ವ್ಯಕ್ತಿಗೆ ಜ್ಞಾನದೊಂದಿಗೆ ಕೌಶಲ್ಯಗಳ ಅಗತ್ಯವಾದಾಗ; ಯಶಸ್ಸು ಗಳಿಸಲು ಸಾಧ್ಯ ಎಂದು ಹಿರಿಯ ಉಪನ್ಯಾಸಕ ಡಾ. ಶೌಕತ್ ಅಜೀಮ ಅಂಜುಮನ್ ಮಹಾವಿದ್ಯಾಲಯದಲ್ಲಿ, ಧಾರವಾಡ ಶಿಕ್ಷಣ ಶಾಸ್ತ್ರ ವಿಭಾಗ ಹಾಗೂ ಸಾಹಿತ್ಯ ವೇದಿಕೆ ಜಂಟಿಯಾಗಿ ರಾಷ್ಟ್ರೀಯ ಶಿಕ್ಷಣ ಯೋಜನೆಯನ್ನು ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ವಿವಿಧ ಕೋರ್ಸ್ ಜ್ಞಾನದ ಜೊತೆಗೆ ಮೌಲಾನ ಅಬುಲ್ ಕಲಾಂ ಆಜಾದ್ ಅವರ ಜೀವನ ಚರಿತ್ರೆ ಕಡೆಗೆ ಗಮನಹರಿಸಬೇಕು. ಯುಜಿಸಿ ಮತ್ತು ಐಐಟಿಯ ಅಡಿಪಾಯ ಹಾಕಿದ ಅವರ ಶೈಕ್ಷಣಿಕ ಕೊಡುಗೆಗಳ ಕುರಿತು ತಿಳಿಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ. ಎನ್. ಎಂ.ಮಕಾನದಾರ ಮೌಲಾನ ಅಬುಲ್ ಕಲಾಂ ಆಜಾದ್ ಅವರ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.
ರಾಷ್ಟ್ರೀಯ ಶಿಕ್ಷಣ ದಿನಾಚರಣೆಯ ಅಂಗವಾಗಿ ಅಂತರ್ ಕಾಲೇಜುಗಳ ಕ್ವಿಜ್ ಸ್ಪರ್ಧೆ ಏರ್ಪಡಿಸಲಾಗಿದ್ದು, ಧಾರವಾಡದ ಪ್ರತಿಷ್ಠಿತ 10 ಕಾಲೇಜುಗಳ ವಿದ್ಯಾರ್ಥಿಗಳು ಅದರಲ್ಲಿ ಪಾಲ್ಗೊಂಡಿದ್ದರು. ಪ್ರಥಮ ಬಹುಮಾನ ಜೆ.ಎಸ್.ಎಸ್ ಕಲಾ ಮಹಾವಿದ್ಯಾಲಯ, ದ್ವಿತೀಯ ಬಹುಮಾನ ಅಂಜುಮನ್ ವಿಜ್ಞಾನ ಮಹಾವಿದ್ಯಾಲಯ, ತೃತೀಯ ಬಹುಮಾನವನ್ನು ಕೆ.ಸಿ.ಡಿ ಮಹಾವಿದ್ಯಾಲಯ ಪಡೆದುಕೊಂಡಿತು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಸಾಹಿತ್ಯ ವೇದಿಕೆ ಅದ್ಯಕ್ಷೆ ಡಾ. ಬೀಬಿ ಆಯೇಶಾ ಚಕೋಲಿ ನೆರವೇರಿಸಿದರು.
ಈ ವರದಿ ಓದಿದ್ದೀರಾ? ಹಾವೇರಿ | ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಪಠಾಣ್ ಮೇಲೆ ಯಾವುದೇ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಸ್ಪಷ್ಟನೆ
ಐ.ಕ್ಯೂ.ಎ.ಸಿ ಸಂಯೋಜಕ ಡಾ. ಎನ್.ಬಿ .ನಾಲತವಾಡ ವೇದಿಕೆಯ ಮೇಲಿದ್ದರು. ಡಾ.ಎನ್.ವಿ.ಗುದಗನವರ್, ಡಾ. ಆಸ್ಮಾ ನಾಜ್ ಬಳ್ಳಾರಿ, ಡಾ. ಐ.ಎ ಮುಲ್ಲಾ, ಡಾ. ಸೈಯದ್ ತಾಜುನ್ನೆಸಾ, ದಿನಾಚರಣೆ ಸಮಿತಿ ಅದ್ಯಕ್ಷೆ ಡಾ. ಸೌಭಾಗ್ಯ ಜಾದವ್ ಹಾಗೂ ಶಿಕ್ಷಣ ವಿಭಾಗದ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕುಮಾರಿ ಮಬುನ್ನಿ ದಫೆದಾರ್ ಕಾರ್ಯಕ್ರಮ ನಿರೂಪಿಸಿದರು.