‌ರಾಮನಗರ | ಓಬವ್ವ, ಮನುಕುಲಕ್ಕೇ ಸ್ಫೂರ್ತಿದಾಯಕ ಆದರ್ಶ ಮಹಿಳೆ: ತಹಶೀಲ್ದಾರ್ ಶಿವಕುಮಾರ್

Date:

Advertisements

ವೀರ ವನಿತೆ ಓಬವ್ವ ಈ ನಾಡ ಚರಿತ್ರೆಯ ವೀರ, ಶೌರ್ಯ, ಪರಾಕ್ರಮಕ್ಕೆ ಮನುಕುಲಕ್ಕೆ ಸ್ಫೂರ್ತಿದಾಯಕವಾಗಿದ್ದು, ಅಂದು, ಇಂದು, ಮುಂದೆಂದಿಗೂ ಮಹಿಳೆಯರಿಗೆ ಮಾತ್ರವಲ್ಲದೆ ಇಡೀ ಮನುಕುಲಕ್ಕೇ ಆದರ್ಶ ಮಹಿಳೆಯಾಗಿದ್ದಾರೆ. ಇಂದು ಅವರನ್ನು ಸ್ಮರಿಸುವುದು ನಮ್ಮ ಜನುಮದ ಪುಣ್ಯದಾಯಕ ಕೆಲಸವಾಗಿದೆ ಎಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅದ್ಯಕ್ಷತೆ ವಹಿಸಿದ್ದ ಗ್ರೇಡ್ 2 ತಹಶೀಲ್ದಾರ್ ಶಿವಕುಮಾರ್ ಹೇಳಿದರು.

ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವೀರ ವನಿತೆ ಓಬವ್ವನ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಗತಿಪರ ಸಂಘಟನೆಗಳ ಅಧ್ಯಕ್ಷ ಕುಮಾರಸ್ವಾಮಿ ಮಾತನಾಡಿ, “ವೀರ ವನಿತೆ ಓಬವ್ವನ ಜೀವನಗಾಥೆಯನ್ನು ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ನಾವು ಬಾಲ್ಯದಿಂದಲೇ ತಿಳಿಸಬೇಕಾಗಿದೆ. ಸಮಾಜದಲ್ಲಿ ನಡೆವ ಅತ್ಯಾಚಾರ, ದೌರ್ಜನ್ಯ, ಶೋಷಣೆಗಳನ್ನು ಮೆಟ್ಟಿ ನಿಲ್ಲಲು ಓಬವ್ವನ ಚರಿತ್ರೆಯ ಜತೆಗೆ ಇತಿಹಾಸ ಪ್ರಸಿದ್ಧ ಇತರ ವೀರ ವನಿತೆಯರ ಯಶೋಗಾಥೆಯನ್ನೇ ನಾವು ತಿಳಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬಬೇಕಾಗಿದೆ. ಚಿತ್ರದುರ್ಗದ ಕೋಟೆಯಲ್ಲಿನ ಓಬವ್ವನ ಕಿಂಡಿ ನೋಡಿದರೆ ಸಾಕು ಹೃದಯದ ಧಮನಿ, ಧಮನಿಗಳ ರಕ್ತವನ್ನು ರೋಮಾಂಚನಗೊಳಿಸುತ್ತದೆ. ಇಂದಿನ ಎಷ್ಟೋ ಮಕ್ಕಳಿಗೆ ಈ ವಿಚಾರವೇ ತಿಳಿದಿಲ್ಲದಿರುವುದು ದುರ್ದೈವದ ಸಂಗತಿ” ಎಂದರು.

Advertisements

“ಇಂದು ಮಕ್ಕಳು ಸಿನಿಮಾ, ಕ್ರಿಕೆಟ್, ರಾಜಕೀಯ ನಾಯಕರೇ ನಮ್ಮ ಆರಾಧ್ಯ ದೈವ. ಅವರೇ ನಿಜ ನಾಯಕರೆಂದು ಭಾವಿಸಿರುವುದು ಸಮಾಜದ ಮೌಲ್ಯಗಳ ಅವನತಿಗೆ ಹಿಡಿದ ಕೈಗನ್ನಡಿಯಾಗಿದೆ. ಪೋಷಕರು ಹಾಗೂ ಶಿಕ್ಷಕರ ಜತೆಗೆ ಮಾಧ್ಯಮಗಳೂ ಕೂಡಾ ವೀರ ವನಿತೆ ಓಬವ್ವನಂತಹ ಇತಿಹಾಸವನ್ನು ತಿಳಿಸಿ ಅವರಲ್ಲಿ ಮರಳಿ ಮೌಲ್ಯ ತುಂಬವಂತಹ ಜವಾಬ್ದಾರಿ ಅತ್ಯಗತ್ಯವಾಗಿದೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಮಣಿಪಾಲ | ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಶಾಲಾ ಮಕ್ಕಳ ರಿಕ್ಷಾ: ಮೂವರಿಗೆ ಗಾಯ

ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಮಾತನಾಡಿ, “ರಾಷ್ಟ್ರೀಯ ಹಬ್ಬಗಳ ಸಮಿತಿ ಇತಿಹಾಸವನ್ನು ಮರೆತು ಹೋಗುವ ಮನುಕುಲಕ್ಕೆ ಪುಣ್ಯ ಪುರುಷರ ಜಯಂತಿಗಳ ಆಚರಣೆಗಳ ಮೂಲಕ ಅವರನ್ನು ಮುಂದಿನ ಪೀಳಿಗೆಯ ಜನರಿಗೂ ಪರಿಚಯಿಸುತ್ತಿರುವುದು ಅಭಿನಂದನಾರ್ಹ. ಅಂದು ಕೋಟೆ ಕಾಯಲು ಪ್ರಾಣತೆತ್ತ ಓಬವ್ವನ ಆತ್ಮ ಕೂಡ ಈ ಆಚರಣೆಯನ್ನು ಕಂಡು ತೃಪ್ತಭಾವ ಹೊಂದಿರುತ್ತದೆ” ಎಂದರು.

ಕಾರ್ಯಕ್ರಮದಲ್ಲಿ ಕನ್ನಡ ಭಾಸ್ಕರ್, ಭಾಜಪ ಅಧ್ಯಕ್ಷ ಕೆ ಪಿ ಕುಮಾರ್, ಹೋರಾಟಗಾರ ಪರಮೇಶ್, ಸರ್ಕಾರಿ ನೌಕರರಾದ ಪ್ರದೀಪ್, ಯಶೋಧ, ಸಿದ್ದಬಸವಯ್ಯ ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X