ಕನ್ನಡ ನಾಡು ಹಲವು ವೈವಿದ್ಯ, ವೈಶಿಷ್ಟ್ಯಗಳಿಂದ ಕೂಡಿದ್ದು, ಕಲೆ, ಸಂಸ್ಕೃತಿ, ಸಾಹಿತ್ಯ, ಜ್ಞಾನ, ತ್ಯಾಗ, ಬಲಿದಾನಗಳ ಭಂಡಾರವನ್ನೇ ತುಂಬಿಕೊಂಡಿದೆ. ಅದರಂತೆ ಲಿಂಬೆ ನಾಡಿನಲ್ಲಿ ಸಿಂಪಿ ಲಿಂಗಣ್ಣ, ಮಧುರಚನ್ನರು, ಶ್ರೀಲಿಂಗರು, ದೂಲಾಸಾಭ ಸೇರಿದಂತೆ ಅನೇಕ ಮಹಾನ್ ವ್ಯಕ್ತಿಗಳು ಕನ್ನಡ ನಾಡಿಗೆ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ತಾಂಬಾ ಗ್ರಾಮದಲ್ಲಿ ಶ್ರೀ ಸಂಗನ ಬಸವೇಶ್ವರ ಸ್ವಾಮೀಗಳ ಶೈಕ್ಷಣಿಕ ಕ್ರಾಂತಿಯಿಂದಾಗಿ ತಾಲೂಕಿನಲ್ಲಿಯೇ ಮಾದರಿ ಗ್ರಾಮವಾಗಿದೆ ಎಂದು ಗ್ರಾಮೀಣ ಠಾಣಾ ಸಿಪಿಐ ಎಂ ಎಂ ಡಪ್ಪಿನ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮದ ಹೃದಯಭಾಗದಲ್ಲಿರುವ ಶ್ರೀ ಸಂಗನ ಬಸವೇಶ್ವರ ವೃತ್ತದಲ್ಲಿ, ಭಗತಸಿಂಗ್ ಯುವಕ ಮಂಡಳಿ ಹಾಗೂ ಕನ್ನಡಪರ ಸಂಘಟನೆಯ ಸಂಯೋಜನೆಯಲ್ಲಿ ಜರುಗಿದ 69ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
“ತಾಂಬಾ ಗ್ರಾಮ ತಾಲೂಕಿನಲ್ಲಿಯೇ ಅತಿ ದೊಡ್ಡ ಗ್ರಾಮ ಹಾಗೂ ಅತ್ಯಂತ ಹೆಚ್ಚಿನ ಸಂಖ್ಯೆ ಹೊಂದಿದೆ. ಆದರೆ ಅಪರಾಧದ ಬಗ್ಗೆ ಗಮನಿಸಿದರೆ ಅತ್ಯಂತ ವಿರಳ. ಇನ್ನೂ ವಿಶೇಷವಾಗಿ ಕನ್ನಡ ನಾಡಿನ ಬಗ್ಗೆ ತಿಳಿದುಕೊಳ್ಳಬೇಕಾದರೆ, ಈಗಾಗಲೇ ಕನ್ನಡಕ್ಕೆ ಎಂಟು ಜ್ಞಾನಪೀಠ ಪ್ರಶಸ್ತಿಗಳು ಬಂದಿದ್ದು, ದೇಶದಲ್ಲಿ ಅತ್ಯುನ್ನತ ಸ್ಥಾನ ಕನ್ನಡಕ್ಕಿದೆ. ಉದ್ಯೋಗಕ್ಕಾಗಿ ಇಂಗ್ಲಿಷ್ ಭಾಷೆಯನ್ನು ಮಾತನಾಡಿ, ಆದರೆ ಮಾತೃ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕನ್ನಡ ಮಾಧ್ಯಮ ಶಾಲೆಗೆ ಹೆಚ್ಚು ಒತ್ತು ನೀಡಬೇಕು. ಕನ್ನಡ ನಾಡು ತನ್ನದೇ ಆದ ಸಾಂಸ್ಕೃತಿಕ, ಸಾಹಿತ್ಯಿಕ, ಪಾರಂಪರಿಕ ಹಿನ್ನೆಲೆ ಪಡೆದ ರಾಜ್ಯವಾಗಿದೆ. ನಮ್ಮ ಕರ್ನಾಟಕವು ವೈಜ್ಞಾನಿಕ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ವೈವಿಧ್ಯತೆ ಪಡೆದ ನಾಡಾಗಿದೆ. ನಾಡು-ನುಡಿ ಹೆಸರಿನಲ್ಲಿ ವಿಶಾಲ ಕರ್ನಾಟಕದ ಐಕ್ಯತೆಗೆ ಧಕ್ಕೆಯಾಗದಂತೆ ಕಾಪಾಡುವ ಹೊಣೆಗಾರಿಕೆ ನಮ್ಮದು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಕ ಬಿ ಜಿ ಗೌರ, ಗ್ರಾಮ ಪಂಚಾಯಿತಿ ಅಧ್ಯಕ್ಷ ಆಸ್ಮಾ ರಜಾಕಸಾಬ ಚಿಕ್ಕಗಸಿ ಅಧ್ಯಕ್ಷತೆ ವಹಿಸಿದ್ದರು. ತಾಪಂ ಮಾಜಿ ಸದಸ್ಯ ಪ್ರಕಾಶ ಮುಂಜಿ, ಗ್ರಾಪಂ ಮಾಜಿ ಅಧ್ಯಕ್ಷ ರಾಚಪ್ಪ ಗಳೇದ, ರಾಜು ಗಂಗನಳ್ಳಿ ಕನ್ನಡಮ್ಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ರಾಜಶ್ರೀ ಸಿಮೆಂಟ್ ಕಾರ್ಖಾನೆಯಿಂದ ವಿಷಪೂರಿತ ಹೊಗೆ; ಹಲವು ರೋಗಗಳಿಗೆ ತುತ್ತಾಗುವ ಭೀತಿ
ಉಮೇಶ ನಾಟೀಕಾರ, ಜೆ ಎಸ್ ಹತ್ತಳಿ, ಜಿ ವೈ ಗೋರನಾಳ, ಎಗಪ್ಪ ಹೋರಪೇಟಿ, ಮಾಶಿಮ ವಾಲಿಕಾರ, ಸಿದ್ದು ಹತ್ತಳಿ, ಪರಸಪ್ಪ ಮಸಳಿ, ಮಹಮದ ದಡೇದ, ಪರಸು ಬರಮಣ್ಣ, ಮೈಬೂಬ ಸುತ್ತಾರ, ಪುಟುಗೌಡ ಪಾಟೀಲ, ಈ ಸುರೇಶ ನಡುಗಡ್ಡಿ, ರವಿ ನಡುಗಡ್ಡಿ, ಶ್ರೀಶೈಲ ಈ ನಂದರಗಿ, ಹಿರಿಯ ಪತ್ರಕರ್ತ ರಾಯಗೊಂಡ ಗಬಸಾವಳಗಿ, ತಾಂಬಾ ಕಸಾಪ ಅಧ್ಯಕ್ಷ ಲಕ್ಷ್ಮಣ ಹಿರೇಕುರಬರ, ಪಿಎಸ್‌ಐ ಆಯ್ಕೆಯಾದ ಸಿದ್ದು ಕನಾಳ, ರೇಣುಕಾ ನಡುಗಡ್ಡಿ ಅವರನ್ನು ವೇಧಿಕೆಯ ಮೇಲೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಿದರು.