ಈ ದಿನ ಸಂಪಾದಕೀಯ | ಪ್ಲಾಸ್ಟಿಕ್ ತ್ಯಾಜ್ಯಕ್ಕೆ ಕಡಿವಾಣ ಯಾವಾಗ?

Date:

Advertisements
ಸಮಯೋಚಿತ ರೀತಿಯಲ್ಲಿ ಕ್ರಮಗಳನ್ನು ಜಾರಿಗೊಳಿಸಿದರೆ, ಪ್ಲಾಸ್ಟಿಕ್ ತ್ಯಾಜ್ಯದ ಹಾವಳಿಯನ್ನು ನಿಯಂತ್ರಿಸಲು ಅವಕಾಶವಿದೆ. ಸರ್ಕಾರ ಮತ್ತು ಆಡಳಿತ ವರ್ಗ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ತಮ್ಮ ಹೊಣೆಯನ್ನು ನಿರ್ವಹಿಸಬೇಕಿದೆ.

ಭಾರತದಲ್ಲಿ ಪ್ಲಾಸ್ಟಿಕ್ ಸಮಸ್ಯೆ ಮುಂದುವರೆದೇ ಇದೆ. ಸರ್ಕಾರಗಳು ನಾನಾ ರೀತಿಯ ಕ್ರಮಗಳು, ನೀತಿ-ನಿಯಮಗಳನ್ನು ರೂಪಿಸುತ್ತಿವೆ. ಅಧಿಕಾರಿಗಳು ಪ್ಲಾಸ್ಟಿಕ್ ನಿರ್ಮೂಲನೆಗೆ ಭಾರೀ ಕ್ರಮಗಳನ್ನು ಜರುಗಿಸುತ್ತಿರುವುದಾಗಿ ಅಬ್ಬರಿಸುತ್ತಿದ್ದಾರೆ. ಪ್ಲಾಸ್ಟಿಕ್ ನಿರ್ಮೂಲನೆಯ ವಿಚಾರದಲ್ಲಿ ಚಿಲ್ಲರೆ ಅಂಗಡಿಗಳ ಮೇಲಷ್ಟೇ ದಾಳಿ ಮಾಡಿ, ಒಂದಷ್ಟು ಪ್ಲಾಸ್ಟಿಕ್ ವಶಕ್ಕೆ ಪಡೆದು, ದಂಡ ವಿಧಿಸಿ, ಅದೇ ತಮ್ಮ ಸಾಧನೆ ಎಂಬಂತೆ ಸರ್ಕಾರ ಮತ್ತು ಅಧಿಕಾರಗಳು ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ.

ದೇಶದಲ್ಲಿ ಪ್ಲಾಸ್ಟಿಕ್ ಮತ್ತು ಅದರ ತ್ಯಾಜ್ಯ ಸಮಸ್ಯೆಯನ್ನು ನಿರ್ವಹಿಸಲು ಎಕ್ಸ್‌ಟೆಂಡೆಡ್ ಪ್ರೊಡ್ಯೂಸರ್ ರೆಸ್ಪಾನ್ಸಿಬಿಲಿಟಿ (ವಿಸ್ತೃತ ಉತ್ಪಾದಕರ ಜವಾಬ್ದಾರಿ – ಇಪಿಆರ್) ಮಾರ್ಗಸೂಚಿಗಳು ನೆರವಾಗಬಹುದು. ಪ್ಲಾಸ್ಟಿಕ್ ತಡೆಗೆ ಸರ್ಕಾರಗಳು ನಾನಾ ಕ್ರಮಗಳನ್ನು ತೆಗೆದುಕೊಂಡರೂ, ಪ್ರಯತ್ನಗಳು ಸಾಕಾಗುತ್ತಿದೆ. ಪರಿಣಾಮ ಫಲ ಕೊಡುತ್ತಿಲ್ಲ ಎಂದು ದೆಹಲಿಯ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (ಸಿಎಸ್ಇ)ನ ಹೊಸ ಅಧ್ಯಯನ ಹೇಳುತ್ತಿದೆ.

