ಶಾಸಕರಾದವರು ಐಷರಾಮಿ ಹೋಟೆಲ್‌ಗಳಲ್ಲಿ ಊಟ ಮಾಡುವುದು ಸರ್ವೆ ಸಾಮಾನ್ಯ. ಆದರೆ ಮಂಡ್ಯ ಜಿಲ್ಲೆಯ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಾಮಾನ್ಯ ಮೆಸ್ ಒಂದರಲ್ಲಿ ಸಾಮಾನ್ಯ ಜನರ ಜತೆ ಕುಳಿತು ಊಟ ಮಾಡುವ ಮೂಲಕ ಎಲ್ಲರ ಗಮನಸೆಳೆದರು.
ಮಂಡ್ಯ ಜಿಲ್ಲೆಯ ಪಾಂಡವಪುರ ಪಟ್ಟಣದ ತಾಲೂಕು ಕಚೇರಿಯಲ್ಲಿರುವ ಶಾಸಕರ ಕಚೇರಿಗೆ ಭೇಟಿ ನೀಡಿ ರೈತಸಂಘದ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿದ ಬಳಿಕ ಪ್ರಕಾಶ್ ಮೆಸ್‌ನಲ್ಲಿ ಸಾಮಾನ್ಯ ಜನರಂತೆಯೇ ಮಧ್ಯಾಹ್ನದ ಊಟ ಮಾಡಿದರು.
ತಾವೊಬ್ಬ ಶಾಸಕನೆಂಬ ಹಮ್ಮುಬಿಮ್ಮು ಬಿಟ್ಟು ಸಾಮಾನ್ಯ ಜನರ ಜತೆಯಲ್ಲಿಯೇ ಕುಳಿತು ಊಟ ಮಾಡುವ ಮೂಲಕ ಗಮನಸೆಳೆದರು. ಈ ವೇಳೆ ಶಾಸಕರನ್ನು ಕಂಡ ಜನರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಊಟ ಮಾಡುತ್ತಿದ್ದ ಸ್ಥಳಕ್ಕೆ ಬಂದು ಮಾತನಾಡಿಸುತ್ತಿದ್ದ ದೃಶ್ಯ ಕಂಡುಬಂದಿತು.
ಈ ಹಿಂದೆ ಅವರ ತಂದೆ ದಿ. ಕೆ ಎಸ್ ಪುಟ್ಟಣ್ಣಯ್ಯ ಕೂಡ ಮೆಸ್ ಹಾಗೂ ಶೆಡ್ ಹೋಟೆಲ್‌ಗಳಲ್ಲಿ ಊಟ ಮಾಡುತ್ತಿದ್ದುದ್ದನ್ನು ಇಲ್ಲಿ ಸ್ಮರಿಸಬಹುದು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಕಸಾಪ ಯುವ ಜನಾಂಗವನ್ನು ಹೆಚ್ಚು ಗಮನ ಸೆಳೆಯಬೇಕು: ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ
ಅಂತೆಯೇ ಮೇಲುಕೋಟೆ ಕ್ಷೇತ್ರದ ಜನಪ್ರಿಯ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕೂಡ ತಮ್ಮ ತಂದೆ ಕೆ ಎಸ್ ಪುಟ್ಟಣ್ಣಯ್ಯ ರೀತಿಯಲ್ಲಿಯೇ ಮೆಸ್ ಹಾಗೂ ಶೆಡ್ ಹೋಟೆಲ್‌ಗಳಲ್ಲಿ ಊಟ ಮಾಡುವ ಮೂಲಕ ತಂದೆಯವರು ನಡೆದ ಮಾದರಿಯಲ್ಲಿ ನಡೆಯತೊಡಗಿದ್ದಾರೆ. ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಜತೆ ರೈತಸಂಘದ ಮುಖಂಡ ಕನಗನಮರಡಿ ಬಲರಾಮು ಸೇರಿದಂತೆ ಇತರರು ಇದ್ದರು.
ವರದಿ : ರಂಗನಾಥ್, ಮಾಕವಳ್ಳಿ