ಇಡೀ ಭಾರತವನ್ನು ಸನಾತನ ಹಿಂದೂ ಧರ್ಮದ ಪ್ರಯೋಗ ಶಾಲೆ ಮಾಡಿಯೇ ಮಾಡುತ್ತೇವೆ. ನಮಗೆ ಇರುವುದು ಇದೊಂದೇ ದೇಶ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಶಿಗ್ಗಾಂವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಪರವಾಗಿ ದುಂಢಸಿಯಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, “ದುಂಢಸಿಯಲ್ಲಿ 19 ಎಕರೆ ಜಮೀನು ವಕ್ಪ್ ಆಸ್ತಿ ಮಾಡಿದ್ದಾರೆ. ನಾನು ವಕ್ಪ್ ಬಗ್ಗೆ ಆಗ ಮಾತನಾಡಲು ವಿಶ್ವೇಶ್ವರ್ ಹೆಗಡೆ, ಬೊಮ್ಮಾಯಿ ಕಾರಣ. ಇನ್ನೂ ಎಷ್ಟು ವರ್ಷ ಇಂದಿರಾ ಗಾಂಧಿ ಅಂತ ಹೇಳುತ್ತಿರಿ, ಜಿಲೇಬಿ ಫ್ಯಾಕ್ಟರಿ ಮಾಡುತ್ತೇನೆ. ಬಟಾಟಿಯಲ್ಲಿ ಬಂಗಾರ ತೆಗೆಯುತ್ತೇನೆ ಅನ್ನುವ ಹಾಪ್ ಮ್ಯಾಡ್ ರಾಹುಲ್ ಗಾಂಧಿ ಮಾತು ಕೇಳುತ್ತೀರಾ” ಎಂದ ಪ್ರಶ್ನಿಸಿದರು.
“ವಕ್ಪ್ ಕಾಯಿದೆ ಎಷ್ಟು ಅಪಾಯಕಾರಿ ಇದೆ ನೋಡಿ, ಅವರು ಮೂವತ್ತು ಪರ್ಸೆಂಟ್ ಜನಸಂಖ್ಯೆ ಆದರೆ, ನಮ್ಮವರು ಯಾರೂ ಶಾಸಕರಾಗಲು ಸಾಧ್ಯವಿಲ್ಲ. ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ, ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಖಾನ್ ಪಠಾಣ್ ಅವರಿಗೆ ಹೊಲಿಕೆ ಮಾಡಿ ನೋಡಿ, ಅವರ ಅಭ್ಯರ್ಥಿ ಬಗ್ಗೆ ಅಜ್ಜಂಪೀರ್ ಖಾದ್ರಿನೇ ಅವನ ಬಣ್ಣ ಬಿಚ್ಚಿದ್ದಾನೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆಶಿ ನಮ್ಮ ಮುಖಾ ನೋಡಿ ಮತ ಹಾಕಿ ಎನ್ನುತ್ತಾರೆ. ನಾವು ಯಾರ ಮುಖ ನೋಡಿ ಹಾಕಬೇಕು. ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಪಿಎ ಮೂಲಕ ಸರ್ಕಾರಿ ಅಧಿಕಾರಿನ ಕೊಂದಿದ್ದಾರೆ. ಸಚಿವ ತಿಮ್ಮಾಪುರ 900 ಕೋಟಿ ಲೂಟಿ ಮಾಡಿದ್ದಾರೆ. ನೀವು ಹಿಂಗೆ ಇದ್ದರೆ ಎಲ್ಲ ಆಸ್ತಿ ಹೋಗುತ್ತದೆ. ಎರಡು ಸಾವಿರ ರೂಪಾಯಿ ಮಾತ್ರ ಉಳಿಯುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ವಕ್ಫ್ ವಿವಾದದಲ್ಲಿ ಜೆಪಿಸಿ | ಹಿಂದು ವಿರೋಧಿ, ರೈತ ವಿರೋಧಿ ನೀತಿಗೇಕೆ ಬಿಜೆಪಿ ಅಂಟಿಕೊಳ್ಳುತ್ತಿದೆ?
“ಇಡೀ ಭಾರತವನ್ನು ಕಾಂಗ್ರೆಸ್ ನಾಯಕರು ವಕ್ಪ್ ಮಾಡಲು ಹೊರಟಿದ್ದಾರೆ. ಮುಡಾ ಹಗರಣದಲ್ಲಿ ಸಿಲುಕಿರುವ ಸಿಎಂ ಸಿದ್ದರಾಮಯ್ಯಗೆ ಮರ್ಯಾದೆ ಇದ್ದೀದ್ದೇ ಆಗಿದ್ದರೆ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಆದರೆ ಇವರೊಬ್ಬ ಭಂಡ ಸಿಎಂ” ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
“ಸಿದ್ದರಾಮಯ್ಯ ಅವರ ಸರ್ಕಾರ ಬಂದು ಒಂದೂವರೆ ವರ್ಷ ಆಯಿತು ಒಂದು ಪೈಸೆ ಕೊಟ್ಟಿಲ್ಲ. ನಮಗೆ ಕ್ಷೇತ್ರದ ಅಭಿವೃದ್ದಿಗೆ ಹಣ ಕೇಳಿದರೆ, ಗ್ಯಾರಂಟಿ ಹಣ ಕೊಟ್ಟಿದ್ದೇವೆ ಎಂದು ಉಡಾಫೆಯಾಗಿ ಹೇಳುವ ಬೇಜವಾಬ್ದಾರಿ ಸರ್ಕಾರ ಹಿಂದೆಂದೂ ಕಂಡಿಲ್ಲ” ಎಂದು ವಾಗ್ದಾಳಿ ನಡೆಸಿದರು.