ಮಂಗಳೂರು | ನ. 9, 10; ಬ್ರಾಸ್ ಬ್ಯಾಂಡ್‌ನಿಂದ ‘ಪೆಪೆರೆ ಪೆಪೆ ಢುಂ’ ಹಬ್ಬ: ಸಾಣೇಹಳ್ಳಿ ಶ್ರೀಗೆ ‘ರೊನಾಲ್ಡ್ ಕೊಲಾಸೊ ಸಾಮರಸ್ಯ ಪ್ರಶಸ್ತಿ’ ಪ್ರದಾನ

Date:

Advertisements

‘ಆಮಿ ಆನಿ ಆಮ್ಚಿಂ’ ಸಂಸ್ಥೆಯ ವತಿಯಿಂದ ಇದೇ ನವೆಂಬರ್ 9 ಮತ್ತು 10ರಂದು ಮಂಗಳೂರು ನಗರದ ಕೆಲರಾಯ್ ಚರ್ಚ್‌ ವಠಾರದಲ್ಲಿ ಕರಾವಳಿಯ ಅತಿ ದೊಡ್ಡ ಬ್ರಾಸ್ ಬ್ಯಾಂಡ್ ಹಬ್ಬದ ಗ್ರ್ಯಾಂಡ್ ಫಿನಾಲೆ ‘ಪೆಪೆರೆ ಪೆಪೆ ಢುಂ’ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಮೊದಲನೆಯ ದಿನ, ನ.9ರಂದು ಶನಿವಾರ ಸಂಜೆ 5ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, 5 ತಂಡಗಳು ಅಂತಿಮ ಹಂತದ ರೋಚಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿವೆ. ಬ್ರಾಸ್ ಬ್ಯಾಂಡ್ ವಾದ್ಯದೊಂದಿಗೆ ನವ್ಯ ಪ್ರಯೋಗಗಳ ಅನಾವರಣಕ್ಕೆ ವೇದಿಕೆಯು ಸಾಕ್ಷಿಯಾಗಲಿದೆ.

ಎರಡನೇ ದಿನ, ನ.10ರಂದು ಭಾನುವಾರ ಸಂಜೆ 5ಕ್ಕೆ ವಿದೇಶಗಳಲ್ಲಿ ಕನ್ನಡ ಕಂಪು ಮೂಡಿಸುತ್ತಿರುವ ನಮ್ಮ ನೆಲದ ಹೆಮ್ಮೆಯ ಡಾ. ರೊನಾಲ್ಡ್ ಕೊಲಾಸೊ ಅವರ ಹೆಸರಿನಲ್ಲಿ ಹೊಸದಾಗಿ ಸ್ಥಾಪಿಸಲಾಗಿರುವ ‘ಡಾ. ರೊನಾಲ್ಡ್ ಕೊಲಾಸೊ ಸಾಮರಸ್ಯ ಪ್ರಶಸ್ತಿ-24’ರ ಪುರಸ್ಕಾರ ಪ್ರದಾನ ಆಯೋಜಿಸಲಾಗಿದೆ. ಈ ಪ್ರಶಸ್ತಿಗೆ ಸಾಣೇಹಳ್ಳಿ ಸ್ವಾಮೀಜಿಯವರನ್ನು ಆಯ್ಕೆ ಮಾಡಲಾಗಿದೆ.

Advertisements

ಪ್ರಶಸ್ತಿ ಸ್ಥಾಪನೆಯ ಹಿನ್ನೆಲೆ:

ದಕ್ಷಿಣ ಕನ್ನಡ ಮೂಲದವರಾದ ಕೊಲಾಸೊ ಅವರು ಪಿಯುಸಿವರೆಗಿನ ಶಿಕ್ಷಣವನ್ನು ಗ್ರಾಮೀಣ ಪರಿಸರದಲ್ಲೇ ಪಡೆದವರು. ನಂತರ, ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿ.ಕಾಂ. ಪದವಿ ಪಡೆದ ಮೇಲೆ ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳಿದರು. ಹಲವು ವರ್ಷಗಳ ಕಾಲ ವಿವಿಧ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದರು.

