- ವೀರಶೈವ ಸಮುದಾಯವನ್ನು ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆ
- ಬಿಜೆಪಿ ಒಂದೇ ಲಿಂಗಾಯತ ಸಮುದಾಯಕ್ಕೆ ಮನ್ನಣೆ ನೀಡಿದ ಪಕ್ಷ
ವೀರಶೈವ ಲಿಂಗಾಯತ ಸಮುದಾಯವನ್ನ ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಬಳಸಿಕೊಂಡು ವಂಚಿಸಿದೆ ಎಂದು ಬಿಜೆಪಿ ಉಪಾಧ್ಯಕ್ಷ, ಶಿಕಾರಿಪುರ ಶಾಸಕ ಬಿ ವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಅವರು ವೀರಶೈವ ಲಿಂಗಾಯತ ವಿಚಾರದಲ್ಲಿ ಕಾಂಗ್ರೆಸ್ ನಡೆದುಕೊಂಡಿರುವ ರೀತಿಯನ್ನು ಕಟು ಶಬ್ಧಗಳಲ್ಲಿ ಖಂಡಿಸಿದ್ದಾರೆ.
ಲಿಂಗಾಯತ ಸಮುದಾಯವನ್ನು ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಂಡು ಈಗ ನ್ಯಾಯ ಕೊಡದೇ ವಂಚಿಸಿದೆ ಎಂದಿದ್ದಾರೆ.
‘ಅಧಿಕಾರಕ್ಕೆ ಬರಲು ವೀರಶೈವ ಲಿಂಗಾಯತ ಸಮುದಾಯವನ್ನ ಮೆಟ್ಟಿಲಾಗಿಸಿಕೊಂಡು, ಈಗ ಕಾಂಗ್ರೆಸ್ ಮರೆತಿದೆ, ಸಮುದಾಯದ ಹಿರಿಯ ನಾಯಕರೂ ಈಗ ಮೌನ ತಾಳಿದ್ದಾರೆʼ ಎಂದು ವಿಜಯೇಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?:ಶನಿವಾರ ಸಿದ್ದರಾಮಯ್ಯ ಪ್ರಮಾಣವಚನ; ಸಚಿವ ಸಂಪುಟ ರಚನೆಗೆ ಸಿಎಂ-ಡಿಸಿಎಂ ಕಸರತ್ತು
ವೀರಶೈವ ಲಿಂಗಾಯತ ಸಮುದಾಯದ 39 ಶಾಸಕರು ಗೆದ್ದಿದ್ದರೂ, ಉನ್ನತ ಸ್ಥಾನ ಕೇಳುವಲ್ಲಿ ಸಮುದಾಯದಿಂದ ಗಟ್ಟಿ ಧ್ವನಿ ಕೇಳಿಸುತ್ತಿಲ್ಲ. ಈಗ ಕಾಂಗ್ರೆಸ್ ಮುಖವಾಡ ಶಾಶ್ವತವಾಗಿ ಕಳಚಿ ಬಿದ್ದಿದೆ ಎಂದು ವಿಜಯೇಂದ ಕೈ ಪಕ್ಚನ್ನು ಕುಟುಕಿದ್ದಾರೆ.
ಬಿಜೆಪಿ ಒಂದೇ ಎಲ್ಲಾ ಸಮುದಾಯಗಳಿಗೂ ನ್ಯಾಯ ಒದಗಿಸಿದೆ. ಬಸವಣ್ಣನ ಆಶಯಗಳಿಗೆ ತಕ್ಕಂತೆ ನ್ಯಾಯ ಒದಗಿಸುವ ಪಕ್ಷ ಇದಾಗಿದೆ. ಇವನ್ನೆಲ್ಲ ಜನ ನೋಡಿ ಮುಂದೆ ರಾಜ್ಯದಲ್ಲಿ ಮರಳಿ ಬಿಜೆಪಿಯನ್ನು ಬೆಂಬಲಿಸಲಿ ಎಂದು ವಿಜಯೇಂದ್ರ ಹೇಳಿದ್ದಾರೆ.