ರಾಯಚೂರು ನಗರದ ಹೊರವಲಯದ ಸಿದ್ರಾಂಪುರ ಕೆರೆಯಲ್ಲಿ ಕುದುರೆಯ ಮೈ ತೊಳೆಯಲೆಂದು ಹೋಗಿದ್ದ ವೇಳೆ ಯುವಕನೋರ್ವ ನೀರುಪಾಲಾಗಿರುವ ಘಟನೆ ನಡೆದಿದೆ.
ನಗರದ ಜಹೀರಾಬಾದ್ ನಿವಾಸಿ ಅಜೀಂ (22 ವರ್ಷ) ಕೆರೆಯಲ್ಲಿ ನಾಪತ್ತೆಯಾಗಿರುವ ಯುವಕ ಎಂದು ಗುರುತಿಸಲಾಗಿದೆ.
ಅಜೀಂಗಾಗಿ ಕೆರೆಯಲ್ಲಿ ಪೊಲೀಸರು, ಅಗ್ನಿಶಾಮಕ ಮತ್ತು ತುರ್ತು ಸೇವೆಯ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ನಿನ್ನೆ ಸಂಜೆಯಿಂದ ಯುವಕ ನಾಪತ್ತೆಯಾಗಿದ್ದಾನೆ. ಕುದುರೆ ಮಾತ್ರ ಕೆರೆಯದಡದಲ್ಲಿ ಇದ್ದಿದ್ದರಿಂದ ಘಟನೆ ಬೆಳಕಿಗೆ ಬಂದಿದೆ.
ಇದನ್ನು ಓದಿದ್ದೀರಾ? ಮರಕುಂಬಿ ಪ್ರಕರಣ | ಜೀವಾವಧಿ ಶಿಕ್ಷೆಗೊಳಗಾಗಿದ್ದ 98 ಅಪರಾಧಿಗಳ ಪೈಕಿ 97 ಜನರಿಗೆ ಹೈಕೋರ್ಟ್ ಜಾಮೀನು
ರಾಯಚೂರಿನ ನೇತಾಜಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಯುವಕನ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿರುವುದಾಗಿ ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
