ನೇಕಾರಿಕೆ ದೇವಲ ಮಹರ್ಷಿಗಳು ಸಮಾಜಕ್ಕೆ ನೀಡಿದ ಕೊಡುಗೆ ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುವ ಸವಾಲು ನೇಕಾರರ ಮುಂದಿದೆ. ನೇಕಾರರ ಅಭಿವೃದ್ಧಿಗಾಗಿ ಶೀಘ್ರದಲ್ಲಿ ಜವಳಿ ಪಾರ್ಕ್ ಆರಂಭಿಸಲಾಗುವುದು ಎಂದು ಹುನಗುಂದ ಶಾಸಕರಾದ ವಿಜಯಾನಂದ ಕಾಶಪ್ಪನವರ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಇಳಕಲ್ ನಾ ಶಂಕರಿ ರಾಮಲಿಂಗ ದೇವಸ್ಥಾನದ ಆವರಣದಲ್ಲಿ ದೇವಾಂಗ ಸಂಘ ಹಾಗೂ ದೇವಲ ಮಹರ್ಷಿಗಳ ಜಯಂತ್ಯುತ್ಸವದ ನಿಮಿತ್ತ ಆಯೋಜಿಸಲಾಗಿದ್ದ ದೇವಾಂಗ ಪುರಾಣದ ಸಮಾರೋಪ ಹಾಗೂ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇವಾಂಗ ಜಗದ್ಗುರುಗಳ ಅಣತಿಯಂತೆ ಕೂಡಲಸಂಗಮದಲ್ಲಿ ಜನವರಿ ತಿಂಗಳ ಕೊನೆಯ ವಾರದಲ್ಲಿ ರಾಜ್ಯಮಟ್ಟದ ನೇಕಾರ ಸಮಾವೇಶ ಆಯೋಜಿಸಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಚಿವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.

ಪುರಸ್ಕೃತ ಗುರುದಾಸ ನಾಗಲೋಟಿ ಮಾತನಾಡಿ, ಇಳಕಲ್ ಸೀರೆ ಇಂದಿಗೂ ತನ್ನ ಖ್ಯಾತಿ ಉಳಿಸಿಕೊಂಡಿದೆ. ಮಹಿಳೆಯರು ಮೂಲಕವೂ ಆನ್‌ಲೈನ್ ಖರೀದಿಸುತ್ತಿದ್ದಾರೆ. ದೇವಾಂಗ ಸಮಾಜದ ಯುವಕರು ನೇಕಾರಿಕೆಯಲ್ಲಿ ಶ್ರಮ ವಹಿಸಿ ಕೆಲಸ ಮಾಡಿದರೆ ನೌಕರಿಗಿಂತಲೂ ಹೆಚ್ಚು ಸಂಪಾದಿಸಬಹುದು ಎಂದು ಹೇಳಿದರು.
ಬಾಗಲಕೋಟೆ ಜಿಲ್ಲಾ ದೇವಾಂಗ ನೌಕರ ಸಂಘದ ಅಧ್ಯಕ್ಷ ಬಸವರಾಜ ಕುದರಿ ಅವರು ನೇಕಾರಿಕೆಯ ಸ್ಥಿತಿಗತಿ, ಜಾಗತೀಕರಣವು ನೇಕಾರರ ಜೀವನದ ಮೇಲೆ ಉಂಟು ಮಾಡಿದ ದುಷ್ಪರಿಣಾಮ ಹಾಗೂ ಪರಿಹಾರೋಪಾಯ ಕುರಿತು ಉಪನ್ಯಾಸ ನೀಡಿದರು.
ಹಂಪಿ ಹೇಮಕೂಟ ಗಾಯತ್ರಿ ಸಾನ್ನಿಧ್ಯ ವಹಿಸಿದ್ದರು. ಪೀಠದ ದಯಾನಂದಪುರಿ ಮಾತನಾಡಿದರು. ಬಡವರಿಗೆ ವಸ್ತ್ರ ವಿತರಿಸಲಾಯಿತು.
ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ಪಡೆದ ನೀಲಕಂಠ ಕಾಳಗಿ, ಸಿದ್ದಪ್ಪ ಮಾದರ (ಸಿತಿಮಾ). ಸುನಂದಾ ಕಂದಗಲ್ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು.
ಇದನ್ನು ಓದಿದ್ದೀರಾ? ಮೈಸೂರು | ನ.15 ರಿಂದ 25ರವರೆಗೆ ರೈತ, ಕಾರ್ಮಿಕ ವಿರೋಧಿ ಕಾಯ್ದೆ ವಿರೋಧಿಸಿ ಪ್ರತಿಭಟನೆ: ಬಡಗಲಪುರ ನಾಗೇಂದ್ರ
ಮುನಿಸ್ವಾಮಿಗಳು ದೇವಾಂಗಮಠ, ದೇವಾಂಗ ಅಧ್ಯಕ್ಷ ಅಶೋಕ ಬಿಜ್ಜಲ್, ಬಾಗಲಕೋಟ ಜಿಲ್ಲಾ ದೇವಾಂಗ ಸಮಾಜದ ಅಧ್ಯಕ್ಷ ಸತೀಶ ಸಪ್ಪರದ, ಉತ್ಸವ ಸಮಿತಿ ಅಧ್ಯಕ್ಷ ಅಮೃತ್ ಬಿಜ್ಜಲ್, ಗಾಯತ್ರಿ , ಮಹಿಳಾ ಮಂಡಳದ ಅಧ್ಯಕ್ಷೆ ಲಲಿತಾಬಾಯಿ ಸಪ್ಪರದ, 4 ದೇವಾಂಗ ಪೇಟೆಗಳ ಅಧ್ಯಕ್ಷರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
