಪತ್ತಿನ ಪೋಲು ನಿಲ್ಲಲಿ.