2022ರ ಫೆಬ್ರವರಿ 16ರಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಇಪಿಆರ್ ಮಾರ್ಗಸೂಚಿ ಪ್ರಕಾರ, ಪ್ಲಾಸ್ಟಿಕ್ ತ್ಯಾಜ್ಯಗಳಿಗೆ ಪ್ಲಾಸ್ಟಿಕ್ ವಸ್ತುಗಳ ಉತ್ಪಾದಕರು ಮತ್ತು ಇತರ ಪಾಲುದಾರರು (ಕೊಳ್ಳುವವರು ಮತ್ತು ಮಾರುವವರು) ಸಂಪೂರ್ಣ ಜವಾಬ್ದಾರರಾಗಿರುತ್ತಾರೆ. ಇದರರ್ಥ, ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹಣೆ, ಸಾಗಣೆ ಹಾಗೂ ಮರುಬಳಕೆಗೆ ಒಳಪಡಿಸುವುದು ಉತ್ಪಾದಕರು, ಮಾರಾಟಗಾರರ ಹೊಣೆಯಾಗುತ್ತದೆ. ಅಲ್ಲದೆ, ಅವರೆಲ್ಲರೂ ಇಪಿಆರ್ ಪೋರ್ಟಲ್‌ನಲ್ಲಿ ತಮ್ಮ ಸಂಸ್ಥೆಯನ್ನು ನೋಂದಣಿ ಮಾಡಿಸಬೇಕು.

Advertisements

ಹೊಸ ಅಧ್ಯಯನದ ಪ್ರಕಾರ, ಇಪಿಆರ್ ಪೋರ್ಟಲ್ ಒಟ್ಟು 41,577 ಸಂಸ್ಥೆಗಳು ನೋಂದಣಿಯಾಗಿವೆ. ಅವುಗಳಲ್ಲಿ 83% ಆಮದುದಾರರು, 11% ಉತ್ಪಾದಕರು ಹಾಗೂ 6% ಬ್ರ್ಯಾಂಡ್ ಮಾಲೀಕರು. ಇವುಗಳಲ್ಲಿ, ಹೆಚ್ಚಿನ ಪ್ಲಾಸ್ಟಿಕ್ ನಿರ್ವಹಣ ಮತ್ತು ಮರುಬಳಕೆಗೆ ಉತ್ಪಾದಕರು ಹೆಚ್ಚಿನ ಜವಾಬ್ದಾರರಾಗಿರುತ್ತಾರೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ವಕ್ಫ್‌ ವಿವಾದವೆಂಬ ಕೃತಕ ಸೃಷ್ಟಿ – ಮತ್ತೊಮ್ಮೆ ಮಾಧ್ಯಮಗಳ ಬಣ್ಣ ಬಯಲು

ಗಂಭೀರ ವಿಚಾರವೆಂದರೆ, 2022ರ ಏಪ್ರಿಲ್ ನಂತರ ಇಪಿಆರ್ ಪೋರ್ಟಲ್‌ನಲ್ಲಿ ದಾಖಲಾಗಿರುವಂತೆ, ಭಾರತೀಯ ಮಾರುಕಟ್ಟೆಗೆ ವಾರ್ಷಿಕ 23.9 ದಶಲಕ್ಷ ಟನ್ ಪ್ಯಾಕೇಜಿಂಗ್ ಪ್ಲಾಸ್ಟಿಕ್ ಉತ್ಪನ್ನಗಳು ಬರುತ್ತಿವೆ. ಆ ಪ್ಲಾಸ್ಟಿಕ್ ಬಳಸುವವರಲ್ಲಿ ನಾನಾ ರೀತಿಯ ಉತ್ಪನ್ನಗಳನ್ನು ತಯಾರಿಸುವ ಉತ್ಪಾದಕರದ್ದೇ ಸಿಂಹಪಾಲಿದೆ. ಒಟ್ಟು ಪ್ಲಾಸ್ಟಿಕ್ ಬಳಕೆಯಲ್ಲಿ ಉತ್ಪಾದಕರು 65% ಪಾಲು ಹೊಂದಿದ್ದಾರೆ. ಬ್ರ್ಯಾಂಡ್ ಮಾಲೀಕರು 26% ಪಾಲು ಹೊಂದಿದ್ದರೆ, ಮಾರಾಟಗಾರರು ಕೇವಲ 9% ಪಾಲು ಹೊಂದಿದ್ದಾರೆ. ಆದರೆ, ಸರ್ಕಾರ ಮತ್ತು ಅಧಿಕಾರಗಳ ದಾಳಿ, ಕ್ರಮಗಳು ಈ 9% ಪ್ಲಾಸ್ಟಿಕ್ ಬಳಸುವ ಚಿಲ್ಲರೆ ಮಾರಾಟಗಾರರ ಮೇಲೆ ಮಾತ್ರವೇ ಕೇಂದ್ರೀಕರಿಸಿವೆ.

