ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಸೇರಿದ 1,070 ಕೋಟಿ ರೂ ಸಾಗಿಸುತ್ತಿದ್ದ ಎರಡು ಕಂಟೈನರ್‌ಗಳ ಪೈಕಿ ಒಂದು ವಾಹನ ಚೆನ್ನೈನ ತಾಂಬರಂ ಬಳಿ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದರಿಂದ ಎರಡೂ ವಾಹನಗಳು ನಿಲುಗಡೆಗೊಂಡಿವೆ.
ಪೊಲೀಸ್ ಬೆಂಗಾವಲಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಮೂಲಕ ಚೆನ್ನೈನಿಂದ ವಿಳ್ಳುಪುರಂಗೆ ಸಾಗುತ್ತಿದ್ದ 535 ಕೋಟಿ ಹೊತ್ತ ಟ್ರಕ್ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದೆ. ಈ ಸುದ್ದಿ ತಿಳಿದು ಕ್ರೋಮ್ಪೇಟ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದರು. ನಂತರ ಹೆಚ್ಚಿನ ಭದ್ರತೆಗಾಗಿ ಪೊಲೀಸರನ್ನು ಕರೆಸಿಕೊಳ್ಳಲಾಯಿತು. ವಿಳ್ಳುಪುರಂಗೆ ನಗದನ್ನು ಪೂರೈಸಲು ಇವೆರಡೂ ವಾಹನಗಳು ಹೊರಟಿದ್ದವು.
ಭದ್ರತೆಯ ದೃಷ್ಟಿಯಿಂದ ಕೆಟ್ಟು ನಿಂತಿದ್ದ ಟ್ರಕ್ ಅನ್ನು ಚೆನ್ನೈನಲ್ಲಿರುವ ತಾಂಬರಂನ ರಾಷ್ಟ್ರೀಯ ಸಿದ್ಧಸಂಸ್ಥೆಗೆ ಸಾಗಿಸಲಾಯಿತು. ಕೆಟ್ಟು ನಿಂತಿರುವ ಟ್ರಕ್‌ನ ತಾಂತ್ರಿಕ ದೋಷ ಪತ್ತೆ ಹಚ್ಚಲು ತಾಂಬರಂನ ಸಹಾಯಕ ಆಯುಕ್ತ ಶ್ರೀನಿವಾಸನ್ ಅವರು ತಮ್ಮ ತಂಡದೊಂದಿಗೆ ಸ್ಥಳಕ್ಕೆ ಧಾವಿಸಿದರು.
ಈ ಸುದ್ದಿ ಓದಿದ್ದೀರಾ? ಅದಾನಿ ಸಮೂಹದ ತನಿಖೆಗೆ ಸೆಬಿಗೆ ಮೂರು ತಿಂಗಳು ಸಮಯ ನೀಡಿದ ಸುಪ್ರೀಂ ಕೋರ್ಟ್
ನಂತರ ಟ್ರಕ್ ಅನ್ನು ರಾಷ್ಟ್ರೀಯ ಸಿದ್ಧಸಂಸ್ಥೆಗೆ ಸಾಗಿಸಿ ಅದರ ಬಾಗಿಲುಗಳನ್ನು ಮುಚ್ಚಲಾಯಿತು. ಕೆಲ ದಿನಗಳ ಮಟ್ಟಿಗೆ ರಾಷ್ಟ್ರೀಯ ಸಿದ್ಧಸಂಸ್ಥೆ ಆವರಣಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಟ್ರಕ್ ದುರಸ್ತಿಗೆಂದು ಬಂದಿದ್ದ ಮೆಕಾನಿಕ್‌ಗಳು ಅದನ್ನು ದುರಸ್ತಿಗೊಳಿಸಲು ಸಾಧ್ಯವಾಗದ ಕಾರಣ ಅವರನ್ನು ಚೆನ್ನೈನ ರಿಸರ್ವ್ ಬ್ಯಾಂಕ್‌ಗೆ ವಾಪಸ್ ಕಳಿಸಲಾಯಿತು. ನೋಟುಗಳ ಟ್ರಕ್‌ಗಳು ಮಧ್ಯಪ್ರದೇಶದ ದೇವಾಸ್‌ನ ನೋಟು ಮುದ್ರಣಾಲಯದಿಂದ ಬರುತ್ತಿದ್ದವು.
ಭಾರತದಲ್ಲಿ ಕರ್ನಾಟಕದ ಮೈಸೂರು ಸೇರಿದಂತೆ ಮಧ್ಯಪ್ರದೇಶದ ದೇವಾಸ್, ಮಹಾರಾಷ್ಟ್ರದ ನಾಸಿಕ್, ಪಶ್ಚಿಮ ಬಂಗಾಳದ ಸಲ್ಬೋನಿಯಲ್ಲಿ ನೋಟುಗಳನ್ನು ಮುದ್ರಿಸಲಾಗುತ್ತದೆ.
ಮಧ್ಯಪ್ರದೇಶದ ದೇವಾಸ್‌ನಲ್ಲಿ ಒಂದು ವರ್ಷದಲ್ಲಿ 265 ಕೋಟಿ ನೋಟುಗಳನ್ನು ಮುದ್ರಿಸಲಾಗುತ್ತದೆ. ಈ ನೋಟುಗಳನ್ನು ಮುದ್ರಿಸಲು ಬಳಸುವ ಶಾಯಿಯನ್ನೂ ಇಲ್ಲಿಯೇ ತಯಾರಿಸಲಾಗುತ್ತದೆ. ಈ ಮುದ್ರಣಾಲಯದಲ್ಲಿ 20, 50, 100 ಮತ್ತು 500 ನೋಟುಗಳನ್ನು ಮುದ್ರಿಸಲಾಗುತ್ತದೆ. ಈ ಮುದ್ರಣಾಲಯವು 1991 ರಿಂದ ನಾಸಿಕ್‌ನಲ್ಲಿದೆ. 1, 2, 5, 10, 50 ಮತ್ತು 100 ರೂಪಾಯಿ ನೋಟುಗಳನ್ನು ಇಲ್ಲಿ ಮುದ್ರಿಸಲಾಗುತ್ತದೆ.
ವರದಿಯೊಂದರ ಪ್ರಕಾರ ಭಾರತದಲ್ಲಿ ಪ್ರತಿ ವರ್ಷ 2,000 ಕೋಟಿ ನೋಟುಗಳನ್ನು ಮುದ್ರಿಸಲಾಗುತ್ತದೆ. ಇದರಲ್ಲಿ ಶೇಕಡ 40 ರಷ್ಟು ಕಾಗದ ಮತ್ತು ಶಾಯಿಯನ್ನು ಆಮದು ಮಾಡಿಕೊಳ್ಳಲು ಖರ್ಚಾಗುತ್ತದೆ. ನೋಟುಗಳಿಗೆ ಬಳಸುವ ಕಾಗದವನ್ನು ಜರ್ಮನಿ, ಬ್ರಿಟನ್ ಮತ್ತು ಜಪಾನ್‌ನಿಂದ ಆಮದು ಮಾಡಿಕೊಳ್ಳಲಾಗಿದೆ. ಎಷ್ಟು ನೋಟುಗಳನ್ನು ಮುದ್ರಿಸಬೇಕು ಎಂಬುದನ್ನು ಆರ್‌ಬಿಐ ನಿರ್ಧರಿಸುತ್ತದೆ. ಆದರೆ ನೋಟು, ನಾಣ್ಯಗಳನ್ನು ವಿತರಿಸುವ ಹಕ್ಕು ಸರ್ಕಾರ ಹೊಂದಿರುತ್ತದೆ.