ಬೈಕ್ ಸವಾರನ ತಲೆಯ ಮೇಲೆ ಸರ್ಕಾರಿ ಬಸ್ ಹರಿದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆ ರಾಯಚೂರು ತಾಲೂಕಿನ ನೆಲಹಾಳ ಕ್ಯಾಂಪ್ ಬಳಿ ನಡೆದಿದೆ.
ಭೀಮೇಶ (39) ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಸರಕಾರಿ ಬಸ್ ಬೈಕ್ ಸವಾರ ತೆಲೆ ಮೇಲೆ ಹರಿದ ಪರಿಣಾಮಕ್ಕೆ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.
ಇದನ್ನು ಓದಿದ್ದೀರಾ? ಚಿತ್ರದುರ್ಗ | ಭೋವಿ ನಿಗಮ ಬಡವರ ಬದುಕಿಗೆ ಬೆಳಕಾಗಲಿ: ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ
ದಿನ್ನಿಯಿಂದ ನೆಲಹಾಳ ಕ್ಯಾಂಪ್‌ಗೆ ಹೋಗುತ್ತಿದ್ದ ಬಸ್ ವೇಗವಾಗಿ ಚಲಿಸುತ್ತಿತ್ತು, ಇದೇ ವೇಳೆ ನೆಲಹಾಳನಿಂದ ತನ್ನ ಮನೆಗೆ ಬೈಕಿನಲ್ಲಿ ಹೋಗುತ್ತಿದ್ದ ಭೀಮೇಶ ಅವರಿಗೆ ಡಿಕ್ಕಿ ಹೊಡೆದ ಮೇಲೆ ಬಸ್ ಹರಿದು ಘಟನೆ ಸಂಭವಿಸಿದೆ. ಘಟನೆ ಬಳಿಕ ಯರಗೇರಾ ಠಾಣೆ ಪೊಲೀಸರು ಭೇಟಿ ಪರಿಶೀಲಿಸಿದ್ದಾರೆ.