ನಂತರ, ಸ್ವತಃ ಉದ್ದಿಮೆ ಆರಂಭಿಸಿ ಯಶಸ್ಸು ಕಂಡರು. ತಮ್ಮ ದುಡಿಮೆಯಲ್ಲಿ ಒಂದು ಪಾಲನ್ನು ಸಮಾಜಕ್ಕೆ ವಿನಿಯೋಗಿಸಬೇಕೆಂದು ತಮ್ಮ ವೃತ್ತಿಬದುಕಿನ ಆರಂಭದಲ್ಲೇ ಅವರು ಪ್ರತಿಜ್ಞೆ ಕೈಗೊಂಡರು. ಆಮೇಲೆ ಅದನ್ನು ಅವರು ತಮ್ಮ ಬದುಕಿನುದ್ದಕ್ಕೂ ಒಂದು ವೃತದಂತೆ ಪಾಲಿಸುತ್ತಾ ಬಂದಿದ್ದಾರೆ.

mlr 1

ಅವರ ಈ ಮನೋಧೋರಣೆಯ ಫಲವಾಗಿ ಕನ್ನಡ ನಾಡಿನ ಹತ್ತು ಹಲವು ಕ್ಷೇತ್ರಗಳು ಉಪಕೃತವಾಗಿವೆ. ಶೈಕ್ಷಣಿಕ, ಆರೋಗ್ಯ, ಮೂಲಸೌಕರ್ಯ, ಧಾರ್ಮಿಕ, ಸಾಂಸ್ಕೃತಿಕ, ಕ್ರೀಡೆ ಸೇರಿದಂತೆ 23ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಅವರ ಅತ್ಯಮೂಲ್ಯ ಕಾಣಿಕೆ ಸಂದಿದೆ. ಅಪಾರ ಕೊಡುಗೆ ನೀಡುತ್ತಾ ಕನ್ನಡ, ಕೊಂಕಣಿ ಹಾಗೂ ತುಳು ನುಡಿಗಳಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಬಾಹ್ರೇನ್ ನಲ್ಲಿ “ಕನ್ನಡ ಭವನ” ನಿರ್ಮಾಣಕ್ಕೆ ದೊಡ್ಡ ಮೊತ್ತದ ಧನಸಹಾಯ ನೀಡುವುದರ ಜೊತೆಗೆ ಇನ್ನಿತರ ರೀತಿಗಳಲ್ಲಿ ಕೂಡ ವಿದೇಶಗಳಲ್ಲಿ ಕನ್ನಡ ಕಂಪು ಮೂಡಿಸುತ್ತಿದ್ದಾರೆ.

ಎಲ್ಲಾ ಧರ್ಮೀಯರ ಪವಿತ್ರ ನೆಲೆಗಳಿಗೂ ಸಹಾಯ ಹಸ್ತ ಚಾಚಿದ್ದಾರೆ. ಕೊಲಾಸೊ ಅವರ ನೆರವಿನಿಂದ ನಿರ್ಮಾಣಗೊಂಡ ಹಾಗೂ ಪುನರುಜ್ಜೀವಗೊಂಡ ಹಲವಾರು ದೇವಸ್ಥಾನಗಳು, ಚರ್ಚುಗಳು ಹಾಗೂ ಮಸೀದಿಗಳು ನೆಮ್ಮದಿ ಬಯಸಿ ಪ್ರತಿನಿತ್ಯ ಅಲ್ಲಿಗೆ ಹೋಗುವ ಸಾವಿರಾರು ಆಸ್ತಿಕರಿಗೆ ನೆಲೆ ಒದಗಿಸುತ್ತಿವೆ. ಈ ಮೂಲಕ, ಸಮಾಜದಲ್ಲಿ ಸೌಹಾರ್ದ-ಸಾಮರಸ್ಯ ಪಸರಿಸುತ್ತಾ ಕುವೆಂಪು ಅವರ ಕವಿವಾಣಿಯಂತೆ “ಸರ್ವಜನಾಂಗದ ಶಾಂತಿಯ ತೋಟ”ವೆಂದು ಹೆಸರಾದ ಕರ್ನಾಟಕದ ಪರಂಪರೆಯ ಹಿರಿಮೆಯನ್ನು ಎತ್ತಿಹಿಡಿಯುವ ಕಾರ್ಯ ಮಾಡುತ್ತಿದ್ದಾರೆ.

