ವಕೀಲ ರವಿಕುಮಾರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ತುಮಕೂರು ನಗರ ಪೋಲೀಸ್ ವೃತ್ತ ನಿರೀಕ್ಷಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಕೀಲರ ಸಂಘದಿಂದ ಶಿರಸ್ತೇದಾರ್ ಎಂ ಬಿ ರಘುರವರ ಮೂಲಕ ಗೃಹಸಚಿವ ಡಾ ಜಿ ಪರಮೇಶ್ವರ್ ಅವರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.
“ಅಮಾಯಕ ವಕೀಲರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಎಲ್ಲೆಡೆ ಮಿತಿಮೀರಿದೆ. ಇಂತಹ ಗೂಂಡಾಗಿರಿಯನ್ನು ವಕೀಲರ ಸಂಘ ಸಹಿಸುವುದಿಲ್ಲ. ತುಮಕೂರಿನ ವಕೀಲ ರವಿಕುಮಾರ್ ಅವರು ಮಾಡಿದ ತಪ್ಪಾದರು ಏನು? ಅವರನ್ನು ಪೋಲೀಸ್ ವೃತ್ತ ನಿರೀಕ್ಷಕರು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ. ಅಲ್ಲದೆ ವಕೀಲ ರವಿ ಕುಮಾರ್ ಅವರ ಮೇಲೆ ಹಲ್ಲೆ ಮಾಡಿರುವುದಾದರೂ ಏಕೆ? ಈ ವಿಚಾರವಾಗಿ ಹಿರಿಯ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು” ಎಂದು ವಕೀಲ ಸಂಘದ ಅಧ್ಯಕ್ಷ ಬಿ ಟಿ ನಟರಾಜು ಆಗ್ರಹಿಸಿದರು.
“ವಿನಾಕಾರಣ ವಕೀಲರ ಮೇಲೆ ಹಲ್ಲೆ ನಡೆಸಿರುವ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಬೇಕು. ಹಲ್ಲೆ ನಡೆಸಿರುವ ಪೊಲೀಸ್ ಅಧಿಕಾರಿಗಳ ವಿರುದ್ದ ಗೃಹ ಸಚಿವರು ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ವಕೀಲರ ಸಂಘದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಬೇಕಾಗುತ್ತದೆ” ಎಂದು ವಕೀಲರ ಸಂಘದಿಂದ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿದ್ದೀರಾ: ಬುಡಕಟ್ಟು ಸಮುದಾಯ ಮತ್ತು ಮಹಿಳೆಯರ ಮತಗಳೇ ಜಾರ್ಖಂಡ್‌ನಲ್ಲಿ ನಿರ್ಣಾಯಕ: ಅದೇ ಬಿಜೆಪಿಗೆ ಸವಾಲು
ಈ ಸಂದರ್ಭದಲ್ಲಿ ವಕೀಲರ ಸಂಘದ ಪದಾಧಿಕಾರಿ ಕೆ ಸಿ ಚಂದ್ರಶೇಖರ್, ರಿಜ್ವಾನ್‌ಅಲಿ, ಬಿ ಎಸ್ ಸುರೇಶ್, ಪ್ರತಾಪ್ ಸೇರಿದಂತೆ ಇತರರು ಇದ್ದರು.
