ಒಂದು ಎಕರೆ ಮೂವತ್ತು ಗುಂಟೆ ಹೊಲದಲ್ಲಿ ತೊಗರಿ ಬೆಳೆದಿದ್ದು, ಸಾಲ ಭಾದೆಯಿಂದಾಗಿ ಹೊಲದಲ್ಲಿ ವಿಷ ಕುಡಿದು ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ನರನಾಳ ಗ್ರಾಮದಲ್ಲಿ ನಡೆದಿದೆ.
ಚಿಂಚೊಳಿ ತಾಲೂಕಿನ ನರನಾಳ ಗ್ರಾಮದ ನಿವಾಸಿ ರೈತ ನಾಗಪ್ಪ(40) ರೈತ ನವೆಂಬರ್ 6ರ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ತಮ್ಮ ಸ್ವಂತ ಹೊಲದಲ್ಲಿ ವಿಷ ಕುಡಿದಿದ್ದು, ಅವರನ್ನು ಜಯದೇವ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 8ರಂದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ರೈತ ನಾಗಪ್ಪನವರ ತಂದೆ ಹೆಸರಿನಲ್ಲಿರುವ ಜಮೀನಿನಲ್ಲಿ ತೊಗರಿ ಬೆಳೆ ಬೆಳೆಯಲಾಗಿತ್ತು. ಅತಿವೃಷ್ಠಿಯಿಂದಾಗಿ ಉದ್ದು, ಹೆಸರು ಬೆಳೆ ಹಾನಿಯಾಗಿದೆ. ಧರ್ಮಸ್ಥಳ ಸಂಘ ಮತ್ತು ಎಲ್‌ಎಂಟಿ ಸಂಘದಲ್ಲಿ ₹2 ಲಕ್ಷ ರೂಪಾಯಿ ಸಾಲ ಪಡೆದಿದ್ದರು.
ಸಾಲ ವಸೂಲಿಗಾಗಿ ದಿನ ಬೆಳಿಗ್ಗೆ ರೈತ ನಾಗಪ್ಪನ ಮನೆ ಮುಂದೆ ಧರಣಿ ಕುಳಿತು ರೈತನಿಗೆ ಮಾನಸಿಕ ಹಿಂಸೆ ಕೊಟ್ಟು ಅವಮಾನ ಮಾಡುತ್ತಿರುದ್ದ ಧರ್ಮಸ್ಥಳ ಮತ್ತು ಎಲ್‌ಎಂಟಿ ಸಂಘಗಳ ಕಿರುಕುಳದಿಂದ ಜಿಗುಪ್ಸೆಗೊಂಡು ಸಾಲದ ಭಾದೆ ತಾಳಲಾರದೆ ರೈತ ನಾಗಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ l ಅಕ್ರಮವಾಗಿ ಮದ್ಯ ಮಾರಾಟ; ನಾಶ ಪಡಿಸಿದ ಅಬಕಾರಿ ಇಲಾಖೆ ಅಧಿಕಾರಿಗಳು
ಮೃತ ನಾಗಪ್ಪನಿಗೆ ಒಬ್ಬ ಪುತ್ರಿ(8), ಒಬ್ಬ ಪುತ್ರ(3)ನಿದ್ದು, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬಕ್ಕೆ ರಾಜ್ಯ ಸರ್ಕಾರ ಸೂಕ್ತ ಪರಿಹಾರ ಕೊಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪಾ ಮಮಶೆಟ್ಟಿ ಮಾಧ್ಯಮಗಳ ಮೂಲಕ ಒತ್ತಾಯಿಸಿದ್ದಾರೆ.
