ಮರದ ಕೆಳಗೆ ನಿಂತಾಗ ಸಿಡಿಲು ಬಡಿದು ಯುವಕ ಮೃತಪಟ್ಟಿರುವ ಘಟನೆ ಹೂವಿನಹಡಗಲಿ ತಾಲ್ಲೂಕಿನ ಅರಳಿಹಳ್ಳಿ ಗ್ರಾಮದ ಬಳಿ ಗುರುವಾರ ಸಂಜೆ ನಡೆದಿದೆ.
ಮಾನ್ಯರಮಸವಾಡ ಗ್ರಾಮದ ಸಂಜು ತೋಟಣ್ಣನವರ (26) ಮೃತ ಯುವಕ. ತಾಲೂಕಿನ ಹೊಸಳ್ಳಿ ಗ್ರಾಮದ ಸಂಬಂಧಿಕರ ಮನೆಗೆ ತೆರಳಿ ವಾಪಸ್ ಬೈಕ್‌ನಲ್ಲಿ ಊರಿಗೆ ಬರುವ ವೇಳೆ ಮಳೆ ಪ್ರಾರಂಭವಾಗಿತ್ತು. ಅರಳಿಹಳ್ಳಿ ಸಮೀಪ ಬೈಕ್ ನಿಲ್ಲಿಸಿ ಮರದ ಕೆಳಗೆ ನಿಂತ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಈ ಸುದ್ದಿ ಓದಿದ್ದೀರಾ? 2025ನೇ ವರ್ಷದ ಸಾರ್ವತ್ರಿಕ ರಜಾ ಪಟ್ಟಿ ಪ್ರಕಟ
ಈ ಕುರಿತು ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.