ಈ ದಿನ ಇಂಪ್ಯಾಕ್ಟ್‌ | ಶಿಕ್ಷಕನ ಎಡವಟ್ಟಿಂದ ವಿದ್ಯಾರ್ಥಿಯ ಎದೆ ಭಾಗದ ಮೂಳೆ ಮುರಿತ; ಬಿಇಒ ರಮೇಶ್ ಪೋಷಕರಿಗೆ ಪರಿಹಾರ ಕೊಡಿಸಿದ್ದಾದರೂ ಹೇಗೆ?

Date:

Advertisements

ಶಿವಮೊಗ್ಗ ನಗರದ ಗೋಪಾಳ ಬಡಾವಣೆಯಲ್ಲಿರುವ ಇಂಡೋ ಕಿಡ್ಸ್(ಸಿದ್ದಾರ್ಥ ಇನ್ಸ್ಟಿಟ್ಯೂಟ್ ಸಮೂಹ ಸಂಸ್ಥೆ) ಶಾಲೆಯೊಂದರ ಶಿಕ್ಷಕನ ಎಡವಟ್ಟಿಂದ ವಿದ್ಯಾರ್ಥಿ ಹೃದಯ ಭಾಗದ ಮೂಳೆ ಬಿರುಕು ಬಿಟ್ಟಿದ್ದು, ಅನಾರೋಗ್ಯಕ್ಕೆ ತುತ್ತಾಗಿತ್ತು. ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದ ಬಿಇಒ ರಮೇಶ್ ಅವರು ಶಾಲಾ ಆಡಳಿತ ಮಂಡಳಿಯಿಂದ ಪೋಷಕರಿಗೆ ಪರಿಹಾರ ಕೊಡಿಸಿದ್ದು, ಮಗುವಿನ ಚಿಕಿತ್ಸೆಗೆ ಅನುಕೂಲವಾಗಲಿದೆ.

ಸಂತ್ರಸ್ತ ಮಗುವಿನ ಪೋಷಕರು ಶಾಲೆಯಿಂದ ಅನ್ಯಾಯವಾಗಿರುವ ಕುರಿತು ಶಾಲೆಯ ಆಡಳಿತ ಮಂಡಳಿಗೆ ಮಾಹಿತಿ ತಿಳಿ ತಿಳಿಸಿದರೂ ಕೂಡ ಮಗುವಿನ ಆರೋಗ್ಯದ ಬಗ್ಗೆ ಒಲವು ತೋರದೆ ಅಮಾನವೀಯತೆ ಮೆರೆದಿದ್ದು, ಯಾವುದೇ ತಪ್ಪುಗಳು ನಡೆದಿಲ್ಲವೆಂಬಂತೆ ವರ್ತಿಸಿದ್ದರು.

ಸಂತ್ರಸ್ತ ಪೋಷಕರು ತಮಗೆ ಅನ್ಯಾಯವಾಗಿರುವ ಕುರಿತು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, ಮಾಹಿತಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮಕ್ಕಳ ಹಕ್ಕು ಆಯೋಗಕ್ಕೆ ಪೋಷಕರಿಂದ ದೂರು ನೀಡಿಸಲಾಗಿತ್ತು. ಬಳಿಕ ಈ ದಿನ.ಕಾಮ್‌ ಶಾಲೆಗೆ ಭೇಟಿ ನೀಡಿದಾಗ, ಶಾಲಾ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲೆ ಸಂಧ್ಯಾ ಅವರು ಯಾವುದೇ ಪ್ರಶ್ನೆಗಳಿಗೆ ಉತ್ತರಿಸಿರಲಿಲ್ಲ. ನಮ್ಮ ಶಾಲೆಯಲ್ಲಿ ಈ ರೀತಿ ಯಾವುದೇ ಘಟನೆ ನಡೆದಿಲ್ಲವೆಂದು ದಬಾಯಿಸಿದ್ದು, ಬಳಿಕ ಶಾಲೆಯ ಪಿ ಇ ಶಿಕ್ಷಕರನ್ನು ಅಮಾನಾತು ಮಾಡಿದ್ದೇವೆ. ಶಾಲೆಯಲ್ಲಿ ಎಲ್ಲ ಕಡೆ ಸಿಸಿಟಿವಿ ಕ್ಯಾಮೆರಾಗಳಿವೆಯೆಂದು ಸತ್ಯಕ್ಕೆ ಹತ್ತಿರವಾಗಿ ಮಾತನಾಡಿದರು.

