ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಪ್ರದಾನ ಮಾಡುವ ಶ್ರೀ ವಾಲ್ಮೀಕಿ ಸೇವಾರತ್ನ 2024 ರಾಜ್ಯ ಪ್ರಶಸ್ತಿ ಗುಬ್ಬಿಯ ಬಿಲ್ಲೇಪಾಳ್ಯ ಬಡಾವಣೆಯ ನಿವಾಸಿ ಅಂತಾರಾಷ್ಟ್ರೀಯ ವಿಕಲ ಚೇತನ ಕ್ರೀಡಾಪಟು ಗಂಗರಾಜು ಅವರಿಗೆ ಸಂದಿದೆ.
ಬೆಂಗಳೂರಿನ ಗಾಂಧಿಭವನದಲ್ಲಿ ಇದೇ ತಿಂಗಳ 9 ರಂದು ಬೆಳಿಗ್ಗೆ 10 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ದೊಡ್ಡಬಳ್ಳಾಪುರ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಹಾಗೂ ವಾಲ್ಮೀಕಿ ನೌಕರರ ಒಕ್ಕೂಟ ಸಹಯೋಗದಲ್ಲಿ ನಡೆಯುವ ಕಾರ್ಯಕ್ರಮದ ಶ್ರೀ ವಾಲ್ಮೀಕಿ ಬ್ರಹ್ಮಾನಂದ ಗುರೂಜಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.