ರೈಲ್ವೆ ಹಳಿಯಲ್ಲಿ ಛಿದ್ರಗೊಂಡ ಶವ ಪತ್ತೆಯಾಗಿರುವ ಘಟನೆ ಉಡುಪಿ ಜಿಲ್ಲೆಯ ಇಂದ್ರಾಳಿಯ ರೈಲ್ವೆ ಸೇತುವೆ ಬಳಿ, ರೈಲ್ವೆ ಹಳಿಯ ಮೇಲೆ ಛಿದ್ರಗೊಂಡ ಸ್ಥಿತಿಯಲ್ಲಿ ಗಂಡಸಿನ ಶವ ಕಂಡುಬಂದಿದೆ.
ವ್ಯಕ್ತಿಯು ಚಲಿಸುತ್ತಿರುವ ರೈಲಿಗೆ ಅಡ್ಡಬಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರು ಇಲಾಖೆಯ ಕರೆಗೆ ಧಾವಿಸಿ ಬಂದು, ಟಾರ್ಚ್ ಬೆಳಕಿನ ಸಹಕಾರದಿಂದ ಛಿದ್ರ ದೇಹವನ್ನು ಒಟ್ಟುಗೂಡಿಸಿ, ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಘಟಕಕ್ಕೆ ಸಾಗಿಸಲು ನೆರವಾದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವ ಪತ್ತೆ
ಮಣಿಪಾಲ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೆಬಲ್ ಶ್ರವಣ ಕುಮಾರ್, ಹೆಡ್ ಕಾನ್ಸ್‌ಟೆಬಲ್ ಗುರುರಾಜ್, ರೈಲ್ವೆ ಆರ್‌ಪಿಎಫ್ ಮಧುಸೂದನ್ ಘಟನಾ ಸ್ಥಳದಲ್ಲಿದ್ದು, ಕಾನೂನು ಪ್ರಕ್ರಿಯೆ ನಡೆಸಿದರು. ಮೃತ ವ್ಯಕ್ತಿಯನ್ನು ಮೂಡಸಗ್ರಿಯ ನೀಲಾದರ ನಾಯ್ಕ ಎಂದು ಶಂಕಿಸಲಾಗಿದೆ.