ಮದ್ಯದ ಅಮಲಿನಲ್ಲಿದ್ದ ಕಾರ್ಮಿಕನೊಬ್ಬ ಪಾಲಕರಿಗೆ ವಿಡಿಯೊ ಕಾಲ್ ಮಾಡಿ ಲೈವ್‌ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಸವಕಲ್ಯಾಣ ತಾಲೂಕಿನ ಸದಲಾಪುದ ಗ್ರಾಮದಲ್ಲಿ ಜರುಗಿದೆ.
ನೆರೆ ಮಹಾರಾಷ್ಟ್ರದ ನಿಲಂಗಾ ತಾಲೂಕಿನ ಡೋಬಲೆವಾಡಿ ಗ್ರಾಮದ ನಿವಾಸಿ ಸಚಿನ್ ರಾಜಕುಮಾರ್ ಚವ್ಹಾಣ (32) ಸಾವನ್ನಪ್ಪಿದ್ದ ಕೂಲಿ ಕಾರ್ಮಿಕ ಎಂದು ಗುರುತಿಸಲಾಗಿದೆ.
ಕಳೆದ ಮೂರು ತಿಂಗಳ ಹಿಂದೆ ಸದಲಾಪುರ ಗ್ರಾಮದ ರೈತರೊಬ್ಬರ ಜಮೀನಿನಲ್ಲಿ ಕೂಲಿ ಕೆಲಸಕ್ಕೆ ಆಗಮಿಸಿದ ಸಚಿನ್ ವಿಪರೀತ ಮದ್ಯ ವ್ಯಸನಿಯಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ, ಪತ್ನಿಗೆ ತವರು ಮನೆಗೆ ಕಳುಹಿಸಿ ಪೋಷಕರಿಗೆ ವಿಡಿಯೊ ಕಾಲಾ ಮಾಡಿ ಸಾವಿನ ಮೊರೆ ಹೋಗಿದ್ದಾನೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಮುಡಬಿ ಠಾಣೆ ಪಿಎಸ್ಐ ಜಯಶ್ರೀ ಹೋಡಲ್ ನೇತೃತ್ವದ ಪೊಲೀಸರ ತಂಡ ಭೇಟಿ ನೀಡಿ ಪರಿಶೀಲಿಸಿದರು.
ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.