ಭಾರತದ ಮಾರುಕಟ್ಟೆಗೆ ಬರುತ್ತಿರುವ ಪ್ಯಾಕೇಜಿಂಗ್ ಪ್ಲಾಸ್ಟಿಕ್‌ನ ಪೈಕಿ ಬರೋಬ್ಬರಿ 66% ಪ್ಲಾಸ್ಟಿಕ್ ಮರುಬಳಕೆಗೆ ದೊರೆಯುತ್ತಿಲ್ಲ. ಅದು ಇತರ ತ್ಯಾಜ್ಯಗಳೊಂದಿಗೆ ಭೂಮಿಯಲ್ಲಿ ಸೇರುತ್ತಿದೆ. ಅಂತಹ ಪ್ಲಾಸ್ಟಿಕ್ಅನ್ನು ಸಂಗ್ರಹಿಸಲು ಮತ್ತು ಮರುಬಳಕೆ ಮಾಡಲು ಸಾಧ್ಯವಾಗುತ್ತಿಲ್ಲ. ಭಾರತದಲ್ಲಿ ಉತ್ಪಾದನೆಯಾಗುವ ಪ್ಲಾಸ್ಟಿಕ್ ತ್ಯಾಜ್ಯಗಳ ಪೈಕಿ ಒಂದು ಸಣ್ಣ ಭಾಗ ಮಾತ್ರ ಮರುಬಳಕೆಗೆ ಹೋಗುತ್ತದೆ ಎಂಬ ಅಂಶವನ್ನು ಸಿಎಸ್ಇ ಎತ್ತಿತೋರಿಸಿದೆ.

ಪ್ಲಾಸ್ಟಿಕ್ ತ್ಯಾಜ್ಯದಿಂದ ತೈಲ, ವಿದ್ಯುತ್, ಸಿಮೆಂಟ್ಅನ್ನು ಉತ್ಪಾದಿಸಬಹುದಾಗಿದ್ದರೂ, ಈ ಕಾರ್ಖಾನೆಗಳಿಗೂ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಪೂರೈಕೆಯಾಗುತ್ತಿಲ್ಲ ಅಥವಾ ಸಂಗ್ರಹಣೆಯಾಗುತ್ತಿಲ್ಲ. ದೇಶಾದ್ಯಂತ ಸಿಮೆಂಟ್ ಕಾರ್ಖಾನೆಗಳು ವಾರ್ಷಿಕ 335.4 ದಶಲಕ್ಷ ಟನ್ ಪ್ಲಾಸ್ಟಿಕ್ ತ್ಯಾಜ್ಯ ಬಳಸಬಹುದಾದ ಸಾಮರ್ಥ್ಯ ಹೊಂದಿವೆ. ಆದರೆ, ಅವು ಕೇವಲ 11.4 ದಶಲಕ್ಷ ಟನ್ ಪ್ಲಾಸ್ಟಿಕ್ಅನ್ನು ಮಾತ್ರ ಬಳಸುತ್ತಿವೆ.

2023ರ ಅಕ್ಟೋಬರ್‍‌ನಲ್ಲಿ ಆಯಾ ರಾಜ್ಯಗಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ನಕಲಿ ಪ್ರಮಾಣಪತ್ರ ಹೊಂದಿರುವ ಉತ್ಪಾದಕರನ್ನು ಕಂಡುಹಿಡಿದಿದ್ದವು. ಅವರಿಗೆ ದಂಡವನ್ನೂ ವಿಧಿಸಿದ್ದವು. ಆದರೂ, ಪ್ಲಾಸ್ಟಿಕ್ ಉತ್ಪಾದನೆ ಮತ್ತು ಬಳಕೆ ಮೇಲೆ ಹೆಚ್ಚಿನ ನಿಯಂತ್ರಣ ಸಾಧ್ಯವಾಗಲಿಲ್ಲ.

