ಪ್ರತಿಯೊಂದು ಆತ್ಮಹತ್ಯೆಯೂ ನಮ್ಮ ಆರೋಗ್ಯ ವ್ಯವಸ್ಥೆಯ ಮಿತಿಯ ದ್ಯೋತಕ

Date:

Advertisements
ಆರ್ಥಿಕ, ಸಾಮಾಜಿಕ ಸಂಕಟಗಳು ಎದುರಾದಾಗ ಅದಕ್ಕೆ ''ಆತ್ಮಹತ್ಯೆ ಪರಿಹಾರ'' ಎಂದು ಪರೋಕ್ಷವಾಗಿ ಬೊಟ್ಟುಮಾಡುವ ಇಂತಹ ಎಲ್ಲ ಡಿಯರ್ ಮೀಡಿಯಾಗಳೂ ಇಂದು ಸಾಮಾಜಿಕ ಪಿಡುಗುಗಳೇ. ಇಂತಹ ಪ್ರತೀ ಸಾವಿಗೂ ಅವರು ಕೂಡ ಕಾರಣ.

ಪ್ರತೀಬಾರಿ ಸೆಲೆಬ್ರಿಟಿ ಆತ್ಮಹತ್ಯೆಯೊಂದು ಸಂಭವಿಸಿದಾಗ, ಮಾಧ್ಯಮಗಳ ವರ್ತನೆ ಮತ್ತು ಆ ಸಾವನ್ನು ಕಂಡ/ಕೇಳಿದ ಜನಸಾಮಾನ್ಯರ ಸಾಮಾಜಿಕ ಮಾಧ್ಯಮಗಳಲ್ಲಿನ ವರ್ತನೆಗಳು – ಜನರ ನಡುವೆ ಮಾನಸಿಕ ಆರೋಗ್ಯದ ಕುರಿತು ಎಚ್ಚರ ಮೂಡಿಸುವಲ್ಲಿ ನಮ್ಮ ಆರೋಗ್ಯ ವ್ಯವಸ್ಥೆಯ ವೈಫಲ್ಯವನ್ನು, ಅದರ ಮಿತಿಯನ್ನು ಬಟಾಬಯಲು ಮಾಡುತ್ತವೆ.

ಅದಕ್ಕಿಂತ ಕೆಡುಕಿನದೆಂದರೆ, ಒಂದು ಸಾವು ಸಂಭವಿಸಿದಾಗ, (ಅದೆಷ್ಟೇ ಘೋರ/ದುರಂತಮಯವಾಗಿರಲಿ) ಆ ಸಾವಿಗೆ ಒಂದು ಘನತೆಯನ್ನೂ, ಮೃತಪಟ್ಟ ಸಹಜೀವಿಗೆ ಒಂದು ಗೌರವಯುತ ವಿದಾಯವನ್ನೂ ಕೋರುವುದು ಕೂಡ ಸಾಧ್ಯವಾಗದ ”ಅತಿನಾಗರಿಕ” ಸ್ಥಿತಿಗೆ ನಾವು ತಲುಪಿರುವುದು.

