ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಮತದಾರರನನ್ನು ಓಲೈಸಲು ಕೆಲವು ಬಿಜೆಪಿ ಮುಖಂಡರು ಹಣ ಹಂಚುತ್ತಿರುವ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ತೆರಳಿದ್ದ ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ ಸವಣೂರು ಪಟ್ಟಣದ ಸುಭಾಷ್ ಗಡಿಯವರ ಮನೆಯಲ್ಲಿ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿಯವರ ಕಾರ್ಯಕರ್ತರಿಂದ ಮತದಾರರಿಗೆ ಹಣ ಹಂಚಲಾಗುತ್ತಿದೆ ಎಂಬ ನಿಖರ ಮಾಹಿತಿ ತಿಳಿದು ಕೆ ಆರ್ ಎಸ್ ಕಾರ್ಯಕರ್ತರು ಅದನ್ನ ವಿಡಿಯೋ ಮಾಡಲು ಹೋಗಿದ್ದಾರೆ.
ಇದನ್ನು ಖಂಡಿಸಿ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದರಿಂದ ಕುಪಿತರಾಗಿ ಬಿಜೆಪಿಯ ಕಾರ್ಯಕರ್ತರಾದ ಮಹೇಶ್ ಮುದಗಲ್ ಮತ್ತು ಸಂತೋಷ ಪಾಟೀಲ ಇತರ ಬೆಂಬಲಿಗರೊಂದಿಗೆ ಮಹಿಳೆಯರೆನ್ನದೆ ಹಲವರ ಮೇಲೆ ಹಲ್ಲೆ ಮಾಡಿ, ಗಾಯಗೊಳಿಸಿದ್ದಾರೆ. ವಿಷಯ ತಿಳಿದ ತಕ್ಷಣ ಕಾಂಗ್ರೆಸ್ ಮತ್ತು ಕೆ ಆರ್ ಎಸ್ ನೂರಾರು ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ದಬ್ಬಾಳಿಕೆ ದುಡ್ಡು ಹಂಚಿ ಓಟು ಕೊಳ್ಳುವುದನ್ನು ಖಂಡಿಸಿ ಪ್ರತಿಭಟನೆಗಿಳಿದಿದ್ದಾರೆ. ಎಚ್ಚೆತ್ತ ಪೋಲಿಸರು ಲಾಠಿ ಚಾರ್ಜ್ ಮಾಡಿ ಎಲ್ಲರನ್ನೂ ಚದುರಿಸಿ ವಾತಾವರಣವನ್ನು ತಿಳಿಗೊಳಿಸಿದ್ದಾರೆ.
ಪ್ರತಿ ಚುನಾವಣೆಯಲ್ಲಿ ಬೊಮ್ಮಾಯಿಯವರ ಬೆಂಬಲಿಗರಾದ ಸುಭಾಷ್ ಗಡಿಯವರ ಮನೆಯಲ್ಲಿಯೇ ಕಾರ್ಯಕರ್ತರಿಗೆ ಮತ್ತು ಮತದಾರರಿಗೆ ದುಡ್ಡು ಹಂಚಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದನ್ನು ಓದಿದ್ದೀರಾ?
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಶೋಭಾ ನಿಸ್ಸೀಮ್‌ಗೌಡ್ರ ಇವರು ಬಿಜೆಪಿ ಬೊಮ್ಮಾಯಿ ಕಚೇರಿಯಿಂದ ಹಣ ಹಂಚುವುದರಲ್ಲಿ ಪ್ರಮುಖ ಪಾತ್ರಧಾರಿ ಎಂದು ತಿಳಿದುಬಂದಿದೆ. ಎಲ್ಲಾ ಸ್ತ್ರೀ ಶಕ್ತಿ ಸಂಘದವರಿಗೂ ಹಣ ಹಂಚಿರುವ ಆರೋಪ ಕೇಳಿಬಂದಿದೆ.
