ಮುಂಡರಗಿ ಪಟ್ಟಣದ ಕೊಪ್ಪಳ ಕ್ರಾಸ್‌ನಲ್ಲಿ ಆಟೋಗಳನ್ನು ನಿಲ್ಲುವಷ್ಟು ಆಟೋ ಸ್ಟ್ಯಾಂಡ್ ಕಲ್ಪಿಸಿ, ನಮಗೆ ಯಾರು ತಂಟೆ ತಕರಾರು ಮಾಡದಂತೆ ನಮಗೆ ಆಟೋ ಚಲಾಯಿಸಿಕೊಂಡು ನಮ್ಮ ಬದುಕನ್ನು ನಡೆಸಲು ಅನುಕೂಲ ಮಾಡಿಕೊಡಬೇಕೆಂದು ಯಂಗ್ ಇಂಡಿಯಾ ಆಟೋ ಚಾಲಕರ ಸಂಘದ ಅಧ್ಯಕ್ಷ ರಾಜೇಸಾಬ್ ಮುಲ್ಲಾ ಮನವಿ ಮಾಡಿದರು.
ಯಂಗ್ ಇಂಡಿಯಾ ಪರಿವಾರ ಆಟೋ ಚಾಲಕರು ಮತ್ತು ಮಾಲಕರ ಸಂಘವು ಆಟೋ ಚಾಲಕರಿಗೆ ಆಟೋ ಸ್ಟ್ಯಾಂಡ್ ವ್ಯವಸ್ಥೆ ಕಲ್ಪಿಸುವಂತೆ ಗದಗ ಜಿಲ್ಲೆಯ ಮುಂಡರಗಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿ ಅವರು ಮಾತನಾಡಿದರು.
ಸುಮಾರು ಪಟ್ಟಣದಲ್ಲಿ 40-45 ಆಟೋ ವಾಹನ ಚಾಲಕರು ಆಟೋ ವಾಹನವನ್ನು ಚಲಾಯಿಸುತ್ತಾ ನಮ್ಮ ಜೀವನವನ್ನು ನಡೆಸಿಕೊಂಡು ಬಂದಿದ್ದೇವೆ. ನಗರದಲ್ಲಿ ಒಟ್ಟು 45 ಕುಟುಂಬದವರು ಆಟೋ ದುಡಿಮೆಯ ಮೇಲೆ ನಮ್ಮ ಬದುಕು ಅವಲಂಬನೆಯಾಗಿರುತ್ತದೆ. ಸುಮಾರು 20-25 ವರ್ಷಗಳಿಂದ ಆಟೋ ವಾಹನವನ್ನು ಮುಂಡರಗಿ ಪಟ್ಟಣದ ಕೊಪ್ಪಳ ಕ್ರಾಸ್‌ನಲ್ಲಿ ಹಚ್ಚಿ ಓಡಿಸುತ್ತಾ ಬಂದಿರುತ್ತೇವೆ. ಈಗ ನಾವು ವಾಹನವನ್ನು ಹಚ್ಚುವ ಸ್ಥಳದಲ್ಲಿ ಬೃಹತ್ ಕಟ್ಟಡ ನಿರ್ಮಾಣವಾಗಿದ್ದು, ನಮ್ಮ ವಾಹನವನ್ನು ನಿಲ್ಲಲು ಬಿಡುತ್ತಿಲ್ಲ” ರಾಜೇಸಾಬ್ ಮುಲ್ಲಾ ಹೇಳಿದರು.

ಇದರಿಂದ ನಮಗೆ ವಾಹನವನ್ನು ನಿಲ್ಲಿಸಲು ಕೊಪ್ಪಳ ಕ್ರಾಸ್‌ನಲ್ಲಿ ಎಲ್ಲಿಯೋ ಜಾಗ ಇಲ್ಲದಂತಾಗಿದೆ. ಕೊಪ್ಪಳ ಕ್ರಾಸಿನಲ್ಲಿಯೇ ಎರಡು ಆಟೋ ವಾಹನಗಳನ್ನು ನಿಲ್ಲುವಷ್ಟು ಆಟೋ ಸ್ಟ್ಯಾಂಡ್ ಅನ್ನು ನಿರ್ಮಿಸುವ ಮೂಲಕ ಅವಕಾಶ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಮರಕುಂಬಿ ಪ್ರಕರಣ | ಜೀವಾವಧಿ ಶಿಕ್ಷೆಗೊಳಗಾಗಿದ್ದ 98 ಅಪರಾಧಿಗಳ ಪೈಕಿ 97 ಜನರಿಗೆ ಹೈಕೋರ್ಟ್ ಜಾಮೀನು
ಮಾಜಿ ಪುರಸಭೆ ಸದಸ್ಯ ಸಂತೋಷ ಹಿರೇಮನಿ ಮಾತನಾಡಿ, “ಆಟೋ ಚಾಲಕರು ಸುಮಾರು ಇಪ್ಪತೈದು ವರ್ಷಗಳಿಂದ ಮುಂಡರಗಿ ಪಟ್ಟಣದ ಕೊಪ್ಪಳ ಕ್ರಾಸ್ ಬಳಿ ಆಟೋ ನಿಲ್ಲಿಸುತ್ತಾ ಬಂದಿದ್ದಾರೆ. ಈಗ ಆಟೋ ಚಾಲಕರಿಗೆ ಆಟೋ ಹಚ್ಚಬೇಡಿ ಎಂದರೆ ಸರಿಯೇ? ಈ ಆಟೋಗಳಿಂದಲೇ ಅವರ ಜೀವನ ನಡೆಯುತ್ತಿದೆ. ಕೂಡಲೇ ಆಟೋ ಸ್ಟಾಂಡ್ ನಿರ್ಮಿಸಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯಂಗ್ ಇಂಡಿಯಾ ಪರಿವಾರ ಆಟೋ ಚಾಲಕರು ಮತ್ತು ಮಾಲಕರ ಸಂಘ (ರಿ) ಮುಂಡರಗಿ ಸರ್ವ ಸದಸ್ಯರು ಉಪಸ್ಥಿತರಿದ್ದರು.