ಆತ್ಮಹತ್ಯೆಯ ಯೋಚನೆಗಳು ಬರುವುದು (ಐಡಿಯೇಷನ್) ಮತ್ತು ಆತ್ಮಹತ್ಯೆಗೆ ತಯಾರಿಗಳು ನಡೆದಿರುವಾಗ ಅದರ ಅಡಿಪದರಗಳಲ್ಲಿರುವ, ಖಿನ್ನತೆಯಂತಹ ಹತ್ತಾರು ಮಾನಸಿಕ ಸಮಸ್ಯೆಗಳಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿರುತ್ತದೆ. ಅದನ್ನು ಒದಗಿಸದ ಸಮಾಜಕ್ಕೆ, ಆ ಸಾವನ್ನು ಹೀಯಾಳಿಸುವ, ಕಾಮೆಂಟ್ ಮಾಡುವ ನೈತಿಕ ಹಕ್ಕು ಉಳಿದಿರುವುದಿಲ್ಲ. ಸಾಮಾಜಿಕ ಜವಾಬ್ದಾರಿ ಹೊಂದಿರಬೇಕಾದ ನಮ್ಮ ಮಾಧ್ಯಮಗಳಂತೂ, ಆತ್ಮಹತ್ಯೆ ಪ್ರಕರಣಗಳನ್ನು (ಅದರಲ್ಲೂ ಸೆಲೆಬ್ರಿಟಿ ಆತ್ಮಹತ್ಯೆಗಳನ್ನು) ವರದಿ ಮಾಡುವಾಗ ತಮ್ಮ ಕಾನೂನು-ನೈತಿಕತೆಯ ಚೌಕಟ್ಟನ್ನೂ ಮೀರಿ ಕೆಡುಕರಂತೆ, ಸಮಾಜ ವಿರೋಧಿಗಳಂತೆ ವರ್ತಿಸುವುದನ್ನು ಅಭ್ಯಾಸ ಮಾಡಿಕೊಂಡುಬಿಟ್ಟಿವೆ.

Advertisements

ಇದನ್ನು ಓದಿದ್ದೀರಾ?: ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ನಿಧನ; ಆತ್ಮಹತ್ಯೆ ಶಂಕೆ

ಆರ್ಥಿಕ, ಸಾಮಾಜಿಕ ಸಂಕಟಗಳು ಎದುರಾದಾಗ ಅದಕ್ಕೆ ”ಆತ್ಮಹತ್ಯೆ ಪರಿಹಾರ” ಎಂದು ಪರೋಕ್ಷವಾಗಿ ಬೊಟ್ಟುಮಾಡುವ ಇಂತಹ ಎಲ್ಲ ಡಿಯರ್ ಮೀಡಿಯಾಗಳೂ ಇಂದು ಸಾಮಾಜಿಕ ಪಿಡುಗುಗಳೇ. ಇಂತಹ ಪ್ರತೀ ಸಾವಿಗೂ ಅವರು ಕೂಡ ಕಾರಣ. ಅಂತಹ ಎಲ್ಲರ ಬಗ್ಗೆ ಹೇಸಿಗೆ ಪಡೋಣ. ನಮ್ಮ ಸುತ್ತ ಇಂತಹ ಆತ್ಮಹತ್ಯಾಕಾರಕ ಯೋಚನೆಗಳಿರುವ, ಖಿನ್ನತೆಯ ವ್ಯಕ್ತಿಗಳು ಕಾಣ/ಕೇಳ ಸಿಕ್ಕಿದರೆ, ಅವರಿಗೆ ತುರ್ತು ವೈದ್ಯಕೀಯ ಸಹಾಯ ಲಭ್ಯವಾಗುವಂತೆ ಪ್ರಯತ್ನಿಸೋಣ. ಸದ್ಯಕ್ಕೆ ಆರೋಗ್ಯವಂತ ಮನಸ್ಸುಗಳು ಮಾಡಬಹುದಾದದ್ದು ಇದೊಂದನ್ನೇ.