ಈ ರೀತಿಯಲ್ಲಿ ನಕಲಿ ಪ್ರಮಾಣಪತ್ರಗಳೊಂದಿಗೆ ಪ್ಲಾಸ್ಟಿಕ್ ಉತ್ಪಾದನೆಯು, ವ್ಯವಸ್ಥೆಯ ಮೇಲಿನ ವಿಶ್ವಾಸಾರ್ಹತೆಯನ್ನು ದುರ್ಬಲಗೊಳಿಸುತ್ತವೆ. ನಕಲಿ ಉತ್ಪಾದಕರ ಜಾಲವು ಮತ್ತಷ್ಟು ವಿಸ್ತರಿಸುತ್ತದೆ. ಹೀಗಾಗಿ, ಪ್ಯಾಕೇಜಿಂಗ್ ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆ, ಸಂಗ್ರಹಣೆ ಹಾಗೂ ಮರುಬಳಕೆಗಾಗಿ ಇಪಿಆರ್ ಮಾರ್ಗಸೂಚಿಗಳನ್ನು ಮತ್ತಷ್ಟು ದೃಢವಾಗಿಸುವ ಅಗತ್ಯವಿದೆ. ಸಮಯೋಚಿತ ರೀತಿಯಲ್ಲಿ ಕ್ರಮಗಳನ್ನು ಜಾರಿಗೊಳಿಸಿದರೆ, ಪ್ಲಾಸ್ಟಿಕ್ ತ್ಯಾಜ್ಯದ ಹಾವಳಿಯನ್ನು ನಿಯಂತ್ರಿಸಲು ಅವಕಾಶವಿದೆ. ಸರ್ಕಾರ ಮತ್ತು ಆಡಳಿತ ವರ್ಗ ಜವಾಬ್ದಾರಿಯಿಂದ ಕೆಲಸ ಮಾಡಬೇಕಿದೆ. ತಮ್ಮ ಹೊಣೆಯನ್ನು ನಿರ್ವಹಿಸಬೇಕಿದೆ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಪ್ಲಾಸ್ಟಿಕ್ ನಿಷೇಧಿಶಿಸಲು ದಂಡದ ಅವಶ್ಯಕತೆ ಇಲ್ಲ. ದಂಡ ವಿಧಿಸಿದರೆ ಪ್ಲಾಸ್ಟಿಕ್ ಸಮಸ್ಯೆ ಬಗೆಹರಿಯುವುದು ಇಲ್ಲ. ಪ್ಲಾಸ್ಟಿಕ್ ಚೀಲಗಳ ಬದಲು ಸೆಣಬಿನ ಚೀಲಗಳನ್ನು ಸರ್ಕಾರ ರಿಯಾಯ್ತಿ ದರದಲ್ಲಿ ಮಾರಿದರೆ ಸಾಕು. ರೈತರಿಂದ ನೇರವಾಗಿ ಕಚ್ಚಾ ವಸ್ತು ಆದ ಸೆಣಬನ್ನು ನಂದಿನಿ ಹಾಲು ಕೊಳ್ಳುವ ರೀತಿಯಲ್ಲಿ ಬೆಂಬಲ ಬೆಲೆ ಕೊಟ್ಟು ಕೊಳ್ಳಬೇಕು. ನಂತರ ಚಿಕ್ಕ- ದೊಡ್ಡ ಬ್ಯಾಗ್ ಗಳನ್ನು ವಿಭಿನ್ನ ರೀತಿಯಲ್ಲಿ ತಯಾರಿಸಿ ಮಾರುಕಟ್ಟೆಗೆ ಬಿಡಬೇಕು. ಕಡ್ಡಾಯವಾಗಿ ಅಂಗಡಿ,ಮಳಿಗೆಗಳು, ಜನರು ಕೊಂಡುಕೊಳ್ಳಲೇ ಬೇಕು ಎಂದು ಆದೇಶಿಸಬೇಕು. ಪರ್ಯಾಯ ಮಾರ್ಗ ಇಲ್ಲದೆ ಬೆಲೆ ಕಡಿಮೆ ಇಲ್ಲದೆ ಇರುವ ಕಾರಣ ಪ್ಲಾಸ್ಟಿಕ್ ಬಳಕೆ ಹೆಚ್ಚಾಗುತ್ತಿದೆ.
    ಬೆಲೆ ಕಡಿಮೆ ಇರಬೇಕು, ಹಗುರವಾಗಿರಬೇಕು, ಬಳಕೆಗೆ ಪೂರಕವಾಗಿರುವ ಆವಿಷ್ಕಾರ ಮಾಡದೆ ಪ್ಲಾಸ್ಟಿಕ್ ನಿಷೇಧಿಸಿ ಎನ್ನುವುದು ಎಷ್ಟು ಸರಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X