ಉತ್ತರ ಕನ್ನಡ | ಅನಾಥ ರಕ್ಷಕರ ಮೇಲೆ ಹಲ್ಲೆ, ಕೊಲೆ ಯತ್ನ : ತನಿಖೆಗೆ ಆಗ್ರಹ

Date:

Advertisements

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಮುಗದೂರು ಪುನೀತ್ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮದ ಮುಖ್ಯಸ್ಥ ನಾಗರಾಜ ನಾಯ್ಕ ಮೇಲೆ ಇಸ್ಪೇಟ್ ಆಡಿಸುವ ಮಾಲೀಕರಿಂದ ಅನಾಥಾಶ್ರಮದ ಸಮೀಪ ಇಸ್ಪಿಟ್ ಆಟವನ್ನು ವಿರೋಧಿಸಿದ್ದಕ್ಕೆ ದೈಹಿಕ ಹಲ್ಲೆ ಮತ್ತು ಕೊಲೆಯತ್ನ ಮಾಡಿರುವ ಘಟನೆ ಕಳೆದ 40ದಿನಗಳ ಹಿಂದೆ ನಡೆದಿದ್ದು, ಇಸ್ಪೀಟ ಆಟ ನಡೆಸುವ ಮತ್ತು ಹಲ್ಲೆಗೈದವರು ಬಿಜೆಪಿ ಮುಖಂಡರೆಂದು ಹೇಳಲಾಗಿದೆ. ಹಲ್ಲೆಗೊಳಗಾದ‌ ನಾಗರಾಜ್ ನಾಯ್ಕ ಈ ಕೊಲೆಯತ್ನ ಪ್ರಕರಣವನ್ನು ಸಿಬಿಐ ಅಥವಾ ಸಿಒಡಿ ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದರು.

ಈ ಕುರಿತು ಈದಿನ.ಕಾಮ್ ಜೊತೆಗೆ ನಾಗರಾಜ್ ನಾಯ್ಕ ಮಾತನಾಡಿ, ಹಲವು ವರ್ಷಗಳಿಂದ ಅನಾಥಾಶ್ರಮ ನಡೆಸುತ್ತಿದ್ದು, ಮಾಸ ಪತ್ರಿಕೆಯ ಸಂಪಾದಕರಾಗಿಯು ಕಾರ್ಯೊನ್ಮುಖ ಆಗಿದ್ದೇನೆ. ಮತ್ತು ಹಲವು ಸಂಘಟನೆಗಳಲ್ಲಿ ಮಯಖ್ಯ ಪಾತ್ರವಹಿಸಿದ್ದೇನೆ. ಹೀಗಿರುವ ನನ್ನ ಮೇಲೆ ಕಳೆದ ಅಕ್ಟೋಬರ್ 9ರಂದು ಸಿದ್ದಾಪುರ ತಾಲೂಕು ಆಸ್ಪತ್ರೆ ಮುಂಭಾಗದಲ್ಲಿ ಇಸ್ಪೀಟ್ ಎಂಬ ಅಕ್ರಮ ಚಟುವಟಿಕೆ ನಡೆಸುವ ದುಷ್ಕರ್ಮಿಗಳ ತಂಡ ನನ್ನ ಮೇಲೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದರು. ಮತ್ತು ಒಂಭತ್ತು ತಿಂಗಳ ತುಂಬು ಗರ್ಭಿಣಿಯಾದ ನನ್ನ ಪತ್ನಿಯ ಮೇಲೆಯೂ ಹಲ್ಲೆಗೈದು, ಮಾನಭಂಗಕ್ಕೆ ಯತ್ನಿಸಿದ್ದಾರೆ. ನನ್ನ ಎರಡು ವರ್ಷದ ಮಗನ ಮೇಲೆ ಹಾಗೂ ಆಶ್ರಮ ವಾಸಿಗಳ ಮೇಲೆ ಹಲ್ಲೆ ನಡೆಸಿ, ಕೊಲೆ ಪ್ರಯತ್ನ ನಡೆಸಿ, ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಎಂದು ತನ್ಮ ಅಳಲನ್ನು ತೋಡಿಕೊಂಡರು.