ಇದನ್ನು ಓದಿದ್ದೀರಾ? ಕೆಟ್ಟ ಪ್ರಚಾರವೂ ಅತ್ಯಂತ ಸಶಕ್ತ ಪ್ರಚಾರವೇ ಎಂದ ಜಗತ್ತಿನ ಮೊದಲ ರಾಜಕಾರಣಿ ಟ್ರಂಪ್

ಕೊಲಾಸೊ ಅವರು ನಾಡಿಗೆ ನೀಡುತ್ತಿರುವ ಈ ಮಹತ್ತರ ಕೊಡುಗೆಯನ್ನು ಗೌರವಿಸಿ “ಆಮಿ ಆನಿ ಆಮ್ಚಿಂ” ಸಂಸ್ಥೆಯ ವತಿಯಿಂದ ಸಮಾಜದ ಸೌಹಾರ್ದ-ಸಾಮರಸ್ಯಕ್ಕಾಗಿ ಕಾರ್ಯಶೀಲರಾಗಿರುವವರನ್ನು ಗುರುತಿಸಿ ಗೌರವಿಸುವ ಧ್ಯೇಯದಿಂದ “ಡಾ.ರೊನಾಲ್ಡ್ ಕೊಲಾಸೊ ಸಾಮರಸ್ಯ ಪ್ರಶಸ್ತಿ” ಸ್ಥಾಪಿಸಲಾಗಿದೆ. ಈ ಪ್ರಶಸ್ತಿಯು ಪ್ರಶಸ್ತಿ ಪತ್ರ ಮತ್ತು 3 ಲಕ್ಷ ನಗದು ಪುರಸ್ಕಾರ ಒಳಗೊಂಡಿದೆ.

ಪಂಡಿತಾರಾಧ್ಯ ಸ್ವಾಮೀಜಿಯವರಿಗೆ ಚೊಚ್ಚಲ ಪುರಸ್ಕಾರ:

ಈ ಮೊತ್ತಮೊದಲ ಪ್ರಶಸ್ತಿಯನ್ನು ಶ್ರೀ ತರಳಬಾಳು ಪೀಠದ ಸಾಣೇಹಳ್ಳಿ ಶಾಖಾಮಠದ ಪಟ್ಟಾಧ್ಯಕ್ಷರಾದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳಿಗೆ ಪ್ರದಾನ ಮಾಡಲಾಗುತ್ತಿದೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೆಡಿಯಾಲ ಎಂಬ ಗ್ರಾಮದಲ್ಲಿ ಹುಟ್ಟಿ, ತತ್ತ್ವಶಾಸ್ತ್ರ ಎಂ.ಎ ವ್ಯಾಸಂಗ ಮಾಡಿರುವ ಸ್ವಾಮೀಜಿಗಳು ಸಮಾಜಸೇವೆ ಹಾಗೂ ಅಧ್ಯಾತ್ಮದ ಸಮನ್ವಯಕಾರರು; ಕಲೆ, ಸಾಹಿತ್ಯ, ಸಂಗೀತ, ನಾಟಕ, ಬರಹಗಳನ್ನು ಸಿದ್ಧಿಸಿಕೊಂಡ ಮಹಾಪುರುಷರು; ಶಿವಸಂಚಾರದ ಶಿವಶಿಲ್ಪಿಗಳು; ಪರಿಸರ ಪ್ರಿಯರು; ಅರಿವಿನ ದಿಗಂತ ವಿಸ್ತರಿಸುತ್ತಿರುವ ರೂವಾರಿಗಳು; ಜನರ ನಡುವೆ ಪ್ರೀತಿಯ ಹಂದರ ಕಟ್ಟುತ್ತಿರುವವರು; ಸಾಣೆಹಳ್ಳಿ ಎಂಬ ಗ್ರಾಮವನ್ನು ನಾಡಿನ ಸಾಂಸ್ಕೃತಿಕ ಕೇಂದ್ರವಾಗಿಸಿರುವ ಮಾರ್ಗದರ್ಶಿಗಳು; ಹತ್ತು ಹಲವು ಚಟುವಟಿಕೆಗಳ ಮೂಲಕ ಸಮಾಜದಲ್ಲಿ ಸೌಹಾರ್ದ, ಸಾಮರಸ್ಯ, ಸಹಬಾಳ್ವೆ ಮೂಡಿಸಲು ತನು ಮನ ಧನ ಮುಡಿಪಾಗಿರಿಸಿರುವ ದಾರ್ಶನಿಕರು.

ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾದೊ, ರಾಜ್ಯದ ಸನ್ಮಾನ್ಯ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ವಿವಿಧ ಕ್ಷೇತ್ರಗಳ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಾಂಪ್ರದಾಯಿಕ ತಿಂಡಿ ತಿನಿಸುಗಳ ಮಳಿಗೆಗಳ ವ್ಯವಸ್ಥೆ ಇರಲಿದ್ದು, ವಿವಿಧ ಮನರಂಜನೆ ಚಟುವಟಿಕೆಗಳು ಹಾಗೂ ಸ್ಪರ್ಧೆಗಳು ಕೂಡ ನಡೆಯಲಿವೆ. ಪ್ರವೇಶ ಉಚಿತವಾಗಿರಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X