ಶಿವಮೊಗ್ಗ ಜಿಲ್ಲೆಯ ಸರ್ಕಾರಿ ನೌಕರರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಹಾಗೂ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳು ಸಚಿವ ಎಸ್ ಮಧು ಬಂಗಾರಪ್ಪ ಅವರನ್ನು ಬೆಂಗಳೂರಿನ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಮಾರ್ಗದರ್ಶನ ಹಾಗೂ ಸಹಕಾರ ನೀಡುವಂತೆ ಒತ್ತಾಯಿಸಿದರು.
“ಉಳಿದ ನಿರ್ದೇಶಕರ ಸ್ಥಾನಕ್ಕೆ ನಿಮ್ಮ ಮಾರ್ಗದರ್ಶನ ಹಾಗೂ ಸಹಕಾರದಲ್ಲಿ ಒಗ್ಗಟ್ಟಿನಿಂದ ಚುನಾವಣೆ ನಡೆಸಿ ಪರಸ್ಪರ ಒಮ್ಮತದಿಂದ ಒಂದು ತಂಡವಾಗಿ ಕಾರ್ಯ ನಿರ್ವಹಿಸಿ, ತಮ್ಮ ಮಾರ್ಗದರ್ಶನದಂತೆ ಸರ್ಕಾರಿ ನೌಕರರ ಶ್ರೇಯೋಭಿವೃದ್ಧಿಗೆ ಯಾವುದೇ ಗುಂಪುಗಾರಿಕೆಯಿಲ್ಲದೆ ನ್ಯಾಯ ಸಮ್ಮತವಾಗಿ ಕೆಲಸ ನಿರ್ವಹಿಸುತ್ತೇವೆ” ಎಂದು ಭರವಸೆ ನೀಡಿದರು.
“ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರಿಗೆ ಶುಭ ಹಾರೈಸಿ, ಉಳಿದ 28 ಕ್ಷೇತ್ರಗಳ ಗೆಲುವಿಗೆ ಒಗ್ಗಟ್ಟಿನಿಂದ ಒಂದು ತಂಡವಾಗಿ ಕಾರ್ಯ ನಿರ್ವಹಿಸಿ ಎಲ್ಲರನ್ನು ಗೆಲ್ಲಿಸುವ ಮೂಲಕ ತಂಡಕ್ಕೆ ಇನ್ನಷ್ಟು ಶಕ್ತಿ ತುಂಬುವಂತೆ ಶ್ರಮವಹಿಸಿ” ಎಂದು ಸಚಿವರು ಸೂಚಿಸಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಮಾಜಿ ಸಿಎಂ ನಿಜಲಿಂಗಪ್ಪ ಅವರ ಮನೆ ಖರೀದಿ; ಸರ್ಕಾರದಿಂದ 5 ಕೋಟಿ ರೂ. ಮಂಜೂರು
ಸರ್ಕಾರಿ ನೌಕರರ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುವ ಹಾಗೂ ಚುನಾವಣೆ ಕಣದಲ್ಲಿರುವ ಅಭ್ಯರ್ಥಿಗಳಾದ ಆರ್ ಮೋಹನ್ ಕುಮಾರ್, ಜಿ ಹೆಚ್ ಸತ್ಯನಾರಾಯಣ, ಹನುಮ ನಾಯ್ಕ, ರಘುರಾಮ್ ದೇವಾಡಿಗ ಸೇರಿದಂತೆ ಎಸ್ ವೈ ರಮೇಶ್, ಚಿನ್ನಪ್ಪ, ಅಂತೋಣಿ ರಾಜು, ವಿ ಲಕ್ಷ್ಮಣ, ಸಿ ರವಿ, ರಾಮು, ಪಾಪಣ್ಣ, ಗಜಾನನ, ಕೃಷ್ಣಾ ರೆಡ್ಡಿ, ಅವಿನ್, ನರಸಿಂಹ ಮೂರ್ತಿ, ನಾಗರಾಜ್ ಇದ್ದರು.