Advertisements
ಇಂಡೋ ಕಿಡ್ಸ್‌ ಪ್ರಾಂಶುಪಾಲೆ

ಈ ದಿನ.ಕಾಮ್‌ ಶಿಕ್ಷಕರು ಮತ್ತು ಪೋಷಕರ ಸಮ್ಮುಖದಲ್ಲಿ ವಿದ್ಯಾರ್ಥಿಯನ್ನು ಮಾತಾಡಿಸಿದಾಗ ಶಾಲೆಯಲ್ಲಾದ ಘಟನೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಿದ್ದು, ಶಾಲೆಯ ಆಡಿಟೋರಿಯಂ ಭಾಗದಲ್ಲಿ ಯೋಗಾಸನ ಹೇಳಿಕೊಡುತ್ತಿದ್ದರು. ಆ ವೇಳೆ ಪಿಇ ಟೀಚರ್ ಹೀಗೆ ಮಾಡಿದ್ದಾರೆಂದು ಹೇಳಿದನು. ಬಳಿಕ ಶಾಲೆ ಆಡಳಿತ ಮಂಡಳಿ ಇದೆಲ್ಲ ಸುಳ್ಳು ಆರೋಪವೆಂದು ಜೋರು ಮಾಡಿದರು.

ಸಿಸಿಟಿವಿ ದೃಶ್ಯಾವಳಿ ತೋರಿಸುವಂತೆ ಕೇಳದ್ದಕ್ಕೆ ಆಡಿಟೋರಿಯಂನಲ್ಲಿ ಸಿಸಿಟಿವಿ ಹಾಕಿಲ್ಲವೆಂದು ಶಾಲೆ ಆಡಳಿತ ಮಂಡಳಿ ತಿಳಿಸಿದರು. ಒಂದಕ್ಕೊಂದು ತದ್ವಿರುದ್ದ ಮಾಹಿತಿ ನೀಡಿದ್ದಲ್ಲದೆ ನಮ್ಮ ಶಾಲೆಯಲ್ಲಿ ಏನೂ ನಡೆದೇ ಇಲ್ಲ ಎನ್ನುವ ವಾದಕ್ಕೆ ಇಳಿದರು. ಪಿಇ ಶಿಕ್ಷಕರನ್ನು ಶಾಲೆಗೆ ಕರೆಸಿ ಕೇಳಿದಾಗ ಅವರೂ ಕೂಡಾ ನಮ್ಮ ಶಾಲೆಯಲ್ಲಿ ಯಾವುದೇ ಘಟನೆಗಳು ಆಗಿಲ್ಲವೆಂದು ಸತ್ಯದ ತಲೆಯ ಮೇಲೆ ಹೊಡೆದೇ ಬಿಟ್ಟರು.

ಬಿಇಒ ರಮೇಶ್‌ ನಾಯ್ಕ್

ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ನಾಯ್ಕ್ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ ಬಿಇಒ ಅವರೂ ಕೂಡಾ ಶಾಲೆಗೆ ಬಂದು ವಾಸ್ತವ ಪರಿಸ್ಥಿತಿ ಅವಲೋಕಿಸಿ ಶಾಲೆ ಆಡಳಿತ ಮಂಡಳಿ ಹಾಗೂ ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಘಟನೆಗಳ ಮಾಹಿತಿ ಪಡೆದರು. ಬಳಿಕ ಶಾಲೆ ಆಡಳಿತ ಮಂಡಳಿಯವರು ಮಗುವಿನ ಆಸ್ಪತ್ರೆ ಖರ್ಚು ವೆಚ್ಚ ಭರಿಸುವುದಾಗಿ ಹಾಗೂ ಈವರೆಗೆ ಆಗಿರುವ ಖರ್ಚುನ್ನೂ ಕೊಡುತ್ತೇವೆಂದು ಒಪ್ಪಿಕೊಂಡರು.

ಬಳಿಕ ಬಿಇಒ ರಮೇಶ್ ನಾಯ್ಕ್ ಅವರು ಈ ದಿನ.ಕಾಮ್‌ಗೆ ಮಾತನಾಡಿ, “ಇದೊಂದು ಆಚಾತುರ್ಯ ಘಟನೆಯಾಗಿದೆ. ವಿದ್ಯಾರ್ಥಿಯ ಮುಂದಿನ ವಿದ್ಯಾಭ್ಯಾಸಕ್ಕೆ ಶಾಲೆಯಲ್ಲಿ ಆಡಳಿತ ಮಂಡಳಿ ಏನೂ ತೊಂದರೆ ಮಾಡುವುದಿಲ್ಲ” ಎಂದು ಭರವಸೆ ನೀಡಿದರು.