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
+ posts

ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಾಜಾರಾಂ ತಲ್ಲೂರು
ರಾಜಾರಾಂ ತಲ್ಲೂರು
ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು. ಉಡುಪಿಯ ಕುಂದಾಪುರ ತಾಲ್ಲೂಕಿನ ತಲ್ಲೂರು ಗ್ರಾಮದಲ್ಲಿ 1969ರಲ್ಲಿ ಜನಿಸಿದರು. ಕರಾವಳಿ ಅಲೆ, ಕೆನರಾಟೈಮ್ಸ್, ಜನಂತರಂಗ ಬಳಗದಲ್ಲಿ ಪತ್ರಕರ್ತರಾಗಿ ದುಡಿಮೆ ಆರಂಭಿಸಿದರು. ಪಟ್ಟಾಂಗ ಎಂಬ ಪತ್ರಿಕೆ ಮತ್ತು ಸವಿ ಎಂಬ ಜಾಹೀರಾತು ಏಜೆನ್ಸಿ ಪ್ರಾರಂಭಿಸಿದರು. 2000ರಲ್ಲಿ ಉದಯವಾಣಿ ಆನ್ ಲೈನ್ ಆವೃತ್ತಿಗೆ ಸುದ್ದಿ ಸಂಪಾದಕರಾಗಿ, ಆರೋಗ್ಯ ಪುರವಣಿಗೆ ಸಂಪಾದಕರಾಗಿ ಸೇವೆ ಸಲ್ಲಿಸಿದರು. 2008ರಿಂದ ತಲ್ಲೂರಿನಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್(ರಿ.) ಮೂಲಕ ನಾರಾಯಣ ವಿಶೇಷ ಮಕ್ಕಳ ಶಾಲೆ ಮತ್ತಿತರ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಲೇ 2015ರಲ್ಲಿ ಪ್ರೊಡಿಜಿ ಮುದ್ರಣ -ಸಂಸ್ಥೆ ಆರಂಭಿಸಿದರು. ಪ್ರಕಟಿತ ಕೃತಿಗಳು: 'ನುಣ್ಣನ್ನ ಬೆಟ್ಟ' (2017), 'ತಲ್ಲೂರು ಎಲ್ ಎನ್'(2018), 'ಏನಿದು ಪೌರತ್ವ ಕಾಯಿದೆ? (2019), 'ದುಪ್ಪಟ್ಟು'(2020), ಕರಿಡಬ್ಬಿ(2022). ಪುರಸ್ಕಾರಗಳು: ಅಮ್ಮ ಪ್ರಶಸ್ತಿ(2017), ಶಿವರಾಮ ಕಾರಂತ ಪುರಸ್ಕಾರ-2019 (2020).

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹರೀಶ್‌ ಪೂಂಜಾ ಪ್ರಕರಣ | ಹೈಕೋರ್ಟ್‌ ನೀಡಿದ ತಡೆ ತೆರವಿಗೆ ಪ್ರಯತ್ನಿಸುವುದೇ ಸರ್ಕಾರ?

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಕಾರ ರಾಜಕೀಯ ಕಾರಣಕ್ಕೆ ಹಾಗೆಲ್ಲ ಮಾತನಾಡಿದ್ರೆ ಸುಮ್ಮನಿದ್ದು ಬಿಡಬೇಕು,...

ಚುನಾವಣಾ ಆಯೋಗದ ವಿರುದ್ಧ ತೊಡೆ ತಟ್ಟಿದ ಇಂಡಿಯಾ ಒಕ್ಕೂಟ: ಕೆಟ್ಟ ವ್ಯವಸ್ಥೆಯ ವಿರುದ್ಧ ಹೋರಾಟ

ಭಾರತದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ಒಂದು ನಿರ್ಣಾಯಕ ಘಟ್ಟವಾಗಿದೆ. ಇದು ಕೇವಲ ಒಂದು...

ಸಂಪೂರ್ಣ ನೆಲಕಚ್ಚಿದ ಸೋಯಾಬೀನ್‌ ಬೆಳೆ: ಪರಿಹಾರದ ನಿರೀಕ್ಷೆಯಲ್ಲಿ ರೈತರು

ಬೈಲಹೊಂಗಲ, ಸವದತ್ತಿ, ಕಿತ್ತೂರು ಸೇರಿದಂತೆ ಬೆಳಗಾವಿ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅತಿ...

ಧರ್ಮಸ್ಥಳ ಪ್ರಕರಣ | ಬಿಜೆಪಿಯವರು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಕ್ಕಿಂತ ವಿತಂಡವಾದದಲ್ಲಿ ಮುಳುಗಿದ್ದೇ ಹೆಚ್ಚು!

ಧರ್ಮಸ್ಥಳದಲ್ಲಿ ಅನ್ಯಾಯವಾಗಿ ಶವವಾಗಿರುವ ಅದೆಷ್ಟೋ ಜನರು ಹಿಂದುಗಳು ಎನ್ನಲಾಗುತ್ತಿದೆ. ಹಿಂದೂ ಧರ್ಮದ...

Download Eedina App Android / iOS

X