ಯಾದಗಿರಿ ಜಿಲ್ಲೆಯ ಉಕ್ಕಿನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಹಾರಣಗೇರಾ ಗ್ರಾಮಕ್ಕೆ ನರೇಗಾ 15 ನೇ ಹಣಕಾಸು ಯಾವುದೇ ಅನುದಾನ ನೀಡಬಾರದೆಂದು ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಮಿತಿ ಯಾದಗಿರಿ ವತಿಯಿಂದ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿಗಳು ಯಾದಗಿರಿ ಇವರಿಗೆ ಮನವಿ ಪತ್ರ ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿ ದಸಂಸ ಮುಖಂಡ ರಾಯಪ್ಪ ಸಾಲಿಮನಿ ಮಾತನಾಡಿ, “ಉಕ್ಕಿನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಹಾರಣಗೇರಾ ಗ್ರಾಮಕ್ಕೆ ಸಾರ್ವಜನಿಕ ಕಾಮಗಾರಿಗಳು ಸುಮಾರು ಮೂರು ವರ್ಷಗಳಿಂದ ನರೇಗಾ ಯೋಜನೆಯಡಿಯಲ್ಲಿ ಹಾಗೂ 15ನೇ ಹಣಕಾಸು ಯೋಜನೆಯಡಿಯಲ್ಲಿ ಈ ಕಾಮಗಾರಿಗಳಾದ ಚರಂಡಿ, ಸಿ.ಸಿ ರಸ್ತೆ, ಕ್ಷೇತ್ರ ಬದು, ಕೃಷಿ ಹೊಂಡ, ದನದ ಕೊಟ್ಟಿಗೆ, ಎರೆಹುಳ ಘಟಕ, ಮಲ್ಟಿರ್ ಚೆಕ್ ಡ್ಯಾಂ, ನಮ್ಮ ಹೊಲ ನಮ್ಮ ರಸ್ತೆ ಇವು ಯಾವುವು ಮೂರು ವರ್ಷಗಳಿಂದ ಕಾಮಗಾರಿಗಳು ಆಗಿರುವುದಿಲ್ಲ, ಮುಂದೆಯೂ ಸಹ ನರೇಗಾ ಮತ್ತು 15 ನೇ ಹಣಕಾಸು ಯೋಜನೆ ಹಣ ಬಳಕೆ ಆಗಬಾರದು” ಎಂದು ತಿಳಿಸಿದರು.

“ಆದ್ದರಿಂದ ಪಂಚಾಯತಿಯಲ್ಲಿ ನಮ್ಮೂರು ಹಾರಣಗೇರ ಗ್ರಾಮಕ್ಕೆ ಯಾವುದೇ ಅನುದಾನ ನೀಡಬಾರದು. ಒಂದು ವೇಳೆ ಕಾಮಗಾರಿಗಳು ನಿರ್ವಹಿಸಿದ್ದರೆ ಅವರ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಮರಳಿ ಸರ್ಕಾರಕ್ಕೆ ಹಣವನ್ನು ಸಂದಾಯ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ವತಿಯಿಂದ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶ್ವನಾಥ ನಾಟ್ಟೇಕರ್, ಅಯ್ಯಪ್ಪ ಇನ್ನಿತರರು ಉಪಸ್ಥಿತರಿದ್ದರು.