ಸಾಮಾಜಿಕ ಮುಖಂಡ ಮಾಸ್ತನ್

“ಶಿವಮೊಗ್ಗ ನಗರದ ಬಹಳಷ್ಟು ಖಾಸಗಿ ಶಾಲೆಗಳಲ್ಲಿ ಒಂದಲ್ಲ ಒಂದು ಪ್ರಕರಣಗಳು ಆಗುತ್ತಲೇ ಇವೆ. ಆದರೆ ಇದೇ ರೀತಿ ಪೋಷಕರು ಮುಂದೆ ಬಂದು ಧೈರ್ಯ ತೋರಿದಲ್ಲಿ ಸಮಸ್ಯೆ ಬಗೆಹರಿಯಲಿದೆ. ಜತೆಗೆ ಶಿವಮೊಗ್ಗದಲ್ಲಿ ಯಾವುದೇ ಶಾಲೆಯಲ್ಲಿ ಏನೇ ಘಟನೆಗಳು ನಡೆದರೂ ಈ ದಿನ.ಕಾಮ್‌ ನಮ್ಮ ಗಮನಕ್ಕೆ ತರುವುದರಿಂದ ನಾವೂ ಕೂಡಾ ತ್ವರಿತಗತಿಯಾಗಿ ಸಮಸ್ಯೆ ಬಗೆಹರಿಸಲು ಸಹಾಯಕವಾಗಿದೆ” ಎಂದು ಧನ್ಯವಾದಗಳನ್ನು ತಿಳಿಸಿದರು.

“ಮಗುವಿಗೆ ಎದೆಯ ಭಾಗ ಪಕ್ಕೆಯಲ್ಲಿ ಮೂಳೆ ಬಿರುಕು ಬಿಟ್ಟಿದ್ದು, ಬೆನ್ನಿನ ಮೂಳೆಯಲ್ಲಿಯೂ ಸಮಸ್ಯೆಯಾಗಿದೆಯೆಂದು ವೈದ್ಯರು ತಿಳಿಸಿರುವುದಾಗಿ ಪೋಷಕರು ನಮಗೆ ಹೇಳಿದ್ದಾರೆ. ಜತೆಗೆ ಆಸ್ಪತ್ರೆಯಲ್ಲಿ ನೀಡಿರುವ ಚಿಕಿತ್ಸೆಯ ರಿಪೋರ್ಟ್‌ಗಳನ್ನೂ ತೋರಿಸಿದ್ದಾರೆ. ಮಗು ಬೇಗ ಚೇತರಿಸಿಕೊಂಡು ಗುಣಮುಖನಾಗಿ ಅರೋಗ್ಯವಾಗಲಿ. ಇನ್ಮುಂದೆ ಯಾವುದೇ ಶಾಲೆಯಲ್ಲಿಯೂ ಇಂತಹ ಘಟನೆಗಳು ಆಗದಿರಲಿ” ಎಂದು ಹಾರೈಸಿದರು.

“ಶಿವಮೊಗ್ಗ ನಗರದಲ್ಲಿ ಬಿಇಒ ರಮೇಶ್ ನಾಯ್ಕ್ ಅವರು ಖಾಸಗಿ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಲ್ಲಿ ಏನೇ ಸಮಸ್ಯೆ ಕಂಡುಬಂದರೂ ಕೂಡಲೇ ಭೇಟಿ ನೀಡಿ, ಸಮಸ್ಯೆ ಬಗೆಹರಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಈ ಕೆಲಸ ಶಿವಮೊಗ್ಗದಲ್ಲಿ ನಿರಂತರವಾಗಿರಲಿ, ಒಂದು ಉತ್ತಮ ನಿದರ್ಶನ ಹಾಗೂ ಶಿಕ್ಷಣ ಇಲಾಖೆಯಲ್ಲಿ ಹೀಗೆಯೇ ಅತ್ಯುತ್ತಮ ಕೆಲಸ ಮಾಡಿ ಶಿವಮೊಗ್ಗದಲ್ಲಿ ಬದಲಾವಣೆ ತರುವಂತ ಹೆಸರು ಮಾಡುವಂತಾಗಲಿ” ಎಂದು ಸ್ಥಳೀಯರು ಆಶಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಾಮಾಜಿಕ ಮುಖಂಡ ಮಸ್ತಾನ್ ಈ ದಿನ.ಕಾಮ್‌ನೊಂದಿಗಿದ್ದು, ಶಾಲೆಯ ಸಮಸ್ಯೆಯಿಂದ ಅನ್ಯಾಯಕ್ಕೊಳಗಾದ ವಿದ್ಯಾರ್ಥಿ ಹಾಗೂ ಪೋಷಕರಿಗೆ ನ್ಯಾಯ ಒದಗಿಸಿಕೊಡುವ ಸಲುವಾಗಿ ಸಹಕಾರ ನೀಡಿದರು.

