ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಹಲವಾರು ಪ್ರಕರಣಗಳಲ್ಲಿ ವಶಕ್ಕೆ ಪಡೆದಿದ್ದ ಅಕ್ರಮ ಮದ್ಯವನ್ನು ಪ್ರಾಧಿಕೃತ ಅಧಿಕಾರಿ ಹಾಗೂ ಅಬಕಾರಿ ಉಪಆಯುಕ್ತರ ಆದೇಶದಂತೆ ಅಬಕಾರಿ ಉಪ ಅಧೀಕ್ಷಕ ಎಂ ಹೆಚ್ ರಘು, ತಹಸೀಲ್ದಾರ್ ಗ್ರೇಡ್-2 ಅಶೋಕ್ ಕುಮಾರ್ ಸೇರಿದಂತೆ ಇತರರ ಸಮ್ಮುಖದಲ್ಲಿ ಸಿಬ್ಬಂದಿಗಳು ಮದ್ಯ ನಾಶಪಡಿಸಿದರು.
ಹಾಸನ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಎಂ ಹೆಚ್ ರಘು ಸುದ್ದಿಗಾರರೊಂದಿಗೆ ಮಾತನಾಡಿ, “ಅಬಕಾರಿ ಮೊಕದ್ದಮೆ ಹಾಗೂ ಪೊಲೀಸ್ ಮೊಕದಮ್ಮೆಗಳಲ್ಲಿ ವಶಕ್ಕೆ ಪಡೆದ 5 ಪ್ರಕರಣಗಳಲ್ಲಿ 486.465 ಲೀಟರ್ ಮದ್ಯ, 172.310 ಲೀಟರ್ ಬಿಯರ್, 06 ಲೀಟರ್ ಕಳ್ಳಭಟ್ಟಿ, 14.5 ಲೀಟರ್ ಬೆಲ್ಲದ ಕೊಳೆ ಹಾಗೂ ಇತರೆ ವಸ್ತುಗಳನ್ನು ಅಬಕಾರಿ ಉಪ ಆಯುಕ್ತರ ಆದೇಶದಂತೆ ಇಲಾಖೆ ಅಧಿಕಾರಿಗಳ ಹಾಗೂ ತಹಶೀಲ್ದಾರ್ ಗ್ರೇಡ್-2 ಅಶೋಕ್ ಕುಮಾರ್ ಸಮ್ಮುಖದಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಮದ್ಯ ನಾಶಪಡಿಸುತ್ತಿದ್ದೇವೆ” ಎಂದು ಹೇಳಿದರು.
“ಯಾರಾದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದು, ಸರಬರಾಜು ಮಾಡುವುದು ಕಂಡು ಬಂದಲ್ಲಿ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಮುಖ್ಯವಾಗಿ ಬಾರ್ ಅಂಡ್ ರೆಸ್ಟೋರೆಂಟ್‌ಗಳಲ್ಲಿ ಸ್ವಚ್ಛತೆ ಕೊರತೆ ಬಗ್ಗೆ ದೂರು ಕಂಡುಬಂದಲ್ಲಿ ಅಂತಹವರನ್ನು ಕರೆದು ತಿಳಿ ಹೇಳುತ್ತೇವೆ. ಆದರೂ ಸರಿ ಪಡಿಸದಿದ್ದಲ್ಲಿ ಕ್ರಮಕ್ಕೆ ಮುಂದಾಗಲಿದ್ದೇವೆ” ಎಂದು ಅಬಕಾರಿ ಇಲಾಖೆ ತಹಶೀಲ್ದಾರ್ ಗ್ರೇಡ್-2 ಅಶೋಕ್ ಕುಮಾರ್ ಮಾಹಿತಿ ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ?ಹಾಸನ | ಗರ್ಭ ಕೊರಳ, ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಜಾಥಾ
ಈ ವೇಳೆ ಅಬಕಾರಿ ಇಲಾಖೆ ತಹಶೀಲ್ದಾರ್ ಗ್ರೇಡ್-2 ಅಶೋಕ್ ಕುಮಾರ್, ನಿರೀಕ್ಷಕಿ ಎ ಟಿ ಚಂದನ, ಅಬಕಾರಿ ಉಪ ನಿರೀಕ್ಷಕ ಹರೀಶ್ ಸಿ ಹಾಗೂ ಹಾಸನದ ಕೆಎಸ್‌ಬಿಎಲ್ ಡಿಪೋ-2 ವ್ಯವಸ್ಥಾಪಕರು ಹಾಗೂ ಇತರರು ಇದ್ದರು.