ನಮ್ಮ ಮೇಲಿನ ಅಪಪ್ರಚಾರ, ಹಲ್ಲೆ, ಕೊಲೆಯತ್ನ, ದೌರ್ಜನ್ಯ ಮತ್ತು ಬೆದರಿಕೆಗಳಿಂದ ಭಯ ಮತ್ತು ಅವಮಾನ ಉಂಟಾಗಿದೆ. ಇದರಿಂದಾಗಿ ನಮಗೆ ಆಶ್ರಮ ನಡೆಸಲು ಹಾಗೂ ಬದುಕಲು ಸಾಧ್ಯವಾಗುತ್ತಿಲ್ಲ. ಪೋಲಿಸರಿಗೆ ದೂರು ಸಲ್ಲಿಸಿ 40 ದಿನ ಕಳೆಯಿತು. ಆರೋಪಿಗಳು ರಾಜಾರೋಷವಾಗಿ ತಿರುಗಾಡುತ್ತಿದ್ದು, ಪ್ರಭಾವಿ ವ್ಯಕ್ತಿಗಳು ಆರೋಪಿಗಳ ರಕ್ಷಣೆಗೆ ನಿಂತಿದ್ದಾರೆ. ಆದ್ದರಿಂದ ಪೋಲೀಸರು ಆರೋಪಿಗಳನ್ನು ಬಂಧಿಸಲು ಹಿಂದೇಟು ಹಾಕುತ್ತಿದ್ದಾರೆ.

Advertisements

ಘಟನೆ ನಡೆದ ಸ್ಥಳ ಸರಕಾರಿ ಆಸ್ಪತ್ರೆ ಯಾಗಿದ್ದರು ಕೂಡ ತಾಂತ್ರಿಕ ದೋಷದಿಂದ ಸಿಸಿ ಕ್ಯಾಮರಾ ವಿಡಿಯೋ ರೆಕಾರ್ಡ್ ಆಗಿಲ್ಲವೆಂದು ಹೇಳುತ್ತಿದ್ದು, ಆರೋಪಿಗಳಿಗೆ ಸಹಕರಿಸುತ್ತಿರುವ ಸಂಶಯವಿದೆ. ಹೀಗಾಗಿ ನಮ್ಮ ಕೊಲೆ ಯತ್ನ ಹಾಗೂ ಹಲ್ಲೆ ಪ್ರಕರಣವನ್ನು ಸಿಬಿಐ ಅಥವಾ ಸಿಒಡಿ ತನಿಖೆಗೆ ಒಪ್ಪಿಸಿ ನ್ಯಾಯ ಕೊಡಿಸಬೇಕು. ಹಲ್ಲೆ ಆರೋಪಿಗಳ ಬಂಧನ ಹಾಗೂ ಸಿ.ಸಿ. ಕ್ಯಾಮರಾ ಪುಟೇಜ್ ನೀಡದ ಆಸ್ಪತ್ರೆ ಅಧಿಕಾರಿಗಳ ಮೇಲೆ ಒಂದು ವಾರದಲ್ಲಿ ಕ್ರಮಕೈಗೊಳ್ಳಬೇಕು. ಈ ಕ್ರಮಕ್ಕೆ ಒಂದು ವಾರದ ಗಡುವು ನೀಡಲಾಗಿದ್ದು, ನ್ಯಾಯ ಸಿಗದಿದ್ದರೆ, ಹಲ್ಲೆ ನಡೆದ 50ನೇ ದಿನಕ್ಕೆ ಸರಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಸಿದರು.

ಈ ವರದಿ ಓದಿದ್ದೀರಾ? ಧಾರವಾಡ | ಪಾರ್ಕಿಂಗ್ ವಿಚಾರಕ್ಕೆ ಪೋಲಿಸ್ ಮೇಲೆ ಹಲ್ಲೆ: ಮೂವರ ಬಂಧನ

ಈ ಸಂದರ್ಭದಲ್ಲಿ ಪುನೀತ್ ರಾಜಕುಮಾರ ಆಶ್ರಯಧಾಮ ಅನಾಥಾಶ್ರಮದ ಮಮತಾ ನಾಯ್ಕ, ಹಾಗೂ ಘಟನೆ ನಡೆದ ಸಂದರ್ಭದಲ್ಲಿ ನಾಗರಾಜ ನಾಯ್ಕ’ರ ಜೊತೆಗಿದ್ದ ಆಶ್ರಮವಾಸಿಗಳು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X