ತಿಪಟೂರು | ಕಲ್ಪತರು ನಾಡಿನ ನೂತನ ಶಾಸಕರಿಗೆ ಸರಣಿ ಸವಾಲು

Date:

Advertisements

ಕಲ್ಪತರು ನಾಡಿನಲ್ಲಿ ಒಮ್ಮೆ ಗೆದ್ದವರ ಮರುಆಯ್ಕೆ ಕಷ್ಟಸಾಧ್ಯ ಎನ್ನುವುದು ಮತ್ತೊಮ್ಮೆ ಸಾಬೀತಾಗಿದ್ದು, ನೂತನ ಶಾಸಕರಾಗಿ ಕೆ ಷಡಕ್ಷರಿ ಆಯ್ಕೆಯಾಗಿದ್ದಾರೆ.

ತುಮಕೂರು ಜಿಲ್ಲೆ ತಿಪಟೂರು ವಿಧಾನಸಭಾ ಕ್ಷೇತ್ರದಲ್ಲಿ ಕೆ ಷಡಕ್ಷರಿ ಮೂರನೇ ಬಾರಿಗೆ ಆಯ್ಕೆಯಾಗಿದ್ದು, ದಾಖಲೆ ಬರೆದಿದ್ದಾರೆ. ಎರಡು ಬಾರಿ ಶಾಸಕರಾಗಿ ಕಾರ್ಯನಿರ್ವಹಿಸಿದ್ದರೂ ಅವರ ಮುಂದೆ ಸಾಗರದಷ್ಟು ಸವಾಲು, ಸಾವಿರದಷ್ಟು ನಿರೀಕ್ಷೆಗಳಿವೆ. ಇವುಗಳನ್ನು ಸರಿದೂಗಿಸಿಕೊಂಡು ಆಡಳಿತ ನಡೆಸುವುದು ಅವರ ಎದುರಿಗಿರುವ ಸದ್ಯದ ಸವಾಲಾಗಿದೆ.

‘ಕಲ್ಪತರು ನಾಡು’, ‘ಕೊಬ್ಬರಿ ಕಣಜ’ ಎಂದೇ ಪ್ರಖ್ಯಾತಿ ಪಡೆದಿರುವ ತಿಪಟೂರು ತಾಲೂಕು ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಕೊಬ್ಬರಿ ಮಾರುಕಟ್ಟೆ ಹೊಂದಿದೆ. ಕಳೆದ ವರ್ಷ ಕ್ವಿಂಟಲ್ ಕೊಬ್ಬರಿ ದರ ₹19,000 ತಲುಪಿತ್ತು. ಆದರೆ, ಐದು ತಿಂಗಳಿನಿಂದ ಕೊಬ್ಬರಿ ದರದಲ್ಲಿ ಭಾರೀ ಕುಸಿತವಾಗಿರುವುದು ರೈತರನ್ನು ಕೆಂಗೆಡಿಸಿತ್ತು.

Advertisements

“ತಾಲೂಕು ರೈತ ಸಂಘ ಕೊಬ್ಬರಿ ಬೆಲೆ ಏರಿಕೆಗೆ ಒತ್ತಾಯಿಸಿ 35 ದಿನ ಧರಣಿ ನಡೆಸಿತ್ತು. ಆಗ ಸ್ಥಳಕ್ಕೆ ಕೆ.ಷಡಕ್ಷರಿ ಬಂದಿದ್ದು, ಬೆಂಬಲ ವ್ಯಕ್ತಪಡಿಸಿದ್ದರು.  ಚುನಾವಣೆ ಪ್ರಚಾರ ವೇಳೆ ತಾಲೂಕಿಗೆ ಬಂದಿದ್ದ ಸಿದ್ದರಾಮಯ್ಯ ಕೊಬ್ಬರಿ ಬೆಲೆಯನ್ನು ₹15,000 ಏರಿಸುವ ಭರವಸೆ ನೀಡಿದ್ದರು. ಹಾಗಾಗಿ ಆಸೆ ಕಂಗಳಿನಿಂದ ಎದುರು ನೋಡುವಂತಾಗಿದೆ” ಎಂಬುದು ರೈತರ ಅಭಿಪ್ರಾಯವಾಗಿದೆ.

“ತಮ್ಮ ಬಳಿ ಈಗಾಗಲೇ ಕೊಬ್ಬರಿ ಶೇಖರಣೆಯಾಗಿದ್ದು, ತುಂಬಾ ತಡವಾದರೆ ಕೊಬ್ಬರಿಯ ಗುಣಮಟ್ಟ ಕಳಪೆಯಾಗುವ ಆತಂಕವಾಗಿದೆ. ಇನ್ನೂ ಕೊಬ್ಬರಿ ಬೆಲೆ ಕುಸಿತ ಕಂಡಾಗ ಕೊಬ್ಬರಿ ಹಾಳಾಗದಂತೆ ಶೇಖರಣೆ ಮಾಡಲು ಶಿತಲೀಕರಣ ಘಟಕದ ಅಗತ್ಯವಿದೆ. ಎಪಿಎಂಸಿಯಲ್ಲಿ ರೈತರದ್ದೇ ಸಾಕಷ್ಟು ಹಣ ಇದೆ. ಅದನ್ನು ಸದ್ಬಳಕೆ ಮಾಡಿಕೊಂಡು ಶಿತಲೀಕರಣ ಘಟಕ ಸ್ಥಾಪಿಸಬೇಕೆನ್ನುವುದು ಬಹುದಿನದ ಬೇಡಿಕೆಯಾಗಿದೆ” ಎಂದು ತಿಳಿಸಿದ್ದಾರೆ.