ಘಟನೆ ಹಿನ್ನೆಲೆ

ಶಿವಮೊಗ್ಗ ನಗರದ ಗೋಪಾಳ ಬಡಾವಣೆಯಲ್ಲಿರುವ ಇಂಡೋ ಕಿಡ್ಸ್‌(ಸಿದ್ದಾರ್ಥ ಇನ್ಸ್ಟಿಟ್ಯೂಟ್ ಸಮೂಹ ಸಂಸ್ಥೆ) ಶಾಲೆಯೊಂದರಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ 6ನೇ ತರಗತಿ ವಿದ್ಯಾರ್ಥಿಗಳಿಗೆ ಯೋಗ ಕಲಿಸುವಾಗ ಯೋಗ ತರಬೇತಿ ನೀಡುತ್ತಿದ್ದ ಪಿಇ ಶಿಕ್ಷಕ ಒಂದು ವಿದ್ಯಾರ್ಥಿಗೆ ಆಸನಗಳನ್ನು ಹೇಳಿಕೊಡುವಾಗ ಮುಖ ಮಂಡಿಗೆ ತಾಗುತ್ತಿಲ್ಲ ಇನ್ನೂ ತಲೆ ಬಗ್ಗಿಸು ಎಂದು ಬಲವಂತ ಮಾಡಿ ವಿದ್ಯಾರ್ಥಿಗೆ ತನ್ನ ಕಾಲಿನಿಂದ ಮಗುವಿನ ಬೆನ್ನಿನ ಮೇಲೆ ತುಳಿದಿದ್ದರೆಂಬ ಆರೋಪ ಬೇಕಂತ ಆಯಿತೋ ಆಚಾತುರ್ಯವಾಗಿ ಆಯಿಯೋ ಗೊತ್ತಿಲ್ಲ.

ಆಗ ಲಟ್ ಎಂದು ಶಬ್ದ ಬಂದು ಮಗು ಆಗಲ್ಲ ಅಂತ ಅಳುವುದಕ್ಕೆ ಪ್ರಾರಂಭ ಮಾಡಿದಾಗ ಶಿಕ್ಷಕ ಕಾಲನ್ನು ತೆಗದಿದ್ದು. ಈ ವಿಷಯವನ್ನು ಮಗು ಮನೆಗೆ ಬಂದು ತನ್ನ ಪೋಷಕರಿಗೆ ತಿಳಿಸಿದ್ದಾನೆ. ಇದಾದ ನಂತರ ಪೋಷಕರು ತಕ್ಷಣ ಮಗುವಿಗೆ ಸರ್ಕಾರಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುದ್ದು, ನಂತರ ಖಾಸಗಿ ಕ್ಲಿನಿಕ್ ಹಾಗೂ ಖಾಸಗಿ ಆಸ್ಪತ್ರೆಯ ಮೂಳೆ ತಜ್ಞ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಸರ್ಕಾರಿ ಆಸ್ಪತ್ರೆ ವೈದ್ಯರು ಹಾಗೂ ಖಾಸಗಿ ಆಸ್ಪತ್ರೆ ವೈದ್ಯರು ಎನಾಗಿದೆಯೆಂಬ ಮಾಹಿತಿಯನ್ನು ಮಗುವಿನಿಂದ ಪಡೆದು, ನಿಮ್ಮ ಮಗು ಬದುಕಿರುವದೇ ಹೆಚ್ಚು ಯಾರು ಹೀಗೆಲ್ಲ ಮಾಡಿದ್ದು ಎಂದು ಪೋಷಕರನ್ನು ಕೇಳಿದಾಗ, ಪೋಷಕರು ಹಾಗೂ ಮಗು ವೈದ್ಯರುಗಳಿಗೆ ಶಾಲೆಯಲ್ಲಿ ಆದಂತ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ನಂತರ ಶಾಲೆ ಆಡಳಿತ ಮಂಡಳಿ ಹಾಗೂ ಶಿಕ್ಷಕರಿಗೆ ಇದೆಲ್ಲದರ ಕುರಿತಾಗಿ ಮಾಹಿತಿ ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ತುಮಕೂರು | ಎತ್ತಿನಹೊಳೆ ನಾಲ ಕಾಮಗಾರಿ ಗುಂಡಿಗೆ ಬಿದ್ದು ಇಬ್ಬರು ಮಕ್ಕಳು ಧಾರುಣ ಸಾವು

