ಬಾಗೇಪಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಆರ್.ಹನುಮಂತರೆಡ್ಡಿ 5ನೇ ಬಾರಿಗೆ ಅವಿರೋಧವಾಗಿ ಆಯ್ಕಾಗಿದ್ದಾರೆ.
ಮಂಗಳವಾರ ನಡೆದ ಬಾಗೇಪಲ್ಲಿ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಆರ್.ಹನುಮಂತ ರೆಡ್ಡಿ ಮತ್ತು ಸಂಘದ ಹಾಲಿ ಅಧ್ಯಕ್ಷ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ನಾಮಪತ್ರ ಸಲ್ಲಿಸಿದ್ದರು.
ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ ನಾಮಪತ್ರ ವಾಪಾಸ್ ಪಡೆದ ಹಿನ್ನೆಲೆ ಆರ್.ಹನುಮಂತರೆಡ್ಡಿ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿ ಆರ್.ವೆಂಕಟರಾಮಪ್ಪ ಅವಿರೋಧ ಆಯ್ಕೆಯ ಕುರಿತು ಘೋಷಣೆ ಮಾಡಿದರು.
ಕಳೆದ ಅವಧಿ ಹೊರತುಪಡಿಸಿ, ಈ ಹಿಂದೆ 4 ಬಾರಿ ಅಧ್ಯಕ್ಷರಾಗಿದ್ದ ಆರ್.ಹನುಮಂತರೆಡ್ಡಿ, ಇದೀಗ 5ನೇ ಬಾರಿಗೆ ಅವಿರೋಧ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ.
ಇದನ್ನೂ ಓದಿ : ಬಾಗೇಪಲ್ಲಿ | ಕೃಷಿ ಅಭಿವೃದ್ಧಿಯಲ್ಲಿ ಸಹಕಾರಿ ಸಂಘಗಳು ನಿರ್ಣಾಯಕ ಪಾತ್ರವಹಿಸಬೇಕು; ಹೆಚ್.ವಿ.ನಾಗರಾಜು
ರಾಜ್ಯ ಪರಿಷತ್ ಸ್ಥಾನಕ್ಕೆ ಶಿಕ್ಷಣ ಇಲಾಖೆಯ ರಂಗಾರೆಡ್ಡಿ ಹಾಗೂ ಖಜಾಂಚಿ ಸ್ಥಾನಕ್ಕೆ ಕಂದಾಯ ಇಲಾಖೆಯ ಪ್ರೀತಮ್ ಅವಿರೋಧ ಆಯ್ಕೆಯಾದರು.