“2013ರಲ್ಲಿ ಕೆ.ಷಡಕ್ಷರಿ ಶಾಸಕರಾದಾಗ ತಿಪಟೂರು ತಾಲೂಕು ಗಣಿಬಾಧಿತ ಪ್ರದೇಶವಾಗಿರುವುದರಿಂದ ಸುಮಾರು ₹750 ಕೋಟಿ ಅನುದಾನ ಪ್ರದೇಶ ಅಭಿವೃದ್ಧಿಗೆ ಮೀಸಲಾಗಿದೆ. ಮೂರು ಜಿಲ್ಲೆಗಳಿಗೆ ಅನುಕೂಲವಾಗುವಂತಹ ಸರ್ಕಾರಿ ಹೈಟೆಕ್ ಸೂಪರ್ ಸ್ಫೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಗುರಿ ಹೊಂದಿದೆ. ಹಾಗಾಗಿ ತಾಲೂಕಿನ ತಿಮ್ಲಾಪುರದ ಬಳಿ ಜಾಗ ಗುರುತಿಸಲಾಗಿತ್ತು. ಇದೀಗ ಆಸ್ಪತ್ರೆ ನಿರ್ಮಾಣ ಕಾರ್ಯ ಜಾರಿಗೆ ಬರುವ ನಿರೀಕ್ಷೆಯಿದೆ” ಎಂದು ಸ್ಥಳೀಯರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಸಾರ್ವಜನಿಕ ಸಾರಿಗೆಯಲ್ಲಿ ಬರುವ ಪ್ರವಾಸಿಗರಿಗೆ ಬನ್ನೇರುಘಟ್ಟ ಚಿಟ್ಟೆ ಉದ್ಯಾನಕ್ಕೆ ಉಚಿತ ಪ್ರವೇಶ

“ತಾಲೂಕಿನ ಕೆಲ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಬಾಕಿ ಇದೆ. ಶಾಸಕರ ಅನುದಾನದಲ್ಲಿ, ವಿಶೇಷ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ ಆಗುವ ಸಾಧ್ಯತೆ ಇದೆ. ಗ್ರಾಮೀಣ ಭಾಗದಲ್ಲಿ ಮನೆ ಮನೆಗೆ ಜಲಜೀವನ್ ಮಿಷನ್ ಅಡಿಯಲ್ಲಿ ನೀರು ಸರಬರಾಜು ಮಾಡುತ್ತಿದ್ದು, ಶುದ್ಧ ಕುಡಿಯುವ ನೀರಿನ ಅಭಾವ ಇದೆ. ಹಾಗಾಗಿ ಬಹುತೇಕ ಗ್ರಾಮಗಳಿಗೆ ಶುದ್ಧ ನೀರಿನ ಘಟಕ ನಿರ್ಮಾಣ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.

“ಜನರ ನಂಬಿಕೆ ಉಳಿಸುವ ಯತ್ನ ರಾಜ್ಯದಲ್ಲಿಯೂ ಕಾಂಗ್ರೆಸ್ ಸರ್ಕಾರವೇ ಆಡಳಿತ ನಡೆಸುವುದರಿಂದ ತಾಲೂಕಿನ ಅಭಿವೃದ್ಧಿಗೆ ಸಕಲ ಪ್ರಯತ್ನ ಮಾಡಲಾಗುವುದು. ಈಗಾಗಲೇ ಅನೇಕ ಯೋಜನೆ ಜಾರಿಗೆ ತಂದಿದ್ದು, ಸಾವಿರಾರು ಕೋಟಿ ಅನುದಾನವನ್ನು ಹಿಂದೆಯೂ ತಂದಿದ್ದೇನೆ. ಮುಂದಿನ ದಿನಗಳಲ್ಲಿಯೂ ಹಲವು ನೂತನ ಯೋಜನೆಗಳೊಂದಿಗೆ ಸಮಗ್ರ ಅಭಿವೃದ್ಧಿಗೆ ಶ್ರಮಿಸಿ ಜನರ ನಂಬಿಕೆ ಉಳಿಸಿಕೊಳ್ಳುತ್ತೇನೆ” ಎಂದು ಶಾಸಕ ಕೆ.ಷಡಕ್ಷರಿ ಭರವಸೆ ನೀಡಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X