ನಮ್ಮ ಮಗು ಸ್ವಲ್ಪದರಲ್ಲಿ ಪ್ರಾಣಪಾಯದಿಂದ ತಪ್ಪಿಸಿಕೊಂಡಿದೆ. ನಾವು ಬಡವರು, ಕೂಲಿ ಕಾರ್ಮಿಕರು, ನಮ್ಮ ಬಳಿ ಆಸ್ಪತ್ರೆ ಖರ್ಚು ವೆಚ್ಚ ಭರಿಸಲು ಶಕ್ತಿಯಿಲ್ಲವೆಂದು ಅಂಗಲಾಚಿದರೂ ಶಾಲಾ ಆಡಳಿತ ಮಂಡಳಿ ಕರುಣೆ ತೋರಿಲ್ಲ. ಈವರೆಗೂ ಮಗುವಿಗೆ ಸಿಟಿ ಸ್ಕ್ಯಾನಿಂಗ್, ಎಕ್ಸ್ ರೇ ಹಾಗೂ ಇನ್ನಿತರೆ ಚಿಕಿತ್ಸೆಗಳಿಗೆ ಸುಮಾರ್ ₹12,000ಕ್ಕೂ ಅಧಿಕ ಖರ್ಚಾಗಿದೆ. ಪೋಷಕರು ಮಗುವಿನ ಅರೋಗ್ಯ ಸಲುವಾಗಿ ಸಾಲ ಸೋಲ ಮಾಡಿ ಚಿಕೆತ್ಸೆ ಕೊಡಿಸಿದ್ದಾರೆ. ಇಂದಿಗೂ ಕೂಡಾ ಶಾಲಾ ಆಡಳಿತದಿಂದ ಈ ಹಣವನ್ನು ಪೋಷಕರಿಗೆ ನೀಡಿಲ್ಲ. ಹಾಗೆಯೇ ಯಾರೂ ಕೂಡ ಎಲ್ಲೂ ಈ ವಿಷಯ ಹೇಳಬಾರದೆಂದು ಶಾಲೆಯಲ್ಲಿ ಇರುವಂತಹ ಬೇರೆ ಮಕ್ಕಳಿಗೂ ಬೆದರಿಕೆ ಹಾಕಿದ್ದಾರೆಂದು ಬಲ್ಲ ಮೂಲಗಳಿಂದ ಮಾಹಿತಿ ಬಂದಿದೆ.

ಭಾರದ್ವಾಜ್
ರಾಘವೇಂದ್ರ, ಶಿವಮೊಗ್ಗ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗೇಮಿಂಗ್​ ಆ್ಯಪ್​ಗಳಿಗೆ ಅಕ್ರಮ ಹಣ ವರ್ಗಾವಣೆ ಆರೋಪ: ಚಿತ್ರದುರ್ಗ ಶಾಸಕ ವೀರೇಂದ್ರ ಮನೆ ಮೇಲೆ ಇಡಿ ದಾಳಿ

ಶುಕ್ರವಾರ(ಆಗಸ್ಟ್ 22) ಬೆಳ್ಳಂಬೆಳಗ್ಗೆ ಚಿತ್ರದುರ್ಗದ ಶಾಸಕ ಕೆಸಿ ವೀರೇಂದ್ರ ಪಪ್ಪಿ ಅವರ...

ಕಲಬುರಗಿ | ಯುವಕರು ಮಾರಕಾಸ್ತ್ರ ಹಿಡಿದ ವಿಡಿಯೊ ವೈರಲ್: ನಾಲ್ವರು ಯುವಕರ ವಿರುದ್ಧ ಎಫ್‌ಐಆರ್

ಕಲಬುರಗಿಯ ದೇವಿ ನಗರದಲ್ಲಿ ನಾಲ್ವರು ಯುವಕರು ಕೈಯಲ್ಲಿ ಮಾರಕಾಸ್ತ್ರಗಳು ಹಿಡಿದು ವಿಡಿಯೋ...

ಸಕಲೇಶಪುರ | ಮಿತಿ ಮೀರಿರುವ ಮಾದಕ ವಸ್ತು ಸೇವನೆ ಆಧುನಿಕತೆಗೆ ಮಾರಕವಾಗಿದೆ: ಗಾಂಧಿವಾದಿ ಪ್ರಸನ್ನ

ಮಾದಕ ವಸ್ತು ಮುಕ್ತ ಭಾರತವನ್ನು ಕಟ್ಟುವ ಸಕಲೇಶಪುರದ ಜನತೆಯ ಜತೆಗೆ ನಾನೂ...

Download Eedina App Android / iOS

X