ವಿಜಯಪುರ | ಶರಣರ ಅನುಭವದ ನುಡಿಗಳೇ ಬದುಕಿನ ಸಮೃದ್ಧಿಯ ದಾರಿ: ಎಂ.ಎಸ್.ಮಾಗಣಗೇರಿ

Date:

Advertisements

’12ನೇ ಶತಮಾನದಲ್ಲಿ ಶರಣರು ತಮ್ಮ ವಚನಗಳ ಮೂಲಕ ಸನ್ನಡತೆಯಿಂದ ನಡೆಯಲು ಸಂದೇಶ ನೀಡಿದ್ದಾರೆ. ಅದರಲ್ಲಿ ಕಾಯಕ, ದಾಸೋಹ ನಮಗೆ ಮಾದರಿಯಾಗಿವೆ. ಬಸವಾದಿ ಶರಣರ ಚಿಂತನೆ ಮತ್ತು ಅನುಭವದ ನುಡಿಗಳೇ ಬದುಕಿನ ಸಮೃದ್ಧಿಯ ದಾರಿ’ ಎಂದು ಸಹಾಯಕ ಪ್ರಾಧ್ಯಾಪಕ ಎಂ.ಎಸ್.ಮಾಗಣಗೇರಿ ವಿಜಯಪುರದ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಹೇಳಿದರು.

ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಾಂಸ್ಕೃತಿಕ ಭವನದಲ್ಲಿ ಆಯೋಜಿಸಿದ್ದ ಚನ್ನಬಸವಣ್ಣನವರ ಮಾಸಿಕ ಶಿವಾನುಭವದ ಅಂಗವಾಗಿ ಅನುಭಾವವ ಕುರಿತು ಉಪನ್ಯಾಸ ನೀಡಿ ‘ಅಲ್ಲಮಪ್ರಭುವಿನ ನಂತರದ ಸ್ಥಾನ ಚನ್ನಬಸವಣ್ಣನವರದ್ದು, ವಚನ ಸಾಹಿತ್ಯವನ್ನು ರಕ್ಷಣೆ ಮಾಡಿದ ಕೆಲಸ ಅಮೋಘ, ಅವರು ರಚಿಸಿದ 1777 ವಚನಗಳು ಲಭ್ಯವಾಗಿವೆ’ ಎಂದರು.

ವಕೀಲ ವಿದ್ಯಾವತಿ ಅಂಕಲಗಿ ಮಾತನಾಡಿ, ‘ಶರಣರ ಅನುಭವದ ನುಡಿಗಳು, ಆಳ, ಅಗಲ. ನಿಲುಕಲು ಸಾಧ್ಯವಿಲ್ಲ. ಚನ್ನಬಸವಣ್ಣನವರ ವಚನಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು. ಜಿಲ್ಲಾ ಘಟಕದ ಅಧ್ಯಕ್ಷ ವಿ. ಸಿ.ನಾಗಠಾಣ ಮಾತನಾಡಿ, ಚನ್ನಬಸವಣ್ಣನವರು ಕೇವಲ 24 ವರ್ಷ ಮಾತ್ರ ಬದುಕಿದವರು. ವಚನ ಸಾಹಿತ್ಯದ ಮೂಲಕ ಜಲ, ತಪಗಳ ಪೂಜೆ ಬೇಕಾಗಿಲ್ಲ ಎಂದವರು’ ಎಂದು ಹೇಳಿದರು.

Advertisements

ಈ ವರದಿ ಓದಿದ್ದೀರಾ? ಸಮರ್ಪಕ ಬೆಲೆ ಸಿಗದೆ ಕಂಗಾಲಾಗುವ ಪರಿಸ್ಥಿತಿಯಲ್ಲಿ ರೈತರು

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ದ್ರಾಕ್ಷಾಯಣಿ ಬಿರಾದಾರ ಅವರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಅಕ್ಕಮಹಾದೇವಿ ಬುರ್ಲಿ, ವಿಠಲ ತೇಲಿ, ಸಹದೇವ ನಾಡಗೌಡರ, ಅಮರಣ್ಣವರ, ಎಸ್. ಎನ್. ಶಿವಣಗಿ,ಮಹಾದೇವ ಹಾಲಳ್ಳಿ, ಶಿವಪುತ್ರ ಪೋಳ, ಈಶ್ವರಗೊಂಡ ಬಸವರಾಜ ಒಂಟಗೂಡಿ, ಬಸವರಾಜ ಇಟ್ಟಂಗಿ, ಮ.ನು. ಪತ್ತಾರ, ಕಾಶಿನಾಥ ಅಣೆಪ್ಪನವರ, ವಿಠಲ ತೇಲಿ, ಎಂ.ಜಿ. ಯಾದವಾಡ, ಸಂಗಮೇಶ ಬದಾಮಿ ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X