ಒಂದು ಪತ್ರ | ಮಾದಿಗ-ವಾಲ್ಮೀಕಿಗಳಲ್ಲಿ ಬಂಧುತ್ವ ಬೆಳೆಯಲಿ

Date:

Advertisements

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಲುವೆಹಳ್ಳಿಯ ಮಾದಿಗ ಸಮುದಾಯದವರಿಗೆ ಕ್ಷೌರ ಮಾಡುವ ವಿಷಯದಲ್ಲಿ ನಾಯಕ ಸಮುದಾಯದ ಕೆಲವರು ಅಸ್ಪೃಶ್ಯತೆ ಆಚರಿಸಿದ್ದಾರೆ. ಪರಿಣಾಮ ಜಿಲ್ಲಾಡಳಿತ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸಮನ್ವಯ ಸಭೆ ನಡೆಸಿ ಸಾಮರಸ್ಯದಿಂದ ಒಗ್ಗಟ್ಟಾಗಿ ಇರುವಂತೆ ಕೋರಿದ್ದಾರೆ. ಪ್ರಕರಣವು ಬೆಳಕಿಗೆ ಬಂದ ಬಳಿಕ, ಎರಡೂ ಸಮುದಾಯಗಳ ನಡುವೆ ಸಾಮರಸ್ಯ ಬೆಳೆಯಬೇಕೆಂದು ಆಶಿಸಿ ಚಿಂತಕರು ಪತ್ರವೊಂದನ್ನು ಬರೆದಿದ್ದಾರೆ. ಆ ಪತ್ರಕ್ಕೆ ಹಲವರು ಸಹಿಹಾಕಿದ್ದಾರೆ.

ಪತ್ರದಲ್ಲಿರುವ ವಿವರ ಹೀಗಿದೆ;

ಕಾಲುವೆಹಳ್ಳಿಯಲ್ಲಿ ನಡೆದಿರುವಂತಹ ಘಟನೆಗಳು ಸಮುದಾಯಗಳ ನಡುವೆ ಒಂದಷ್ಟು ಪೂರ್ವಾಗ್ರಹ, ವೈಮನಸ್ಯ ಹುಟ್ಟು ಹಾಕುತ್ತವೆ. ಆದರೆ, ಗ್ರಾಮದ ನಾಯಕ ಸಮುದಾಯ ಮತ್ತು ಮಾದಿಗ ಸಮುದಾಯದ ಮುಖಂಡರುಗಳು ಒಟ್ಟಾಗಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸಾಮರಸ್ಯದಿಂದ ಬದುಕುವುದಾಗಿ ಭರವಸೆ ನೀಡಿದ್ದಾರೆ. ಇದು ಒಳ್ಳೆಯ ಬೆಳವಣಿಗೆ. ದುಡಿದು ಉಣ್ಣುವ, ದಿನ ಬೆಳಗಾದರೆ ಅಣ್ಣ, ಅಕ್ಕ, ಮಾವ, ಅಳಿಯ, ಅತ್ತೆ, ದೊಡ್ಡಪ್ಪ, ಚಿಕ್ಕಮ್ಮ ಎಂದು ಒಡನಾಡುವ ಈ ಸಮುದಾಯಗಳು ಜಾತಿ ಕೇಂದ್ರಿತ ವಿಷಯಗಳಿಗೆ ಕಚ್ಚಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ.

Advertisements

ಕಾಲುವೆಹಳ್ಳಿ ಮಾತ್ರವಲ್ಲದೆ ಇತ್ತೀಚಿಗೆ ಕರ್ನಾಟಕದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚುತ್ತಿರುವ ದಲಿತರ ಮೇಲಿನ ಹಲ್ಲೆ, ರ‍್ಯಾದೆಗೇಡು ಹತ್ಯೆ, ದೌರ್ಜನ್ಯಗಳ ಕೆಲವು ಪ್ರಕರಣಗಳಲ್ಲಿ ಇತರೆ ಹಿಂದುಳಿದ ಜಾತಿಗಳ ಜತೆ ಮಾದಿಗ-ವಾಲ್ಮೀಕಿ ಎದುರಾಳಿತನವೂ ಕಂಡುಬರುತ್ತಿದೆ. ವಾಸ್ತವದಲ್ಲಿ ಬಹುಪಾಲು ಗ್ರಾಮಗಳಲ್ಲಿ ಮಾದಿಗ-ವಾಲ್ಮೀಕಿಗಳು ಅನೋನ್ಯವಾಗಿದ್ದಾರೆ. ಮಾದಿಗ ಮತ್ತು ವಾಲ್ಮೀಕಿಗಳು ಪರಸ್ಪರ ಬೆಂಬಲವಾಗಿದ್ದಾರೆ. ಕಾರಣ ಮಾದಿಗ ಮತ್ತು ವಾಲ್ಮೀಕಿಗಳು ಇಬ್ಬರೂ ಪ್ರಭಲ ಮೇಲುಜಾತಿಗಳಿಂದ ದಮನಕ್ಕೆ ಒಳಗಾದವರು. ಹಾಗಾಗಿ ದಮನಿತರೇ ದಮನಿತರನ್ನು ದೌರ್ಜನ್ಯ ಮಾಡುವುದು, ಅಸ್ಪೃಶ್ಯತೆ ಆಚರಿಸುವುದು ವಿಷಾದನೀಯ. ಕೆಲವು ಘಟನೆಗಳಿಗೆ ನಾಯಕ ಸಮುದಾಯ ತಲೆತಗ್ಗಿಸಬೇಕಾಗುತ್ತದೆ.

