ವಿದ್ಯೆಯೆಂಬುದು ಯಾರ ಸ್ವತ್ತೂ ಅಲ್ಲ. ನಮ್ಮ ಜೀವನ ರೂಪಿಸಿಕೊಳ್ಳುವ ಶಿಲ್ಪಿಗಳು ನಾವೇ ಆಗಬೇಕು, ಅದಕ್ಕಿರುವ ದಾರಿ ಶಿಕ್ಷಣವೊಂದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮೈಸೂರು ಜಿಲ್ಲೆಯ ಹೆಗ್ಗಡ ದೇವನಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ₹443 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಕಳೆದ ದಿನ ಶಂಕುಸ್ಥಾಪನೆ, ಕೃಷಿ ಸಲಕರಣೆ ವಿತರಣೆ ಹಾಗೂ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
“ಶೂದ್ರ ವರ್ಗದ ಜನ ವಿದ್ಯೆ ಕಲಿಯುವುದು ನಿಷಿದ್ಧವಾಗಿದ್ದ ಕಾಲದಲ್ಲಿ ವಿದ್ಯೆ ಕಲಿತು, ಸಂಸ್ಕೃತವನ್ನು ಕಲಿತು ರಾಮಾಯಣ ರಚಿಸಿದ್ದು ಮಹರ್ಷಿ ವಾಲ್ಮೀಕಿ. ರಾಮಾಯಣ ಬರೆದ ವಾಲ್ಮೀಕಿ ಬೇಡ ಸಮುದಾಯದವರು, ಮಹಾಭಾರತ ಬರೆದವರು ಬೆಸ್ತ ಸಮುದಾಯದವರು, ಶಕುಂತಲಾ ಬರೆದ ಕಾಳಿದಾಸ ಕುರುಬ ಸಮುದಾಯದವರು. ಹಾಗಾಗಿ ಇಲ್ಲಿ ವಿದ್ಯೆಯೇ ಮುಖ್ಯವೆಂಬುದನ್ನು ಮನಗಾಣಬೇಕು” ಎಂದು ಹೇಳಿದರು.
ಈ ಸುದ್ದೆಇ ಓದಿದ್ದೀರಾ? ಮೈಸೂರು | ಕೆರೆಹಾಡಿಗೆ ಸಿಎಂ ಸಿದ್ದರಾಮಯ್ಯ ಭೇಟಿ; ಆದಿವಾಸಿಗಳ ನಿಗಮ ಸ್ಥಾಪನೆ ಭರವಸೆ
“ಶೂದ್ರ ಜಾತಿಯ ಕನಕದಾಸರು ದಾಸ ಶ್ರೇಷ್ಠರಲ್ಲವೇ, ವಿದ್ಯಾವಂತರಾಗಲು ಜಾತಿ ಅಡ್ಡ ಬರುವುದಿಲ್ಲ. ಮೇಲ್ವರ್ಗದ ಜನಕ್ಕೆ ಮಾತ್ರ ವಿದ್ಯೆ ಸಿದ್ಧಿಸುತ್ತೆ ಎನ್ನುವ ಮೌಢ್ಯದಿಂದ ಹೊರಬರಬೇಕು. ಇದನ್ನು ಬಿತ್ತಿದ ಆದೇ ಜನರ ಮುಂದೆ ವಿದ್ಯಾವಂತರಾಗಿ ನಿಲ್ಲಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ, ಸಂಸದ ಸುನಿಲ್ ಬೋಸ್, ಶಾಸಕ ಅನಿಲ್ ಚಿಕ್ಕಮಾದು, ಎಂಎಲ್‌ಸಿ ತಿಮ್ಮಯ್ಯ ಸೇರಿದಂತೆ ಪ್ರಮುಖರು ಇದ್ದರು.