ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಗಿರಿಯಮ್ಮ ಪಾಳ್ಯ ಬಳಿ ಕೆಎಸ್ ಆರ್ ಟಿಸಿ ಬಸ್ ಹರಿದು 6 ಕುರಿಗಳು ಸಾವನೊಪ್ಪಿರುವ ಘಟನೆ ನಡೆದಿದೆ.
ಬೆಂಗಳೂರು-ಪಾವಗಡ ಹೆದ್ದಾರಿಯ ಹೊಸಕೆರೆ ಸಮೀಪದ ಗಿರಿಯಮ್ಮ ಪಾಳ್ಯ ಬಳಿ ಸುಮಾರು 6 ಘಂಟೆ ಸಮಯದಲ್ಲಿ ನಡೆದ ಘಟನೆ ನಡೆದಿದೆ.
ಬೆಂಗಳೂರಿನಿಂದ ಮಧುಗಿರಿ ಮೂಲಕ ಪಾವಗಡ ಕಡೆಗೆ ತೆರಳುತ್ತಿದ್ದ ಕೆಎಸ್ ಆರ್ ಟಿಸಿ (KA57F4484) ಬಸ್ ಹರಿದು ಕುರಿಗಳು ನಡು ರಸ್ತೆಯಲ್ಲಿ ಸಾವನೊಪ್ಪಿವೆ.
ಮೇವಿಗಾಗಿ ಬಯಲಿಗೆ ಹೋಗಿದ್ದ ಕುರಿಗಳು ಸಂಜೆ ಹಿಂದಿರುಗಿ ಕುರಿ ರೊಪ್ಪ ಸೇರಲು ರಸ್ತೆ ಬದಿಯಲ್ಲಿ ಕುರಿಗಾಹಿ ಹೊಡೆದುಕೊಂಡು ಬರುವಾಗ ಈ ಘಟನೆ ಸಂಭವಿಸದೆ.
ಬಸ್ ಹರಿದು ಇನ್ನು ಎರಡು ಕುರಿಗಳು ಮಿಲಮಲ ಒದ್ದಾಡುವುದು ಹಾಗೂ ಸತ್ತ ಕುರಿಗಳ ನೋಡಿ ಅಯ್ಯೋ ಎನಿಸಿ ನೋಡಲಾಗದ ಸ್ಥಿತಿಯ ಕಂಡು ಹೃದಯಭಾರವಾಗಿತು ಎಂದ ತಿಪ್ಪೇಸ್ವಾಮಿ ಬ್ರಹ್ಮದೇವರಹಳ್ಳಿ ಹೇಳಿದ್ದಾರೆ.
ಕುರಿಗಳ ಸಾವಿನಿಂದ ಕುರಿಗಾಹಿಗಳು ಕಣ್ಣೀರು ಹಾಕಿದರು.ಘಟನೆ ನಡೆದ ಸ್ಥಳಕ್ಕೆ ಜನ ಜಮಾಯಿಸಿದ್ದರು.ಕುರಿ ಮೇಲೆ ಹತ್ತಿ ಬಸ್ಸು ಅಲ್ಲಿಯೇ ನಿಲ್ಲಿಸಿ ಪ್ರಯಾಣಿಕರನ್ನು ಮತ್ತೊಂದು ಬಸ್ಸುಗೆ ಹತ್ತಿಸಿ ವ್ಯವಸ್ಥೆ ಕಲ್ಪಿಸಲಾಯಿತು.