ದಲಿತ ಚಳುವಳಿ ವಾಲ್ಮೀಕಿ ಸಮುದಾಯವನ್ನೂ ಪೊರೆದಿದೆ. ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳಕ್ಕಾಗಿ ದಲಿತರೂ ದನಿ ಎತ್ತಿದ್ದಾರೆ. ನಾಯಕ ಸಮುದಾಯದ ಹೊಸ ತಲೆಮಾರು ಹಾಸ್ಟೆಲುಗಳಲ್ಲಿ ದಲಿತ ಸಮುದಾಯಗಳ ಜತೆಗೆ ಕಲಿತ ಕಾರಣ ಅಸ್ಪೃಶ್ಯತೆಗಿಂತ ಸ್ನೇಹ ಸಂಬಂಧ ಬೆಳೆದಿದೆ. ಗ್ರಾಮೀಣ ಭಾಗದ ಕೆಲವು ಹಳ್ಳಿಗಳಲ್ಲಿ ಮಾತ್ರ ನಾಯಕ ಸಮುದಾಯದ ಹಿರಿ-ಕಿರಿಯರು ಮಾದಿಗರನ್ನು ಈಗಲೂ ಅಸ್ಪೃಶ್ಯರನ್ನಾಗಿ ಕಾಣುತ್ತಿದ್ದಾರೆ. ದಮನಕ್ಕೆ ಒಳಗಾದ ಎಲ್ಲಾ ಕೆಳಜಾತಿ-ಸಮುದಾಯಗಳು ಸಂಘಟಿತರಾಗಬೇಕೆ ಹೊರತು, ಹೊಡೆದು ಹೋಳಾಗಬಾರದು. ಹಾಗಾಗಿ ವಾಲ್ಮೀಕಿ ಸಮುದಾಯ ಮಾದಿಗ ಸಮುದಾಯದ ಜತೆ ಸಹೋದರತ್ವ ಬೆಳೆಸಿಕೊಳ್ಳಬೇಕು. ಸಾಧ್ಯವಾದಷ್ಟು ಸಮುದಾಯ ಪ್ರಜಾತಾಂತ್ರಿಕ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್ ಮತ್ತು ವಾಲ್ಮೀಕಿ ಜಯಂತಿಯನ್ನು ಒಟ್ಟಿಗೆ ಆಚರಿಸಬೇಕು. ಇಬ್ಬರೂ ಅಂಬೇಡ್ಕರ್ ಕನಸಿನ ಸಂವಿಧಾನದ ಅಡಿಯಲ್ಲಿ ಮತ್ತಷ್ಟು ಆರ್ಥಿಕವಾಗಿ ಸಾಮಾಜಿಕವಾಗಿ ರಾಜಕೀಯವಾಗಿ ಪ್ರಭಲರಾಗಬೇಕಿದೆ. ಇಂತಹದ್ದೊಂದು ಸಂವಿಧಾನಬದ್ಧ ಬಂದುತ್ವ-ಸ್ನೇಹ ವಾಲ್ಮೀಕಿ ಸಮುದಾಯದಲ್ಲಿ ಚಿಗುರೊಡೆಯಬೇಕು ಎಂದು ಪ್ರಜ್ಞಾವಂತರಾಗಿ ನಾವು ಆಶಿಸುತ್ತೇವೆ ಎಂದು ಚಿಂತಕರು, ಸಾಹಿತಿಗಳು ಹೇಳಿದ್ದಾರೆ.

ಪತ್ರಕ್ಕೆ ಹಲವರು ಸಹಿಹಾಕಿದ್ದಾರೆ;
-ಬಿ.ಎಲ್.ವೇಣು, ಸಾಹಿತಿಗಳು, ಚಿತ್ರದುರ್ಗ
-ರವೀಂದ್ರ ನಾಯ್ಕರ, ಸಂಘಟಕರು, ಬೆಳಗಾವಿ
-ಎ.ಬಿ.ರಾಮಚಂದ್ರಪ್ಪ, ನಿವೃತ್ತ ಪ್ರಾಧ್ಯಾಪಕರು, ದಾವಣಗೆರೆ.
-ಎಸ್.ಎಂ.ಮುತ್ತಯ್ಯ, ಸಹ ಪ್ರಾಧ್ಯಾಪಕರು, ಶಿವಮೊಗ್ಗ.
-ಜಯಲಕ್ಷ್ಮಿ, ಉದ್ಯಮಿಗಳು, ಮೊಳಕಾಲ್ಮೂರು.
-ಬಗ್ಗನಾಡು ನಾಗಭೂಷಣ, ಸಹ ಪ್ರಾಧ್ಯಾಪಕರು, ತುಮಕೂರು
-ಅನಿಲ್ ಕುಮಾರ್, ಪತ್ರಕರ್ತರು, ಮಧುಗಿರಿ.
-ಮುನೀಂದ್ರ ಕುಮಾರ್, ನಿವೃತ್ತ ಪ್ರಾಂಶುಪಾಲರು, ದಾಸರಹಳ್ಳಿ
-ಶಿವರಾಜ ಅಲ್ಬೂರು, ಪತ್ರಕರ್ತರು.
-ಎಳನಾಡು ಮಂಜು, ಪತ್ರಕರ್ತರು, ದಾವಣಗೆರೆ
-ಎಂ.ಎನ್. ಅಹೋಬಳಪತಿ, ಪತ್ರಕರ್ತರು, ಚಿತ್ರದುರ್ಗ
-ಮಂಜುನಾಥ ಸ್ವಾಮಿ, ರೈತರು, ಚಿತ್ರದುರ್ಗ
-ಅರುಣ್ ಜೋಳದಕೂಡ್ಲಿಗಿ, ಲೇಖಕರು, ಕಲಬುರಗಿ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X